Advertisement

ಪಾಲ್‌ಘರ್‌ : ನಿವೃತ್ತ ತಹಶೀಲ್ದಾರ್‌ಗೆ ಗುಂಡೇಟು; ಶಂಕಾಸ್ಪದ ಸಾವು

11:59 AM Nov 16, 2018 | Team Udayavani |

ಥಾಣೆ : ವಸಾಯಿ ಯ 72ರ ಹರೆಯದ ನಿವೃತ್ತ ತಹಶೀಲ್ದಾರ ಪಂಡರೀನಾಥ ಸಾಂಖೆ ಅವರ,  ಗುಂಡೇಟಿಗೆ ಗುರಿಯಾದ ಮೃತ ದೇಹ ನೆರೆಯ ಪಾಲ್‌ಘರ್‌ ನ ಮಾಸ್ವಾನ್‌ ಪ್ರದೇಶದಲ್ಲಿರುವ ಅವರ ಬಂಗ್ಲೆಯಲ್ಲಿ ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಸಾಂಖೆ ಅವರು ಬೆಳಗ್ಗಿನ ವಾಕಿಂಗ್‌ ಮುಗಿಸಿ ಬಂದಾಗ ಮನೆಯಲ್ಲಿ ಗುಂಡು ಹಾರಿಸಲಾದ ಸದ್ದು ಅವರ ಪತ್ನಿ ಮತ್ತು ಸೆಕ್ಯುರಿಟಿ ಗಾರ್ಡ್‌ಗೆ ಕೇಳಿ ಬಂತು. ಒಡನೆಯೇ ಅವರು ಸ್ಥಳಕ್ಕೆ ಧಾವಿಸಿದಾಗ ಸಾಂಖೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು. 

ಕೂಡಲೇ ಸಾಂಖೆ ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದಾಗಲೇ ಅವರು ಮಡಿದಿರುವುದಾಗಿ ವೈದ್ಯರು ಪ್ರಕಟಿಸಿದರು. ಅಟಾಪ್ಸಿಗಾಗಿ ಸಾಂಖೆ ಅವರ ಮೃತ ದೇಹವನ್ನು ಮುಂಬಯಿಯ ಜೆಜೆ ಆಸ್ಪತ್ರೆಗೆ ಒಯ್ಯಲಾಗಿದೆ. 

ಪೊಲೀಸರು ಇದೊಂದು ಆಕಸ್ಮಿಕ ಸಾವೆಂದು ದಾಖಲಿಸಿಕೊಂಡಿದ್ದಾರೆ. ಆದರೂ ಇತರ ಸಾಧ್ಯತೆಗಳನ್ನು ಕೂಡ ತಾವು ಪರಿಶೀಲಿಸುವುದಾಗಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next