Advertisement
ವಿದ್ಯಾರ್ಥಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕಾಲೇಜಿನಲ್ಲಿ ಸೀಟು ಪಡೆದು, ನಿಗದಿತ ಅವಧಿ ಮುಗಿದ ಅನಂತರ ಆ ಕಾಲೇಜಿಗೆ ಸೇರದೆ, ಸೀಟನ್ನೂ ವಾಪಸ್ ಮಾಡದೆ ಇದ್ದರೆ ಆತನಿಗೆ ಶುಲ್ಕದ ಐದು ಪಟ್ಟನ್ನು ದಂಡವಾಗಿ ವಿಧಿಸಲು ನಿರ್ಧರಿಸಲಾಗಿದೆ.
Related Articles
ಅನೇಕ ಕಾಲೇಜುಗಳು ಸೀಟು ಭರ್ತಿಯಾದ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸುತ್ತಿರಲಿಲ್ಲ. ಇದರಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗುತ್ತಿತ್ತು.
Advertisement
ಅನಂತರ ಆ ಸೀಟುಗಳನ್ನು ಶಿಕ್ಷಣ ಸಂಸ್ಥೆಗಳು ಮ್ಯಾನೇಜ್‌ಮೆಂಟ್ ಸೀಟುಗಳಾಗಿ ಪರಿವರ್ತಿಸಿಕೊಂಡು ದುಬಾರಿ ಶುಲ್ಕ ಪಡೆದು ಹೊಸ ದಾಖಲಾತಿ ಮಾಡುವ ಸಾಧ್ಯತೆಗಳು ಹೆಚ್ಚಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ರಾಜ್ಯ ಪತ್ರ ಕೂಡ ಹೊರಡಿಸಿದೆ.