Advertisement
ಕೇಂದ್ರ ಸರ್ಕಾರದ ಡಿಸೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಒಂದು ವರ್ಷದ ಕನಿಷ್ಠ ಅಂದರೆ ಶೇ.5.72ಕ್ಕೆ ಇಳಿಕೆಯಾಗಿದೆ ಎಂದು ದೃಢಪಡಿಸಿರುವಂತೆಯೇ ಎಸ್‌ಬಿಐನ ವರದಿಯಲ್ಲಿಯೂ ಆಶಾದಾಯಕ ಅಂಶ ವ್ಯಕ್ತವಾಗಿದೆ. ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಚಿಲ್ಲರೆ ಮಾರಾಟ ಕ್ಷೇತ್ರದ ಹಣದುಬ್ಬರ ಪ್ರಮಾಣ ಶೇ.4.7ರ ಆಸುಪಾಸಿನಲ್ಲಿ ಇರಲಿದೆ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.
ಹಣದುಬ್ಬರ ಪ್ರಮಾಣ ಇಳಿಕೆಯಾದರೂ, ಮುಂದಿನ ತಿಂಗಳು ನಡೆಯಲಿರುವ ಆರ್‌ಬಿಐ ಮುಂದಿನ ವಿತ್ತೀಯ ನೀತಿ ಪರಾಮರ್ಶೆ ಸಮಿತಿ ಸಭೆಯಲ್ಲಿ ಬಡ್ಡಿ ದರ ಏರಿಕೆ ಮಾಡಲಾಗುತ್ತದೆ ಎಂದು ವಿಶ್ಲೇಷಣೆ ನಡೆಸಲಾಗಿದೆ. 2022 ಡಿ.7ರಂದು ಆರ್‌ಬಿಐ ಶೇ.0.35 (35 ಬೇಸಿಸ್ ಪಾಯಿಂಟ್ಸ್) ಬಡ್ಡಿ ದರ ಏರಿಕೆ ಮಾಡಲಾಗಿತ್ತು. 2022ರ ಮೇನಿಂದ ಬಡ್ಡಿ ದರ ಏರಿಕೆಯಾಗುತ್ತಾ ಬಂದಿದೆ.
Related Articles
Advertisement