Advertisement

“ಜೀರ್ಣೋದ್ಧಾರದಿಂದ ಗ್ರಾಮಕ್ಕೆ ಕ್ಷೇಮ’

06:14 PM Mar 06, 2017 | Team Udayavani |

ಹೆಬ್ರಿ: ದೇವಸ್ಥಾನ, ಮಠ, ಮಂದಿರಗಳು ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರವಾಗಿರಬೇಕು ಹೊರತಾಗಿ ವ್ಯವಹಾರದ ಕೇಂದ್ರ ಗಳಾಗಬಾರದು. ಪ್ರತಿಯೊಂದು ದೇವಸ್ಥಾನಗಳಲ್ಲಿ ಗ್ರಂಥಾಲಯಗಳು ಸ್ಥಾಪನೆಯಾಗಬೇಕು. ಭಗವದ್ಗೀತೆ ಮೊದಲಾದ ಧಾರ್ಮಿಕ ಗ್ರಂಥಗಳನ್ನು ದೇವಸ್ಥಾನದಲ್ಲಿ ಇರಿಸಿ ಜನರಲ್ಲಿ ಆಡಂಬರ ರಹಿತ ಧಾರ್ಮಿಕ ಪ್ರಜ್ಞೆ ಯನ್ನು ಜಾಗೃತಗೊಳಿಸಬೇಕು. ಮಂಚಾರು ಗೋಪಾಲಕೃಷ್ಣ ದೇವ ಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮಕ್ಕೆ ಕ್ಷೇಮವಾಗಿದೆ ಎಂದು ಕೇಮಾರು ಸಾಂದೀಪನಿ ಸಾಧನಾ ಶ್ರಮದ ಶ್ರೀ ಈಶ ವಿಟuಲದಾಸ ಸ್ವಾಮೀಜಿ ಹೇಳಿದರು.

Advertisement

ಅವರು ಮಾ. 4ರಂದು  ಪೆರ್ಡೂರು ಬಾಳೆಬೈಲು ಮಂಚಾರು ಗೋಪಾಲಕೃಷ್ಣ ಮಠದ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಸಮ್ಮಾನಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಶಾಂತಾರಾಮ ಸೂಡ ವಹಿಸಿ ಮಾತ ನಾಡಿ ದೇವಸ್ಥಾನದ ಜೀರ್ಣೋದ್ಧಾರ ದಲ್ಲಿ ಕೈಜೋಡಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಕೇವಲ ಮಠದಲ್ಲೆ ಕುಳಿತುಕೊಳ್ಳದೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಜನ ಸಾಮಾನ್ಯರೊಂದಿಗೆ ಬೆರೆತು ದುಃಖದಲ್ಲಿರುವವರ ನೋವಿಗೆ ಸ್ಪಂದಿಸುವ ಹಾಗೂ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸವನ್ನು ಕೇಮಾರು ಸ್ವಾಮಿಗಳು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಈ ಸಂದರ್ಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು. ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಮೋದ್‌ ರೈ ಪಳಜೆ, ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಮಾಜಿ ಜಿ.ಪಂ ಅಧ್ಯಕ್ಷ ಉಪೇಂದ್ರ ನಾಯಕ್‌, ಉದ್ಯಮಿ ರಾಮಣ್ಣ ಪ್ರಭು, ಸುಬ್ಬಯ್ಯ ಶೆಟ್ಟಿ, ಅರ್ಚಕ ಸೂರ್ಯನಾರಾಯಣ ಭಟ್‌ ಉಪಸ್ಥಿತರಿದ್ದರು. 

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್‌ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಸಂತೋಷ್‌ ನಾಯಕ್‌ ವಂದಿಸಿದರು. ಬಳಿಕ ಆಹ್ವಾನಿತ ತಂಡಗಳ ಭಜನ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next