Advertisement

ಗರಿಷ್ಠ ಮಟ್ಟಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ

09:55 AM Nov 15, 2019 | Sriram |

ಹೊಸದಿಲ್ಲಿ: ಗ್ರಾಹಕರ ದರ ಸೂಚ್ಯಂಕ (ಸಿಪಿಐ) ದಲ್ಲಿ ಏರಿಕೆ ಕಂಡು ಬಂದಿದ್ದು, 16 ತಿಂಗಳಲ್ಲಿ ಗರಿಷ್ಠ ಮಟ್ಟದ ದರ ದಾಖಲಾಗಿದೆ. ಪರಿಣಾಮ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ಏರಿದೆ.

Advertisement

ಸೆಪ್ಟೆಂಬರ್‌ ತಿಂಗಳಲ್ಲಿ ಶೇ .5.11 ಇದ್ದ ಸೂಚ್ಯಂಕದ ದರ ಅಕ್ಟೋಬರ್‌ನ ಅಂತ್ಯಕ್ಕೆ ಶೇ.7.89ಕ್ಕೆ ತಲುಪಿದ್ದು, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಸುರಕ್ಷಿತ ಮಟ್ಟದ ದರಕ್ಕಿಂತ ಶೇ.4 ರಷ್ಟು ಅಧಿಕವಾಗಿದೆ. ಪರಿಣಾಮ ಚಿಲ್ಲರೆ ಹಣದುಬ್ಬರ ಏರಿಕೆ ಕೇಂದ್ರೀಯ ಬ್ಯಾಂಕ್‌ ಹಣಕಾಸು ನೀತಿ ಸಮಿತಿಯು ರೆಪೊ ದರಗಳನ್ನು ತಗ್ಗಿಸುವ ನಿರ್ಧಾರಕ್ಕೆ ಮುಂದಾಗಿದೆ.

ಕಳೆದ 16 ತಿಂಗಳಿಗೆ ಹೋಲಿಸಿದ್ದರೆ ಅಕ್ಟೋಬರ್‌ ತಿಂಗಳ ಚಿಲ್ಲರೆ ಬೆಲೆ ಆಧರಿಸಿದ ಹಣದುಬ್ಬರ ಸೂಚ್ಯಂಕದಲ್ಲಿ ಗರಿಷ್ಠ ಮಟ್ಟದ ದರ ದಾಖಲಾಗಿದ್ದು, ಶೇ.4.62ರಷ್ಟು ಏರಿಕೆಯಾಗಿದೆ. ಇದರಿಂದ ಬಡ್ಡಿ ದರ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದ್ದು, ಮುಂಗಾರು ಮಳೆಯ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಕಾರಣದಿಂದಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಎನ್ನಲಾಗಿದೆ. ಪರಿಣಾಮ ಹಣದುಬ್ಬರ ತೀವ್ರವಾಗಿ ಹೆಚ್ಚಳವಾಗಿದ್ದು, ಮಂದಗತಿಯಿಂದ ಸಾಗುತ್ತಿರುವ ಆರ್ಥಿಕತೆಯ ಚೇತರಿಕೆಗೆ ಹಿನ್ನಡೆ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next