Advertisement

ಅಡಚಣೆ ನಿವಾರಣೆಗೆ ಸ್ಪಂದನೆ

11:29 AM Aug 30, 2017 | Team Udayavani |

ಬೆಂಗಳೂರು: ಮೋಡ ಬಿತ್ತನೆ ವಿಮಾನಗಳ ಹಾರಾಟಕ್ಕೆ ಎದುರಾಗಿದ್ದ ತಾಂತ್ರಿಕ ಅಡಚಣೆ ನಿವಾರಣೆ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಯಲಹಂಕ, ಜಕ್ಕೂರು, ಎಚ್‌ಎಎಲ್‌ ವಾಯುನೆಲೆಗಳ ಸಂಚಾರ ನಿಯಂತ್ರಣ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Advertisement

ವರ್ಷಧಾರೆ ಯೋಜನೆ ಮೇಲುಸ್ತುವಾರಿ ವಹಿಸಿಕೊಂಡಿರುವ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತ ಟಿ.ಎಭ. ವಿಜಯಭಾಸ್ಕರ್‌ ಅವರು ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಯಲಹಂಕ, ಜಕ್ಕೂರು, ಎಚ್‌ಎಎಲ್‌ ವಾಯುನೆಲೆಗಳ ಪ್ರಮುಖ ಅಧಿಕಾರಿಗಳು, ಮೋಡ ಬಿತ್ತನೆ ವಿಮಾನಗಳ ಹಾರಾಟಕ್ಕೆ ಅಡಚಣೆ ಆಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ಮೋಡ ಬಿತ್ತನೆ ಕಾರ್ಯಕ್ರಮದ ನೋಡಲ್‌ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ. 

ಸಭೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಯಾನ ನಿಯಂತ್ರಣದ ಪ್ರಧಾನ ವ್ಯವಸ್ಥಾಪಕ ವಿ.ಎಸ್‌.ಪನಕಾಲ ಚಿನ್ಸನ್‌, ಎಚ್‌.ಎ.ಎಲ್‌ ವಿಮಾನ ನಿಲ್ದಾಣದ ಶ್ರೀನಿವಾಸನ್‌, ಯಲಹಂಕ ವಾಯು ನೆಲೆಯ ಗ್ರೂಪ್‌ ಕ್ಯಾಪ್ಟನ್‌ ಶ್ರೀನಿವಾಸನ್‌, ಎನ್‌.ಎ.ಎಲ್‌ ನ ವಿದ್ಯಾಧರ ಮುದಕವಿ, ವಿ.ಜೆ ಸತೀಶ್ಚಂದ್ರ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿಯಂತ್ರಣ ಅಧಿಕಾರಿ ಶಿವಾನಂದ ಬಿ. ಬೇನಾಳ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎನ್‌. ನಾಗಾಂಬಿಕಾದೇವಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next