Advertisement

ಸಮಸ್ಯೆಗೆ ಸ್ಪಂಧಿಸಿದ ಸರ್ಕಾರ- ಜಿಲ್ಲಾಡಳಿತ

03:48 PM Jun 19, 2022 | Team Udayavani |

ಮೂಡಲಗಿ: ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸರ್ಕಾರದ ಕಾರ್ಯ, ಸಾರ್ವಜನಿಕರ ಅಹವಾಲುಗಳ ಈಡೇರಿಕೆಗೆ ʼಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ವರದಾನವಾಗಿದೆ. ಗ್ರಾಮೀಣ ಜನರ ಸಮಸ್ಯೆಗಳ ಸ್ಪಂದನೆಗೆ ಸರ್ಕಾರ, ಜಿಲ್ಲಾಡಳಿತ ಆದ್ಯತೆ ನೀಡುತ್ತಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

Advertisement

ಬೈರನಟ್ಟಿ ಗ್ರಾಮದ ಜಡಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಿದರೆ ಸಾರ್ವಜನಿಕ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ತಿಳಿಯಲು ಸಾಧ್ಯವಿಲ್ಲ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅಧಿಕಾರಿಗಳ ತಂಡ ಬೈರನಟ್ಟಿ ಗ್ರಾಮದಲ್ಲಿ ವಾಸ್ತವ್ಯ ಹಮ್ಮಿಕೊಂಡಿದ್ದು, ಅರ್ಜಿ ಸಲ್ಲಿಸುವ ಪ್ರತಿಯೊಬ್ಬರ ಸಮಸ್ಯೆ ಖುದ್ದು ಆಲಿಸಿ, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗುವುದು ಎಂದರು.

140 ಅರ್ಜಿ ವಿಲೇವಾರಿ: ಕಾರ್ಯಕ್ರಮದಲ್ಲಿ ಸ್ವೀಕೃತವಾಗಿರುವ ಅರ್ಜಿಯಲ್ಲಿ 140 ಅರ್ಜಿ ವಿಲೇವಾರಿ ಮಾಡಲಾಗಿದೆ. ಬಹಳಷ್ಟು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದ್ದು, ಪಿಂಚಣಿ ಯೋಜನೆಯಲ್ಲಿ ಮಾಸಾಶನಕ್ಕೆ ಅರ್ಜಿ ಹಾಕಿದವರಿಗೆ ಸ್ಥಳದಲ್ಲೇ ಆದೇಶ ಪತ್ರ ಜಿಲ್ಲಾಧಿಕಾರಿಗಳು ವಿತರಿಸಿದರು. ಗ್ರಾಮದಲ್ಲಿ ಇರುವ 150 ಎಕರೆ ಗಾಯಠಾಣ ಜಾಗದಲ್ಲಿ ಪರಿಶಿಷ್ಟ ಸಮುದಾದ ಜನರಿಗೆ ರುದ್ರ ಭೂಮಿಗಾಗಿ 2 ಎಕರೆ ಹಾಗೂ ಬೈರನಟ್ಟಿ ಗ್ರಾಮದ ಸುಮಾರು 60 ಕುಟುಂಬಗಳ ನಿವೇಶನಕ್ಕಾಗಿ ಜಾಗ ಮಂಜೂರು ಮಾಡಲಾಗುವುದು ಎಂದರು.

ಅಧಿಕಾರಿಗಳ ತರಾಟೆಗೆ: ಗ್ರಾಮದಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಹಾಗೂ ರೈತ ಸಂಪರ್ಕ ಕೇಂದ್ರದಿಂದ ನೀಡುವ ಹನಿ ನೀರಾವರಿ ಸಬ್ಸಿಡಿ ಸಲುವಾಗಿ ಸಾರ್ವಜನಿಕರು ನೀಡಿರುವ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕೂಡಲೇ ರೈತರಿಂದ ಹನಿ ನೀರಾವರಿ ಸಬ್ಸಿಡಿ ಅರ್ಜಿ ಸ್ಥಳದಲ್ಲೇ ಸ್ವೀಕರಿಸಲು ಖಡಕ್ಕಾಗಿ ಆದೇಶಿಸಿದರು. ಪಂಚಾಯತ್‌ ಇಲಾಖೆಗೆ 28 ವರ್ಷಗಳ ಹಿಂದೆ ಪಿವೈ ಹುಣಶ್ಯಾಳ ಗ್ರಾಮದ ಜನರಿಗೆ ನಿವೇಶನ ನೀಡಲು 23 ಎಕರೆ ನೀಡಲಾಗಿತ್ತು. ಆದರೆ ಇಲ್ಲಿವರೆಗೂ ಫಲಾನುಭವಿಗಳಿಗೆ ನೀಡದಿರುವುದರಿಂದ ಪಂಚಾಯತ್‌ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಿಂಗಳದೊಳಗೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಿ ಹಕ್ಕುಪತ್ರ ನೀಡದಿದ್ದಲ್ಲಿ ಮರಳಿ ಜಾಗ ಕಂದಾಯ ಇಲಾಖೆಗೆ ತೆಗೆದುಕೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next