Advertisement

ಕುವೈಟ್‌ ಕನ್ನಡಿಗರಿಗೆ ಸ್ಪಂದನೆ: ಜೂ. 16ಕ್ಕೆ ಕುವೈಟ್‌-ಬೆಂಗಳೂರು ವಿಮಾನ ಆಗಮನ ಸಾಧ್ಯತೆ

11:56 AM Jun 04, 2020 | mahesh |

ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕುವೈಟ್‌ನಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ಕೊನೆಗೂ ಸಫಲಗೊಂಡಿದ್ದು, “ವಂದೇ ಭಾರತ್‌ ಮಿಷನ್‌’ನಡಿ ಜೂ. 16ರಂದು ಕುವೈಟ್‌ನಿಂದ ಬೆಂಗಳೂರಿಗೆ ಮೊದಲ ವಿಮಾನ ಆಗಮಿಸುವ ಸಾಧ್ಯತೆಯಿದೆ. ಕುವೈಟ್‌ನಲ್ಲಿರುವ ಅನಿವಾಸಿ ಕನ್ನಡಿಗರಿಗೆ ನೆರವಾಗುವ ನಿಟ್ಟಿನಲ್ಲಿ ಬೆಂಗಳೂರು ಅಥವಾ ಮಂಗಳೂರಿಗೆ ವಿಮಾನ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಕುವೈಟ್‌ ಕನ್ನಡಿಗರಿಗೆ ಈ ಹಿಂದೆ ಭರವಸೆ ನೀಡಿದ್ದರು. ಮೇ 17ರಿಂದ ಜೂ. 13ರ ವರೆಗಿನ ಏರ್‌ ಇಂಡಿಯಾದ ವಿಮಾನಗಳ ವೇಳಾಪಟ್ಟಿಯಲ್ಲಿ ಕುವೈಟ್‌ನಿಂದ ಮಂಗಳೂರು ಅಥವಾ ಬೆಂಗಳೂರಿಗೆ ವಿಮಾನ ಸಂಚಾರದ ಬಗ್ಗೆ ಉಲ್ಲೇಖವಾಗಿರಲಿಲ್ಲ. ಆದರೆ, ಇದೀಗ ಕೇರಳ ಕುವೈಟ್‌ ಮುಸ್ಲಿಂ ಅಸೋಸಿಯೇಶನ್‌ ಕರ್ನಾಟಕ ಶಾಖೆಯವರು, ಕುವೈಟ್‌ನಲ್ಲಿರುವ ಅನಿವಾಸಿ ಕನ್ನಡಿಗ ಮಂಜೇಶ್ವರ ಮೋಹನ್‌ದಾಸ್‌ ಕಾಮತ್‌ ಹಾಗೂ ಅಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಕಾರದೊಂದಿಗೆ ಜೂ. 16ರಂದು ಯೋಜನೆಯಡಿ ಕುವೈಟ್‌ನಿಂದ ವಿಮಾನ ಬೆಂಗಳೂರಿಗೆ ಹೊರಡುವುದು ಬಹುತೇಕ ಖಚಿತಗೊಂಡಿದೆ.

Advertisement

ಕುವೈಟ್‌ನಲ್ಲಿ ರಾಜ್ಯದ ಸುಮಾರು 50,000 ಜನರು, ಕರಾವಳಿ ಭಾಗದ 35,000 ಜನರು ಇದ್ದಾರೆ. ಈ ಪೈಕಿ ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಆರೋಗ್ಯ ತಪಾಸಣೆಗೆ ಬಯಸುವವರು ಸಹಿತ ಸುಮಾರು 3,000ಕ್ಕೂ ಹೆಚ್ಚು ಮಂದಿ ಕರ್ನಾಟಕಕ್ಕೆ ತುರ್ತಾಗಿ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next