Advertisement
ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಕ್ತ ವರದಿ ಕೋರಿದ್ದಾರೆ. ಅದರಂತೆ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗಳು, ಸಹಾಯಕ ಕಮೀಷನರ್ ಅವರ ಮುಖಾಂತರ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ತಾಲೂಕು ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಮನೆ ನಿವೇಶನದ ವಿಸ್ತೀರ್ಣ ಸರ್ವೆ ಕಾರ್ಯ ಪೂರ್ಣಗೊಂಡಿದೆ.
ಜಯನಗರದಲ್ಲಿ ಮನೆಕಟ್ಟಿ ವಾಸಿಸುತ್ತಿರುವ ಸುಮಾರು 250 ಕುಟುಂಬಗಳ ಮನೆಗಳ ನಿವೇಶನ ಸ್ಥಳ ತಮ್ಮ ಹೆಸರಿಗೆ ಮಂಜೂರಾಗಬೇಕೆಂದು ಹಲವು ವರ್ಷಗಳಿಂದ ನಿವಾಸಿಗಳು ಪ್ರಯತ್ನ ನಿರತರಾಗಿದ್ದರು. ಇವರೆಲ್ಲಾ ಸುಮಾರು 40-50 ವರ್ಷಗಳಿಂದ ನೆಲೆಸಿದ್ದಾರೆ. ಕೆಲವರು ಬೇರೆಯವರಿಂದ ಜಾಗ ಖರೀದಿಸಿದವರೂ ಇದ್ದಾರೆ. ಎಲ್ಲರಿಗೂ ಮಿಲಿಟರಿ ಗ್ರೌಂಡ್ ಎಂಬುದೆ ತೊಡಕಾಗಿದೆ. ಆದ ಕಾರಣ ಇವರ್ಯಾರಿಗೂ ಮನೆ ನಿವೇಶನದ ಹಕ್ಕುಪತ್ರ ದೊರೆತಿಲ್ಲ. ದಾಖಲೆ ಹೀಗಿದೆ
1939ರಲ್ಲಿ ಬ್ರಿಟಿಷರ ಕಾಲದಲ್ಲಿ ಜಯನಗರದಲ್ಲಿ 76 ಎಕ್ರೆ ಸ್ಥಳವನ್ನು ಮಿಲಿಟರಿ ಉದ್ದೇಶಕ್ಕಾಗಿ ಮೀಸಲಿರಿಸಿದ್ದು, ಆದರೆ ಆ ಜಾಗದಲ್ಲಿ ಸ್ವಾತಂತ್ರÂ ಪೂರ್ವದಲ್ಲಾಗಲಿ, ಸ್ವಾತಂತ್ರÂ ಅನಂತರದಲ್ಲಾಗಲಿ ಯಾವುದೇ ಮಿಲಿಟ್ರಿ ಚಟುವಟಿಕೆ ನಡೆದಿರಲಿಲ್ಲ. ಅಲ್ಲದೆ ಮಿಲಿಟರಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ಇರಲಿಲ್ಲ. ಕಂದಾಯ ಇಲಾಖೆಯ ದಾಖಲೆಯಲ್ಲಿ ಮಿಲಿಟರಿ ಗ್ರೌಂಡ್ ಎಂದು ಕೈಬರಹದ ಉಲ್ಲೇಖ ಒಂದು ಕಡೆ ಇರುವುದು ಹೊರತುಪಡಿಸಿದರೆ ರಕ್ಷಣಾ ಇಲಾಖೆ ಕಡತದಲ್ಲಿ ಈ ಜಾಗದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಎಂಬ ಅಂಶ ಗೋಚರಿಸಿದೆ.
Related Articles
Advertisement
ವಿದ್ಯುತ್, ನೀರಿನ ಸಂಪರ್ಕ, ರೇಶನ್ ಕಾರ್ಡು ಎಲ್ಲ ಇದೆ. ಆದ್ದರಿಂದ ಹಕ್ಕುಪತ್ರಕ್ಕಾಗಿ ನಿವಾಸಿಗಳು ಹೋರಾಟ ನಡೆಸುತ್ತಿದ್ದಾರೆ.
ಹಕ್ಕುಪತ್ರ ಇಲ್ಲದ ಕಾರಣ, ಇವರೆಲ್ಲರೂ ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದೀಗ ಹಕ್ಕೊತ್ತಾಯ ಸಮಿತಿ ರಚಿಸಿಕೊಂಡಿದ್ದು, ಅದರ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಜಯನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ. ಜಗನ್ನಾಥ ಅವರು, ರಾಷ್ಟÅಪತಿ ಪ್ರಣವ್‌ಮುಖರ್ಜಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಶಾಸಕರು, ಸಂಸದರು ಹಲವು ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ತಹಶೀಲ್ದಾರ್ ಅವರು ಪರಿಶೀಲನೆ ನಡೆಸಿದ್ದು, ಕೊನೆ ವರದಿ ಸಲ್ಲಿಸಲು ಬಾಕಿ ಇದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಸಮಸ್ಯೆ ಬಗೆಹರಿಸಲು ಶಾಸಕರು ಮತ್ತು ಜಿ.ಜಗನ್ನಾಥ ಅವರೊಳಗೆ ಸಮಾಲೋಚನೆ ನಡೆಸಿದ್ದರು.
ಈ ಪ್ರದೇಶದಲ್ಲಿರುವವರಿಗೆ ಜಿಲ್ಲಾಧಿಕಾರಿ ಅವರು 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ರುವ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ಶಾಸಕರು ಭರವಸೆ ನೀಡಿದ್ದರು.