Advertisement

Loksabha election: ಕಣಕ್ಕಿಳಿದಿದ್ದ ಸಿನಿ ತಾರೆಯರ ಕಥೆ ಏನಾಯ್ತು?

08:44 PM Jun 04, 2024 | Team Udayavani |

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಲವು ಸಿನಿ ತಾರೆಗಳಿಗೂ ವಿವಿಧ ಪಕ್ಷಗಳು ಟಿಕೆಟ್‌ ನೀಡಿದ್ದವು. ಕಂಗನಾ ರಣಾವತ್‌, ಹೇಮಾ ಮಾಲಿನಿ, ಅರುಣ್‌ ಗೋವಿಲ್‌ ಸೇರಿ ಹಲವು ತಾರೆಗಳು ಜಯಗಳಿಸಿದರೆ, ಇನ್ನೂ ಕೆಲ ತಾರೆಗಳು ಪರಾಭವಗೊಂಡಿದ್ದಾರೆ. ಆ ಕುರಿತ ವಿವರ ಹೀಗಿದೆ.

Advertisement

1 : ಕಂಗನಾ ರಣೌತ್‌: ಬಾಲಿವುಡ್‌ನ‌ ಖ್ಯಾತ ನಟಿ ಕಂಗನಾ ರಣೌತ್‌ ತಮ್ಮ ತವರೂರಾದ ಹಿಮಾಚಲ ಪ್ರದೇಶದ ಮಂಡಿಯಿಂದ ಇದೇ ಮೊದಲ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

2 : ಮನೋಜ್‌ ತಿವಾರಿ: ಈಶಾನ್ಯ ದೆಹಲಿಯ ಬಿಜೆಪಿ ಅಭ್ಯರ್ಥಿಯಾಗಿ ಭೋಜಪುರಿ ನಟ ಮನೋಜ್‌ ತಿವಾರಿ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಅವರನ್ನು 1 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

3 : ಶತ್ರುಘ್ನ ಸಿನ್ಹಾ: ಬಾಲಿವುಡ್‌ ನಟ ಹಾಗೂ ತೃಣಮೂಲ ಕಾಂಗ್ರೆಸ್‌ ಸಂಸದ ಶತ್ರುಘ್ನ ಸಿನ್ಹಾ ಪಶ್ಚಿಮ ಬಂಗಾಳದ ಅನ್ಸೋಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಸುರೇಂದ್ರ ಜೀತ್‌ ಸಿಂಗ್‌ ವಿರುದ್ಧ 59 ಸಾವಿರ ಮತ ಅಂತರದಲ್ಲಿ ಗೆದ್ದಿದ್ದಾರೆ.

4 : ಹೇಮಾ ಮಾಲಿನಿ: ಹಾಲಿ ಸಂಸದೆ ಹಾಗೂ ಖ್ಯಾತ ನಟಿ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶದ ಮಥುರಾದಿಂದ ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿದಿದ್ದರು. ಕಳೆದ 2 ಬಾರಿಯೂ ಇದೇ ಕ್ಷೇತ್ರದಲ್ಲಿ ಜಯಗಳಿಸಿದ್ದ ಅವರು ಈ ಬಾರಿ ಕಾಂಗ್ರೆಸ್‌ನ ಮುಕೇಶ್‌ ದಂಗರ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.

Advertisement

5 : ಅರುಣ್‌ ಗೋವಿಲ್‌: ರಾಮಾಯಣ ಧಾರವಾಹಿ ಮೂಲಕ ರಾಮನ ಪಾತ್ರದಲ್ಲಿ ಪ್ರಸಿದ್ಧಿ ಹೊಂದಿದ್ದ ನಟ ಅರುಣ್‌ ಗೋವಿಲ್‌ ಅವರಿಗೆ ಉತ್ತರ ಪ್ರದೇಶದ ಮೀರತ್‌ನಿಂದ ಬಿಜೆಪಿ ಟಿಕೆಟ್‌ ನೀಡಲಾಗಿತ್ತು. ಪ್ರಥಮ ಬಾರಿಗೆ ಲೋಕಸಭೆ ಕಣಕ್ಕಿಳಿದಿದ್ದ ಗೋವಿಲ್‌ ಬಿಎಸ್‌ಪಿಯ ಸ್ಪರ್ಧಿ ದೇವ್ರತ್‌ ಕುಮಾರ್‌ ತ್ಯಾಗಿ ಹಾಗೂ ಎಸ್‌ಪಿ ಅಭ್ಯರ್ಥಿ ಸಿನಿತಾ ವರ್ಮಾ ಅವರನ್ನು ಹಿಮ್ಮೆಟ್ಟಿಸಿ ಗೆದಿದ್ದಾರೆ.

6 : ಪವನ್‌ ಸಿಂಗ್‌: ಭೋಜ್‌ಪುರಿ ಸಿನಿಮಾಗಳಲ್ಲಿ ಪ್ರಖ್ಯಾತಿ ಗಳಿಸಿದ್ದ ನಟ ಹಾಗೂ ಹಿನ್ನೆಲೆ ಗಾಯಕ ಪವನ್‌ ಸಿಂಗ್‌ ಬಿಹಾರದ ಕರಾಕತ್‌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದಾರೆ.

7 : ರವಿ ಕಿಶನ್‌: ನಟ ಹಾಗೂ ಹಾಲಿ ಸಂಸದ ರವಿ ಕಿಶನ್‌ ಅವರು ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಎಸ್‌ಪಿ ಮತ್ತು ಬಿಎಸ್‌ಪಿ ಅಭ್ಯರ್ಥಿಗಳನ್ನು ಮಣಿಸಿ 10 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

8 : ಸುರೇಶ್‌ ಗೋಪಿ: ಖ್ಯಾತ ಮಲಯಾಳಂ ನಟ ಸುರೇಶ್‌ ಗೋಪಿ ಕೇರಳದ ತ್ರಿಶೂರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಿಪಿಐ ಅಭ್ಯರ್ಥಿ ವಿ.ಎಸ್‌.ಸುನಿಲ್‌ ಕುಮಾರ್‌ ವಿರುದ್ಧ 74,000 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

9 : ಮಾಧವಿ ಲತಾ: ತೆಲುಗು, ತಮಿಳು ಸಿನಿಮಾಗಳಲ್ಲಿ ಪ್ರಖ್ಯಾತರಾಗಿದ್ದ ನಟಿ ಮಾಧವಿ ಲತಾ ಅವರು ಹೈದರಾಬಾದ್‌ನಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ, ಕ್ಷೇತ್ರದಲ್ಲಿ ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್‌ ಒವೈಸಿ ವಿರುದ್ಧ ಸೋತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next