Advertisement
ಕೋಟತಟ್ಟು ಗ್ರಾಮ ಪಂಚಾಯತ್, ಡಾ| ಶಿವರಾಮ ಕಾರಂತ ಟ್ರಸ್ಟ್, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಕೋಟದ ಡಾ| ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಡಾ| ಶಿವರಾಮ ಕಾರಂತ ಜನ್ಮದಿನೋತ್ಸವ – ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಎಡಬಲ ಅಮುಖ್ಯ, ನೆಮ್ಮದಿ ಮುಖ್ಯ ನಮಗೆ ಎಡ, ಬಲ ಪಂಥ, ಆ ಪಕ್ಷ, ಈ ಪಕ್ಷ ಮುಖ್ಯವಲ್ಲ. ನಾವು, ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕುವ ಸಮಾಜ ಬೇಕು, ಧೈರ್ಯದಿಂದ ಅಭಿಪ್ರಾಯ ವ್ಯಕ್ತಪಡಿಸುವ ಸಮಾಜ ಬೇಕು. ನನ್ನ ತಾಯಿ, ನನ್ನ ಮಗಳೂ ಹೆದರಬೇಕಾದರೆ ಅಲ್ಲಿಯವರೆಗೂ ಭಯ ತಲುಪಿದೆ ಎಂದಾಯಿತು. ವಾಕ್ ಸ್ವಾತಂತ್ರ್ಯ ಅಗತ್ಯವಿದೆ. “ಡಾ| ಕಾರಂತರು ಯಾರಿಗೂ ಹೆದರುತ್ತಿರಲಿಲ್ಲ. ನನ್ನ ಮನಸ್ಸಾಕ್ಷಿಗೆ ಮಾತ್ರ ನಾನು ಉತ್ತರ ಕೊಡಬೇಕು. ಸಮಾಜ, ಪ್ರಕೃತಿಗೆ ದ್ರೋಹ ಮಾಡದೆ ಬದುಕುವುದಾದರೆ ಯಾರಿಗೂ ಹೆದರಬೇಕಾದ ಅಗತ್ಯವಿಲ್ಲ ಎಂದು ಹೇಳುತ್ತಿದ್ದರು. ನಾನು ಅವರ ಮೊಮ್ಮಗ’ ಎಂದರು.
ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇದು ವೈಯಕ್ತಿಕ. ನನಗೆ ಇಂದು ಕಳವಳ ಆಗುತ್ತಿರುವುದು ಕ್ರೌರ್ಯಕ್ಕಿಂತ ದೊಡ್ಡದಾದ ಭಯ. ಶ್ರೀಲಂಕಾದಲ್ಲಿ ಜನಾಂಗೀಯ ದ್ವೇಷ ಇರುವಾಗ ತನಿಖೆಗೆಂದು ತೆರಳಿದ ಸಮಿತಿ ಸದಸ್ಯರೊಬ್ಬರಿಗೆ ಅಲ್ಲಿನ ಸ್ಥಳೀಯರೊಬ್ಬರು “ಇಲ್ಲಿ ಭಯ ಎನ್ನುವುದು ಸಾಂಕ್ರಾಮಿಕ ರೋಗವಾಗಿದೆ’ ಎಂದಿದ್ದರು ಎಂದರು. ನಿರ್ಧಾರ ಸ್ಪಷ್ಟವಾಗಿರಲಿ
ನಾನು ನಿಷ್ಠುರವಾಗಿ ಮಾತನಾಡುತ್ತೇನೆ. ಇದಕ್ಕೆ ಕಾರಣ ಶಿವರಾಮ ಕಾರಂತ, ಕುವೆಂಪು, ಲಂಕೇಶ್ ಅಂತಹವರು. ಅವರು ನಮ್ಮನ್ನು ಹಾಗೆ ಬೆಳೆಸಿದ್ದಾರೆ. ನಾನು ಇಷ್ಟು ವಿರೋಧದ ನಡುವೆಯೂ ಇಲ್ಲಿಗೆ ಬರುವುದಕ್ಕೆ ಒಂದು ಕಾರಣವಿದೆ. ಅದೆಂದರೆ ಕಾರಂತರನ್ನು ಸಂಭ್ರಮಿಸುವ ನಿಮ್ಮಂತಹ ಸಹೃದಯಿ ಗಳಿಗಾಗಿ. ನಾನು ಒಂದು ನಿರ್ಧಾರ ತೆಗೆದು ಕೊಂಡೆನೆಂದರೆ ಸ್ಪಷ್ಟತೆ ಇರುತ್ತದೆ. ನನ್ನ ಪರವಾಗಿ ಕರಾವಳಿಯ ವಿವಿಧೆಡೆ “ನಾವಿದ್ದೇವೆ, ನಾವಿದ್ದೇವೆ. ನೀವು ಪ್ರಶಸ್ತಿಗೆ ಅರ್ಹರು’ ಎಂದು ಹೇಳಿದರಲ್ಲ, ಅದಕ್ಕಾಗಿ ಬಂದೆ ಎಂದರು.
Related Articles
ಕಲಾವಿದರು ಸಮುದಾಯದೊಳಗಿರುವವರು. ನಮಗೆ ಒಂದು ಜವಾಬ್ದಾರಿ ಇರುತ್ತದೆ. ನಾನು ಹಿಂದೇಟು ಹಾಕಿದರೆ ಹೇಡಿಯಾಗುತ್ತೇನೆ. ನಾನು ಹೇಡಿಯಾದರೆ ಸಮಾಜ ಹೇಡಿಯಾದಂತೆ. ಟೀಕಾಕಾರರ ಬಾಯಿ ಮುಚ್ಚಿಸಬೇಕಾದರೆ ನಾನು ಇಲ್ಲಿಗೆ ಬರಬೇಕಿತ್ತು ಎಂದರು.
Advertisement
ಕಾರಂತರೆತ್ತರ !ಕಾರಂತರು ಎಷ್ಟು ಓದಿದ್ದರು? ಅವರಿಗೆ ಎಷ್ಟೊಂದು ವಿ.ವಿ.ಗಳು ಗೌರವ ನೀಡಿವೆ? ಉನ್ನತ ವಿದ್ಯಾ ಭ್ಯಾಸ ಮಾಡದಿದ್ದರೂ ಜ್ಞಾನಪೀಠ ಪ್ರಶಸ್ತಿ ಬಂತು. 96ನೇ ವಯಸ್ಸಿನಲ್ಲಿ ಹಕ್ಕಿಯ ಬಗ್ಗೆ ಬರೆದಿ ದ್ದರು. ವಿಜ್ಞಾನಿಗಳಿಗೂ ಸುಳ್ಳು ಹೇಳಬೇಡಿ ಎಂದು ಗದರಿಸು ತ್ತಿದ್ದರು. ಗೋಮಾಂಸದ ವಿಚಾರ ಬಂದಾಗ ಡಾ| ಕಾರಂತರು ತಿನ್ನುವವರು ತಿನ್ನುತ್ತಾರೆ. ಅದನ್ನು ಸೆಂಟಿ ಮೆಂಟಲ್ ಆಗಿ ಮಾಡಬೇಡಿ. ನೋವಿಲ್ಲದೆ ಕೊಲ್ಲಲು ನೋಡಿ ಎನ್ನುತ್ತಿದ್ದರು ಎಂದು ರೈ ಹೇಳಿದರು. ಬರೆದಂತೆ ಜೀವಿಸಿದವರು
ನಿಮ್ಮ ಪ್ರೀತಿಗೆ ನಾನು ಆಭಾರಿ. ನಿಮಗೇನಾದರೂ ಕಸಿವಿಸಿಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಆರಂಭದಲ್ಲಿಯೇ ಹೇಳಿದ ರೈಯವರು, ಕಾರಂತರ ಹೆಸರಿನ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದಾಗ ರೋಮಾಂಚನವಾಯಿತು. ಏಕೆಂದರೆ ಕಾರಂತರು ಬರೆದಂತೆ ಜೀವಿಸಿದವರು ಎಂದು ಪ್ರಕಾಶ್ ರೈ ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿ, ಪಿಡಿಒ ಸತೀಶ್ ವಂದಿಸಿದರು. ಸಂಸ್ಕೃತಿ ಚಿಂತಕ ಶ್ರೀಧರ ಹಂದೆ ಯಕ್ಷಗಾನದ ಹಾಡಿನಲ್ಲಿ ಪ್ರಕಾಶ್ ರೈ ಅವರನ್ನು ಪರಿಚಯಿಸಿದರು. ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಜಿ. ಮೂರ್ತಿ, ತಾ.ಪಂ. ಇಒ ಮೋಹನ್, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ರತ್ನಾ ನಾಗರಾಜ್, ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು. ಪ್ರಸಾದ್ ಮಣೂರು ಕಾರ್ಯಕ್ರಮ ನಿರ್ವಹಿಸಿದರು. ಕುಂದಾಪ್ರದ ಕಾಣಿ ಮೀನು| ಇನ್ನೆಲ್ಲೂ ಕಾಣೆ ನಾನು…||
ನಾನು ಒಮ್ಮೆ ಕುಂದಾಪುರದಲ್ಲಿ ಸಿನೆಮಾ ನೋಡಲು ಹೋಗಿದ್ದೆ. ಆಗ ಎಲ್ಲರೂ ಬಾಯಿ ಚಪ್ಪರಿಸುತ್ತಿದ್ದರು. ಪರದೆಯಲ್ಲಿ ಪ್ರಕಾಶ್ ರೈಯವರು ಬಗೆಬಗೆಯ ತಿನಿಸುಗಳನ್ನು ತಯಾರಿಸುತ್ತಿದ್ದರು. ಅದರಲ್ಲಿದ್ದ ಹಾಡು “ಕುಂದಾಪ್ರದ ಕಾಣಿ ಮೀನು| ಇನ್ನೆಲ್ಲೂ ಕಾಣೆ ನಾನು…||’ ಕೇಳಿ ಇವರಿಗೆ ಹೇಗಪ್ಪ ಕುಂದಾಪುರದ ಕಾಣಿ ಮೀನು ಗೊತ್ತು ಎಂದು ಪ್ರಶ್ನಿಸಿಕೊಂಡಿದ್ದೆ. ಇವರು “ಒಗ್ಗರಣೆ’ಯೂ ಸಹಿತ ಹಲವು ಮೌಲ್ಯಯುತ ಚಿತ್ರಗಳನ್ನು ಕೊಟ್ಟವರು. ಹಿಂದೆ ಎಂ. ವೀರಪ್ಪ ಮೊಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದೆವು. 50 ವರ್ಷಗಳ ಹಿಂದೆ ಡಾ| ಕಾರಂತರು ಬರೆದ ಪಠ್ಯ ಪುಸ್ತಕವನ್ನು ಮರುಮುದ್ರಿಸಿ ಜನರ ಕೈಗೆ ಸಿಗುವಂತೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು. ಕಾರಂತರು ಪರಿಸರ, ವಿಜ್ಞಾನ, ನಾಟಕ, ಚಲನ ಚಿತ್ರ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಹೀಗಾಗಿ ಪ್ರಕಾಶ್ ರೈಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆವು.
ಟಿ.ಬಿ. ಶೆಟ್ಟಿ , ಯು.ಎಸ್. ಶೆಣೈ (ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು)