Advertisement

ಉದಯವಾಣಿ ಸುದಿನ ವರದಿಗೆ ಸ್ಪಂದನೆ 

11:41 AM Jan 29, 2018 | |

ಮಹಾನಗರ: ಬೀದಿದೀಪಗಳ ಸಮಸ್ಯೆಯಿಂದ ಕತ್ತಲುಮಯಗೊಂಡು ಹಲವು ಅಪಘಾತಗಳಿಗೆ ಕಾರಣವಾಗುತ್ತಿದ್ದ ನಂತೂರು ವೃತ್ತಕ್ಕೆ ಕೊನೆಗೂ ಹೈಮಾಸ್ಟ್‌ ದೀಪದ ಭಾಗ್ಯ ದೊರೆತಿದೆ. ಇದೀಗ ಪಾಲಿಕೆಯು ವೃತ್ತಕ್ಕೆ ಹೈಮಾಸ್ಟ್‌ ದೀಪ ಅಳವಡಿಸಿದ್ದು, ಇನ್ನು ವೃತ್ತ ಕತ್ತಲ
ಸಮಸ್ಯೆಗೆ ಮುಕ್ತಿ ದೊರೆಯಲಿದೆ.

Advertisement

ವೃತ್ತದ ಬೆಳಕಿನ ಸಮಸ್ಯೆಯ ಕುರಿತು ಉದಯವಾಣಿ ಸುದಿನದಲ್ಲಿ ಜ. 3ರಂದು ‘ಅವೈಜ್ಞಾನಿಕ ನಂತೂರು ವೃತ್ತ ರಾತ್ರಿಯಾದರೆ ವಾಹನ ಸವಾರರ ಪರದಾಟ!’ ಎಂಬ ಶೀರ್ಷಿಕೆಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ಇದೀಗ ವರದಿಗೆ ಸ್ಪಂದನೆ ಎಂಬಂತೆ ಪಾಲಿಕೆಯು ಹೈಮಾಸ್ಟ್‌ ದೀಪವನ್ನು ಅಳವಡಿಸಿದ್ದು, ರವಿವಾರ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ.

ಈ ಭಾಗದಲ್ಲಿ ಬೀದಿದೀಪಗಳಿದ್ದರೂ ಅವುಗಳು ಹಳೆಯ ಕಾಲದ ದೀಪಗಳಾದ ಕಾರಣ ಬೆಳಕಿನ ಪ್ರಖರತೆ ಕಡಿಮೆ ಇತ್ತು. ಜತೆಗೆ ಕೆಲವೊಂದು ಬೀದಿದೀಪಗಳು ಉರಿಯುತ್ತಲೂ ಇರಲಿಲ್ಲ. ಹೀಗಾಗಿ ಸ್ಥಳೀಯರು ಹೈಮಾಸ್ಟ್‌ ದೀಪಕ್ಕಾಗಿ ಕಳೆದ ಹಲವು ವರ್ಷಗಳಿಂದ ಬೇಡಿಕೆಯನ್ನಿಟ್ಟಿದ್ದರು. 

ಪೊಲೀಸರಿಗೂ ತೊಂದರೆ 
ರಾತ್ರಿಯಾಗುತ್ತಿದ್ದಂತೆ ಬೆಳಕಿನ ವ್ಯವಸ್ಥೆ ಇಲ್ಲದೆ ನಂತೂರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೂ ತೊಂದರೆಯುಂಟಾಗುತ್ತಿತ್ತು. ಹೀಗಾಗಿ ಸಂಚಾರ ಪೊಲೀಸ್‌ ಇಲಾಖೆಯು ಕೂಡ ಹೈಮಾಸ್ಟ್‌ ದೀಪದ ಅಳವಡಿಕೆಗೆ ಪಾಲಿಕೆಗೆ ಮನವಿ ನೀಡಿತ್ತು. ಕೆಲವು ಸಮಯಗಳ ಹಿಂದೆ ರಾತ್ರಿ ವೇಳೆ ವಾಹನ ಚಾಲಕರಿಗೆ ಸೂಚನೆ ನೀಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯಿಂದಲೇ 4 ಕಡೆಗಳಲ್ಲಿ ಬ್ಲಿಂಕ್‌ ಮಾದರಿಯ ಲೈಟ್‌ಗಳನ್ನು ಅಳವಡಿಸಲಾಗಿತ್ತು.

ಮನಪಾದಿಂದ ಹೈಮಾಸ್ಟ್‌ ದೀಪ
ನಂತೂರು ವೃತ್ತದ ಕತ್ತಲ ಸಮಸ್ಯೆಯ ಕುರಿತು ಕಳೆದ ಹಲವು ಸಮಯಗಳಿಂದ ಪಾಲಿಕೆಗೆ ದೂರು ಬರುತ್ತಿತ್ತು. ಈ ಭಾಗವು ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾದ ಕಾರಣದಿಂದ ಈಗ ಪಾಲಿಕೆಯ ವತಿಯಿಂದ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ.
– ಭಾಸ್ಕರ್‌ ಕೆ. , ಕಾರ್ಪೊರೇಟರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next