Advertisement

ನಿವೃತ್ತ ಸೈನಿಕ,ಹಾಕಿ ಆಟಗಾರ ಪೂಣಚ್ಚ ನಿಧನ

10:25 PM Jul 17, 2023 | Team Udayavani |

ಹುಣಸೂರು: ಹಾಕಿ ಆಟಗಾರ, ನಿವೃತ್ತ ಸೈನಿಕ, ಗ್ರಾ.ಪಂ.ಮಾಜಿ ಸದಸ್ಯ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೆ.ಜಿ.ಹಬ್ಬನಕುಪ್ಪೆಯ ನಿವಾಸಿ ಮೂಕಳಮಾಡ ಎಂ.ಪಿ.ಪೂಣಚ್ಚ(61)ಅನಾರೋಗ್ಯದಿಂದಾಗಿ ಸೋಮವಾರ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಇವರಿಗೆ ಪತ್ನಿ, ಒಬ್ಬ ಮಗ, ಮಗಳಿದ್ದಾರೆ. ನಿಧನಕ್ಕೆ ಶಾಸಕರಾದ ಜಿ.ಡಿ.ಹರೀಶ್‌ಗೌಡ, ಜಿ.ಟಿ.ದೇವೇಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಂತ್ಯಕ್ರಿಯೆಯು ಮಂಗಳವಾರ ಸ್ವಗ್ರಾಮ ಕೆ.ಜಿ.ಹಬ್ಬನಕುಪ್ಪೆಯ ಅವರ ಜಮೀನಿನಲ್ಲಿ ಬೆಳಗ್ಗೆ 11 ಕ್ಕೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next