Advertisement

ಮಾರ್ಚ್‌ ಬಳಿಕ ಇದು ಗರಿಷ್ಠ ಇಳಿಕೆ: ಹಣದುಬ್ಬರ ಪ್ರಮಾಣ ಶೇ.6.71

12:22 AM Aug 13, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಜುಲೈಗೆ ಸಂಬಂಧಿಸಿದಂತೆ ಹಣದುಬ್ಬರ ಪ್ರಮಾಣ ಶೇ.6.71ಕ್ಕೆ ಇಳಿಕೆಯಾಗಿದೆ. ಈ ವರ್ಷದ ಮಾರ್ಚ್‌ಗೆ ಹೋಲಿಕೆ ಮಾಡಿದರೆ ಅದರ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

Advertisement

ಆಹಾರ ವಸ್ತುಗಳು, ಅಡುಗೆ ಎಣ್ಣೆ ಸೇರಿದಂತೆ ಸೇರಿದಂತೆ ಕೆಲವೊಂದು ಅಗತ್ಯ ವಸ್ತುಗಳ ದರದಲ್ಲಿ ಇಳಿಕೆಯಾದ್ದರಿಂದ ಹಣದುಬ್ಬರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರ ಹೊರತಾಗಿಯೂ ಆರ್‌ಬಿಐ ನಿರೀಕ್ಷೆ ಮಾಡಿದ ಶೇ.6ಕ್ಕಿಂತ ಹೆಚ್ಚಾಗಿರುವುದು ಗಮನಾರ್ಹವಾಗಿದೆ.

ಪ್ರಸಕ್ತ ವರ್ಷದ ಎಪ್ರಿಲ್‌ನಿಂದ ಜೂನ್‌ ವರೆಗೆ ಶೇ.7ಕ್ಕಿಂತ ಹೆಚ್ಚಾಗಿತ್ತು. 2021ರ ಜೂನ್‌ನಲ್ಲಿ ಶೇ.5.59ರಷ್ಟು ಇತ್ತು ಎಂದು ಕೇಂದ್ರ ಸರಕಾರದ ದತ್ತಾಂಶಗಳಲ್ಲಿ ಉಲ್ಲೇಖಿಸಲಾಗಿದೆ.

ರಷ್ಯಾ-ಚೀನ ಮತ್ತು ತೈವಾನ್‌- ಚೀನ ಬಿಕ್ಕಟ್ಟು ಸೇರಿದಂತೆ ಜಗತ್ತಿನ ರಾಜಕೀಯ ಬಿಕ್ಕಟ್ಟಿನ ಹೊರತಾಗಿಯೂ ಸೇವಾ ಕ್ಷೇತ್ರದಲ್ಲಿ ಶೇ.23.4 ವಹಿವಾಟು ದಾಖಲಾಗಿದೆ. ಜುಲೈನಲ್ಲಿ ಇಂಧನ ಕ್ಷೇತ್ರದಲ್ಲಿ ಬೆಲೆ ಏರಿಕೆಯಾದದ್ದು ಇಳಿಕೆಯಾಗಿದೆ.

ಜೂನ್‌ಗೆ ಹೋಲಿಕೆ ಮಾಡಿದರೆ ಜುಲೈನಲ್ಲಿ ಮೊಟ್ಟೆಯ ದರ ಇಳಿಕೆಯಾಗಿದೆ. ಹಣ್ಣುಗಳ ಬೆಲೆ ಜೂನ್‌ನಲ್ಲಿ ಶೇ.3.10 ಇದ್ದದ್ದು ಜುಲೈನಲ್ಲಿ ಶೇ.6.41ಕ್ಕೆ ಏರಿಕೆಯಾಗಿತ್ತು.

Advertisement

ರಫ್ತು ಪ್ರಮಾಣ ಏರಿಕೆ: ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಮತ್ತೊಂದು ಚೇತೋಹಾರಿ ವಿಚಾರವೆಂದರೆ ರಫ್ತು ಪ್ರಮಾಣ ಶೇ.2.14ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು 36.27 ಅಮೆರಿಕನ್‌ ಬಿಲಿಯನ್‌ ಡಾಲರ್‌ ಮೊತ್ತದ ವಸ್ತುಗ ಳನ್ನು ಇತರ ದೇಶಗಳಿಗೆ ಕಳುಹಿಸಿಕೊಡಲಾಗಿದೆ. ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದ್ದುದರಿಂದ ವ್ಯಾಪಾರ ವಹಿವಾಟು ಕೊರತೆ 30 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಏರಿಕೆಯಾಗಿದೆ.

ಕೈಗಾರಿಕಾ ಉತ್ಪಾದನೆ: ಮತ್ತೊಂದು ಮಹತ್ವದ ಅಂಶವೆಂದರೆ ದೇಶದ ಕೈಗಾರಿಕಾ ಉತ್ಪಾದನೆಯಲ್ಲಿ ಕೂಡ ಏರಿಕೆಯಾಗಿದೆ. ಅದರ ಪ್ರಮಾಣ ಶೇ.12.3ಕ್ಕೆ ಏರಿಕೆಯಾಗಿದೆ. ಉತ್ಪಾದನಾ ಕ್ಷೇತ್ರ, ವಿದ್ಯುತ್‌ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದರಿಂದ ಈ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next