Advertisement
ಉಳ್ಳಾಲದಲ್ಲಿ ಕಳೆದೆರಡು ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು ಅನುಸರಿಸಿ ರವಿವಾರ ಪ್ರವಾಸಿಗರ ಸಂಖ್ಯೆ ಅಧಿಕವಾಗುವ ಸಾಧ್ಯತೆಯಿಂದ ಕೆಎಸ್‌ಆರ್‌ಪಿ ಪೊಲೀಸರು, ಉಳ್ಳಾಲ ಠಾಣಾ ಪೊಲೀಸರು, ಹೋಂಗಾರ್ಡ್ ಮತ್ತು ಕರಾವಳಿ ನಿಯಂತ್ರಣ ದಳದ ಸಿಬಂದಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಅವರೊಂದಿಗೆ ಸ್ಥಳೀಯ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಮತ್ತು ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಣೆಗೆ ಸಿದ್ಧವಾಗಿದ್ದರು ಎಂದು ಕರಾವಳಿ ನಿಯಂತ್ರಣ ದಳದ ಸಿಬಂದಿ ಪ್ರಸಾದ್ ಸುವರ್ಣ ಮೊಗವೀರಪಟ್ಣ ಮತ್ತು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಾಜಿದ್ ಉಳ್ಳಾಲ ತಿಳಿಸಿದರು.
ಮಲ್ಪೆ ಕಡಲತೀರದಲ್ಲೂ ರವಿವಾರ ಮಧ್ಯಾಹ್ನದ ಬಳಿಕ ಭಾರೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಬೃಹತ್ ಗಾತ್ರದ ಆಲೆಗಳು ಕಿನಾರೆಗೆ ಅಪ್ಪಳಿಸುತ್ತಿವೆ. ಮಲ್ಪೆ ಬೀಚ್‌ನಲ್ಲೂ ದೊಡ್ಡಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿ ತೀರದ ಮರಳನ್ನು ಸೆಳೆಯುತ್ತಿವೆ. ಪ್ರವಾಸಿಗರ ಆಕರ್ಷಣೆಗಾಗಿ ತೀರದಲ್ಲಿ ನಿರ್ಮಿಸಿ ರುವ ಹಟ್‌ಗಳನ್ನು ದಾಟಿ ಅಲೆಗಳು ರಸ್ತೆಯತ್ತ ಮುನ್ನುಗ್ಗುತ್ತಿವೆ. ಸಂಜೆ ಬಳಿಕ ಅಲೆಗಳ ಅಬ್ಬರ ಕಡಿಮೆಯಾದರೂ ಸಮುದ್ರ ಪ್ರಕ್ಷುಬ್ಧವಾಗಿತ್ತು. ರವಿವಾರವಾದ್ದ ರಿಂದ ಪ್ರವಾಸಿಗರು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನೀರಿಗೆ ಇಳಿಯದಂತೆ ಎಚ್ಚರ ವಹಿಸಲಾಗಿತ್ತು. ಭದ್ರತಾ ಸಿಬಂದಿ ನೀರಿಗಿಳಿದವರನ್ನು ಮೇಲಕ್ಕೆ ಕರೆತರಲು ಹರಸಾಹಸ ಪಡುತ್ತಿದ್ದರು.