Advertisement

ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ಪುನಾರಂಭಿಸಿ: ಮುನಿಯಪ್ಪ

12:36 PM Jul 14, 2019 | Team Udayavani |

ಕೋಲಾರ: ಸ್ಥಗಿತಗೊಂಡಿರುವ ಯಶವಂತಪುರದಿಂದ ವೈಷ್ಣೋದೇವಿ ಸನ್ನಿಧಾನದ ಕಟ್ರಾವರೆಗಿನ ಹಜರತ್‌ ನಿಜಾಮುದ್ದೀನ್‌ ರೈಲು ಸಂಚಾರವನ್ನು ಪುನಾರಂಭಿಸಬೇಕೆಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹುಬ್ಬಳ್ಳಿ ಆಗ್ನೇಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Advertisement

ಈ ಕುರಿತು ಜು.12ರಂದು ಆಗ್ನೇಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿರುವ ಕೆ.ಎಚ್.ಮುನಿಯಪ್ಪ, ಬೆಂಗಳೂರಿನ ಯಶವಂತ ಪುರದಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಮಾರ್ಗವಾಗಿ ವೈಷ್ಣೋದೇವಿ ಸನ್ನಿಧಾನದ ರೈಲು ನಿಲ್ದಾಣದವರೆಗೂ ವಾರಕ್ಕೊಮ್ಮೆ ಸಂಚರಿಸುತ್ತಿರುವ 06521 ಮತ್ತು 06522 ಸಂಖ್ಯೆ ರೈಲನ್ನು ನಾಲ್ಕು ತಿಂಗಳ ಹಿಂದೆ ಆರಂಭಿಸಲಾಗಿತ್ತು.

50 ಲಕ್ಷ ಮಂದಿ ವಾಸ ಮಾಡುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿಗಳಿಗೆ ಈ ರೈಲು ಸಂಚಾರದಿಂದ ಸಾಕಷ್ಟು ಪ್ರಯೋಜನವಾಗಿತ್ತು. ಈ ಜಿಲ್ಲೆಗಳ ಪ್ರತಿ ನಿಲ್ದಾಣದಿಂದಲೂ ಪ್ರಯಾಣಿಕರು ದೆಹಲಿ, ತಿರುಪತಿ, ಅಜ್ಮೀರ್‌, ವೈಷ್ಣೋದೇವಿ ದರ್ಶನಕ್ಕಾಗಿ ತೆರಳಿ ಮತ್ತದೇ ರೈಲಿನಲ್ಲಿ ಹಿಂತಿರು ಗುತ್ತಿದ್ದರು. ಆದರೆ, ಈಗ ಈ ರೈಲು ಸಂಚಾರವನ್ನು ಇಲಾಖೆಯು ಸ್ಥಗಿತ ಗೊಳಿಸಿರುವುದರಿಂದ ಈ ಜಿಲ್ಲೆಗಳ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಯಾಗಿದೆ. ಆದ್ದರಿಂದ ಯಶವಂತಪುರ ನಿಲ್ದಾಣದಿಂದ ಕಟ್ರಾವರೆಗೂ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಹಜರತ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಪುನಾರಂಭಿಸುವ ಮೂಲಕ ಈ ಮೂರು ಜಿಲ್ಲೆಗಳ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next