ಕಲಬುರಗಿ: ಕಂದಾಯ ದಿನಾಚರಣೆ ಅಂಗವಾಗಿ ಗುರುವಾರ ಹಸಿರೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾ ° ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ, ರಾಜ್ಯ ಗ್ರಾಮ ಲೆಕ್ಕಾ ಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಂದಾಯ ದಿನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಧಿಕಾರಿಗಳು, ಎಲ್ಲ ಇಲಾಖೆಗಳಗೆ ಕಂದಾಯವೇ ಮಾತೃ ಇಲಾಖೆ ಆಗಿದೆ. ಕಂದಾಯ ಇಲಾಖೆ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಕಷ್ಟ ಎಂದಕೂಡಲೇ ಮುಂದೆ ಬಂದು ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸುವ ಕಂದಾಯ ಇಲಾಖೆ ಬಗ್ಗೆ ನನಗೂ ಹೆಮ್ಮೆ ಇದೆ ಎಂದರು. ಜಿಲ್ಲೆಯಲ್ಲಿ ಮೂರು ಬಾರಿ ಪ್ರವಾಹ, ಎರಡು ಬಾರಿ ಕೊರೊನಾ ಸಾಂಕ್ರಾಮಿಕ ಸೋಂಕು ಕಂಡಾಗ ಎದೆಗುಂದದೇ ಪ್ರತಿಯೊಬ್ಬ ಅ ಧಿಕಾರಿ-ಸಿಬ್ಬಂದಿ ಧೈರ್ಯದಿಂದ ಕಾರ್ಯನಿರ್ವಹಿಸಿರುವುದು ಶ್ಲಾಘ ನೀಯವಾಗಿದೆ ಎಂದರು.
ಕಂದಾಯ ದಿನಾಚರಣೆ ಪ್ರಯುಕ್ತ ಬೇವು, ತಾಳೆ ಸಸಿಗಳನ್ನು ನೆಡಲಾಯಿತು. ಗಿಡಮರ ಬೆಳೆಸಿ ಉಚಿತ ಆಮ್ಲಜನಕ ಪಡೆಯಿರಿ ಎನ್ನುವ ಘೋಷವಾಕ್ಯದಡಿ ಅರಣ್ಯ ಇಲಾಖೆಯ ವತಿಯಿಂದ ವಿವಿಧ ತಳಿಯ ಸಸಿಗಳನ್ನು ಉಚಿತವಾಗಿ ನೀಡಲಾಯಿತು. ರಾಜ್ಯ ಗ್ರಾಮ ಲೆಕ್ಕಾ ಧಿಕಾರಿಗಳ ಸಂಘ ಕಾರ್ಯದರ್ಶಿ ನವಾಜ್ ಮಹಮ್ಮದ್ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಕಂದಾಯ ಇಲಾಖೆ ಕಚೇರಿಗಳ ಆವರಣದಲ್ಲಿ ಐದು ಸಸಿಗಳನ್ನು ನೆಟ್ಟು ಅರ್ಥ ಪೂರ್ಣವಾಗಿ ಕಂದಾಯ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಗ್ರಾಮ ಲೆಕ್ಕಾ ಧಿಕಾರಿಗಳು ಸಹ ಐದು ಸಸಿಗಳನ್ನು ಬೆಳೆಸಬೇಕು. ಅಲ್ಲದೇ ರಾಜ್ಯಾದ್ಯಂತ ಕಂದಾಯ ಇಲಾಖೆ ವತಿಯಿಂದ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 11 ಕಂದಾಯ ಉಪ ವಿಭಾಗ ಸೇರಿ ಸುಮಾರು 1000 ದಿಂದ 1500 ಸಸಿಗಳನ್ನು ನೆಡುವ ಮೂಲಕ ಮಾದರಿ ಕಂದಾಯ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು. ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ತಹಶೀಲ್ದಾರ್ ಪ್ರಕಾಶ್ ಕುದರಿ, ಗ್ರೇಡ್-2 ತಹಶೀಲ್ದಾರ್ ವೆಂಕಣಗೌಡ ಪಾಟೀಲ, ರಾಜ್ಯ ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶರಣಬಸವ ಹೊಸಮನಿ, ಕಾರ್ಯದರ್ಶಿ ಗುರುಮೂರ್ತಯ್ಯ, ರಾಜ್ಯ ಗ್ರಾಮ ಲೆಕ್ಕಾ ಧಿಕಾರಿಗಳ ಸಂಘದ ಅಧ್ಯಕ್ಷ ರಾಜು ಗೋಪಣೆ ಹಾಗೂ ಕಂದಾಯ ಇಲಾಖೆ ಅ ಧಿಕಾರಿಗಳು, ಸಿಬ್ಬಂದಿ ಇದ್ದರು.