Advertisement

ಟ್ರಂಪ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಸ್ಸಾಂ ಯುವತಿಗೆ ಮೆಚ್ಚುಗೆ

09:45 AM Nov 28, 2018 | Team Udayavani |

ಗುವಾಹಟಿ: ಅಸ್ಸಾಂನ ಬಾಲಕಿಯೊಬ್ಬಳು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ತಾಪಮಾನವು ಮೈನಸ್‌ 2 ಡಿಗ್ರಿಗೆ ಇಳಿದ ಬಗ್ಗೆ ನವೆಂಬರ್‌ 21 ರಂದು ಟ್ವೀಟ್‌ ಮಾಡಿದ್ದ ಟ್ರಂಪ್‌, ಕ್ರೂರ ತಾಪಮಾನವು ಎಲ್ಲ ದಾಖಲೆಗಳನ್ನೂ ಮುರಿಯುತ್ತಿದೆ. ಇದು ನಡೆಯುತ್ತಿರುವುದು ಹವಾಮಾನ ವೈಪರೀತ್ಯದಿಂದಲೇ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಸ್ಸಾಂನ 18 ವರ್ಷದ ಆಸ್ತಾ ಶರ್ಮಾ, ನಾನು ನಿಮಗಿಂತ 54 ವರ್ಷ ಚಿಕ್ಕವಳು. ಸಾಧಾರಣ ಅಂಕಗಳಿಂದ ಇತ್ತೀಚೆಗಷ್ಟೇ ನನ್ನ ಶಾಲಾ ಅಭ್ಯಾಸ ಮುಗಿಸಿದ್ದೇನೆ. ಆದರೆ ತಾಪಮಾನವೇ ಹವಾಮಾನವಲ್ಲ ಎಂದು ನಾನೂ ಕೂಡ ನಿಮಗೆ ಹೇಳಬಲ್ಲೆ. ಇದನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಬೇಕಿದ್ದರೆ, ನನ್ನ ವಿಶ್ವಕೋಶವನ್ನು ನಿಮಗೆ ಬಾಡಿಗೆಗೆ ಕೊಡುತ್ತೇನೆ. ಇದರಲ್ಲಿ ಸಚಿತ್ರ ವಿವರಣೆ ಇದೆ ಎಂದಿದ್ದಳು. 

Advertisement

ಈ ಕಾಮೆಂಟ್‌ ಈಗ 22 ಸಾವಿರ ಲೈಕ್‌ ಪಡೆದಿದೆ. ಅಷ್ಟೇ ಅಲ್ಲ 5.1 ಸಾವಿರ ರಿಟ್ವೀಟ್‌ ಕೂಡ ಪಡೆದಿದೆ. ಇನ್ನೂ ಕೆಲವರು ವಿದೇಶದಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ಅಧ್ಯಯನ ನಡೆಸಲು ಇಂಟರ್ನ್ಶಿಪ್‌ಗ್ೂ ಆಕೆಯನ್ನು ಆಹ್ವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next