ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹೊಸವರ್ಷದ ಮೋಜು ಮಸ್ತಿಗೆ ಬ್ರೇಕ್‌ಹಾಕಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡದಿರಲು ಅಧಿಕಾರಿಗಳು ನಿರ್ಧರಿಸಿದ್ದು ಪ್ರವಾಸಿಗರಿಗೆ ಕೊಠಡಿ ಬುಕಿಂಗ್ ತಡೆಹಿಡಿದಿದ್ದಾರೆ.
ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬಂಡೀಪುರಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು ನೂತನವರ್ಷಾಚರಣೆ ಮಾಡಲು ಕೊಠಡಿ ಬುಕ್‌ಮಾಡಿಕೊಳ್ಳುತ್ತಿದ್ದರು. ತಡರಾತ್ರಿಯವರೆಗೆಪಾರ್ಟಿ ಮಾಡುವುದು, ತಡರಾತ್ರಿಯಲ್ಲಿ ಕೊಠಡಿಯಿಂದ ಹೊರ ಬರುವುದರಿಂದ ಇವರನ್ನು ನಿಯಂತ್ರಿ ಸುವುದು ಇಲಾಖೆಗೆ ಸವಾಲಾಗುತ್ತಿತ್ತು.ಇದರಿಂದ ವನ್ಯಜೀವಿಗಳ ಸಹಜಜೀವನಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಕಳೆದ ನಾಲ್ಕು ವರ್ಷಗಳಿಂದ ಬಂಡೀಪುರದಲ್ಲಿ ನೂತನ ವರ್ಷಾಚರಣೆಗೆ ಅವಕಾಶ ನೀಡಲಾಗುತ್ತಿಲ್ಲ. ಈ ಬಾರಿಯೂ ಸಹ ಅರಣ್ಯ ಅಧಿಕಾರಿಗಳು ಬಂಡೀಪುರದಲ್ಲಿ ನೂತನ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.31ಹಾಗೂ ಜ 1ರಂದು ಕೊಠಡಿಗಳ ಬುಕಿಂಗ್ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರಿಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮಾನವರ ಚಟುವಟಿಕೆ ನಿರ್ಬಂಧಿಸಲು ಬಂಡೀಪುರದಲ್ಲಿದ್ದ ಸಫಾರಿ ಟಿಕೆಟ್ ಕೌಂಟರನ್ನು ಮೇಲುಕಾಮನಹಳ್ಳಿಗೆ ಸ್ಥಳಾಂತರಿಸಿದ್ದರೂ ಅತಿಥಿಗೃಹಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಕೊಠಡಿ ಹಾಗೂ ಡಾರ್ಮೆಟರಿಗಳಲ್ಲಿ 91 ಪ್ರವಾಸಿಗರು ವಾಸ್ತವ್ಯ ಮಾಡಲು ಸಾಧ್ಯ ವಾಗುತ್ತಿದ್ದು ರಾತ್ರಿ ವೇಳೆ ಕೊಠಡಿಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ. ಇದರಿಂದ ಹಗಲಿರುಳು ಕ್ಯಾಂಪಸ್‌ನಲ್ಲಿ ಚಿರತೆಗಳು, ಹುಲಿ ಆನೆಗಳು ಸೇರಿದಂತೆ ವನ್ಯಜೀವಿಗಳ ಸಂಚಾರ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ವರ್ಷಾಚರಣೆ ಪ್ರಯುಕ್ತಕೊಠಡಿಯನ್ನು ಪ್ರವಾಸಿಗರಿಗೆ ನೀಡುತ್ತಿಲ್ಲ
ಬಂಡೀಪುರಕ್ಕೆ ಬರುವ ಪ್ರತಿ ಪ್ರವಾಸಿಗರಿಗೆ ಮೋಜು ಮಸ್ತಿ ಮಾಡಲು ಅವಕಾಶನೀಡುವುದಕ್ಕಿಂತ ಅರಣ್ಯದ ಸೊಬಗು ಹಾಗೂ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ವನ್ಯಜೀವಿಗಳ ಹಾಗೂ ಪ್ರವಾಸಿಗರ ಹಿತ ದೃಷ್ಟಿಯಿಂದ ವರ್ಷಾಚರಣೆಗೆ ತಡೆ ನೀಡಲಾಗಿದೆ. ಎಂದಿನಂತೆ ಸಫಾರಿ ಮಾಮೂಲಿಯಾಗಿರುತ್ತದೆ.ಡಿ-31 ಮತ್ತು ಜನವರಿ 1ರ ಎರಡು ದಿನಗಳುಮಾತ್ರ ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಕೊಠಡಿಗಳನ್ನುಯಾರಿಗೂ ನೀಡುತ್ತಿಲ್ಲ.
– ನಟೇಶ್, ಹುಲಿ ಯೋಜನೆ ನಿರ್ದೇಶಕ
– ಸೋಮಶೇಖರ್