Advertisement
ಪದವಿ ಕೊನೆಯ ಸೆಮಿಸ್ಟರ್‌ನಲ್ಲಿ ಇತಿಹಾಸ ವಿಭಾಗದಿಂದ ಪ್ರವಾಸವನ್ನು ಕೈಗೊಂಡಿದ್ದೆವು. ಈ ಪ್ರವಾಸದಿಂದ ಬೇಕಾದಷ್ಟು ಅನುಭವ, ಪಾಠವನ್ನು ಕಲಿಯುವಂತಾಯಿತು. ಪ್ರವಾಸ ಜವಾಬ್ದಾರಿಯನ್ನು ನಮ್ಮ ಮೇಲೆ ಹಾಕಿಕೊಂಡು ಕೊನೆಗೆ ಉಪನ್ಯಾಸಕರನ್ನು ಒಪ್ಪಿಸಿ ಪ್ರವಾಸಕ್ಕೆ ಹೋಗಲು ಸಿದ್ಧಗೊಂಡೆವು.
ಎಲ್ಲರ ಆಗಮನದ ಬಳಿಕ ಬಸ್ ಹೊರಟಿತು. ಬಸ್‌ನಲ್ಲಿ ಮನೋರಂಜನೆಗೆ ನೃತ್ಯ, ಅಂತ್ಯಾಕ್ಷರಿ ಆರಂಭಗೊಂಡವು. ನಮ್ಮ ಬಸ್ ಮೊದಲಿಗೆ ಕದಂಬರ ರಾಜಧಾನಿ ಬನವಾಸಿ ತಲುಪಿತು.ಬನವಾಸಿಯ ಕಲೆ, ವಾಸ್ತುಶಿಲ್ಪ ಆಡಳಿತದ ಬಗ್ಗೆ ಮಾಹಿತಿ ಪಡೆದೆವು. ಮುಂದೆ ಯಾಣಕ್ಕೆ ಹೋಗಬೇಕು ಅನ್ಕೊಂಡವರು ಪ್ರವಾಸ ಹಾದಿಯನ್ನು ಬದಲಾಯಿಸಿದೆವು. ಶಿರಸಿ-ಗೋಕರ್ಣದ ಮೂಲಕ ಮುರುಡೇಶ್ವರಕ್ಕೆ ಹೋಗಲು ನಿರ್ಧರಿಸಿದೆವು. ದೇವರ ದರ್ಶನ ಪಡೆದ ಬಳಿಕ ಎತ್ತರದ ಗೋಪುರದಲ್ಲಿ ಲಿಫ್ಟ್ ಮೂಲಕ ಹತ್ತಿ ಅಲ್ಲಿಂದ ಸಮುದ್ರದ ಸುತ್ತಲಿನ ಪ್ರಕೃತಿ ಸೊಬಗನ್ನು ಕಂಡು ಆಹ್ಲಾದಿಸಿದೆವು. ಅನಂತರ ಸಮುದ್ರಕ್ಕಿಳಿದು ನೀರಾಟವಾಡಿ ಸಂತೋಷಗೊಂಡೆವು. ಸಮಯ ಆಗುತ್ತಿರುವುದರಿಂದ ಕೊಲ್ಲೂರುವಿನತ್ತ ಪ್ರಯಾಣ ಬೆಳೆಸಿ, ಅಲ್ಲಿ ದೇವಿಯ ದರ್ಶನ ಪಡೆದು ಹೊಸನಗರ ಮಾರ್ಗವಾಗಿ ವಾಪಸಾದೆವು. ಈ ಪ್ರವಾಸದಿಂದ ನಾವು ಆನಂದ, ಸಂತೋಷ ಪಡೆಯುವ ಜತೆಗೆ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಕಲಿತೆವು.
Related Articles
ಪವನ್ ಕುಮಾರ್ ಎಂ. ರಿಪ್ಪನ್ ಪೇಟೆ, ಕುವೆಂಪು ವಿವಿ
Advertisement