Advertisement

ಬಡವರ ಕಷ್ಟಕ್ಕೆ ಸ್ಪಂದಿಸುವುದು ದೇವರ ಕೆಲಸ: ಐಕಳ ಹರೀಶ್‌ ಶೆಟ್ಟಿ

11:09 AM Jan 01, 2019 | |

ಮುಂಬಯಿ: ಬೇರೆ ಬೇರೆ ಊರಿಂದ ಆಸ್ಪತ್ರೆಗೆ ಬಂದವರು ಹಸಿದ ಹೊಟ್ಟೆಯಲ್ಲಿ ಇರಬಾರದು  ಎಂದು ಜಾಗತಿಕ  ಬಂಟರ ಸಂಘಗಳ ಒಕ್ಕೂಟದ  ಸಮಾಜ ಕಲ್ಯಾಣ ಯೋಜನೆಯ ಅಂಗವಾಗಿ ವೆನ್ಲೋಕ್‌ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಜೊತೆಗಾರರಿಗೆ ರಾತ್ರಿಯ ಒಂದು ಹೊತ್ತು ಊಟವನ್ನು ನಿರಂತರವಾಗಿ ನೀಡಲು  ಸ್ಥಳೀಯ ಎಂ. ಫ್ರೆಂಡ್‌ ಸಂಸ್ಥೆಗೆ ಅನುದಾನ ನೀಡಿ ಸಹಕರಿಸಲಾಗಿದೆ. ಆಸ್ಪತ್ರೆಗೆ ಚಿಕಿತ್ಸೆ ಪಡೆಯುವ ಸಲುವಾಗಿ  ಬರುವವರು ತುಂಬಾ ಬಡವರಾಗಿದ್ದು ಆಸ್ಪತ್ರೆ ನೋಂದಣಿಗೂ ಹಣವಿಲ್ಲದೆ ಸಂಕಷ್ಟದಲ್ಲಿರುತ್ತಾರೆ ಎಂದು ತಿಳಿದು ಬಂತು. ಅಂತಹ ಜನರಿಗಾಗಿ ಊಟ ನೀಡುವ ಮಹತ್ಕಾರ್ಯ ಜಾಗತಿಕ ಬಂಟರ ಒಕ್ಕೂಟದಿಂದ ಆಗುತ್ತದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ನುಡಿದರು.

Advertisement

ಜಾಗತಿಕ  ಬಂಟರ ಸಂಘಗಳ ಒಕ್ಕೂಟದ  ಸಮಾಜ ಕಲ್ಯಾಣ ಯೋಜನೆಯ ಅಂಗವಾಗಿ ವೆನೊÉàಕ್‌ ಜಿÇÉಾ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಜೊತೆಗಾರರಿಗೆ ರಾತ್ರಿಯ ಒಂದು ಹೊತ್ತು ಊಟವನ್ನು ನಿರಂತರವಾಗಿ ಒದಗಿಸಲು  ಸ್ಥಳೀಯ ಎಂ. ಫ್ರೆಂಡ್‌ ಸಂಸ್ಥೆಗೆ ಅನುದಾನ ನೀಡಲಾಗಿದ್ದು, ಡಿ. 30 ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಐಕಳ ಹರೀಶ್‌ ಶೆಟ್ಟಿಯವರು, ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಈಗಾಗಲೇ ಲಕ್ಷಾಂತರ ರೂ. ಗಳನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೀಡಿದೆ. ಜಾತಿ, ಮತ, ಧರ್ಮವನ್ನು ಮೀರಿ ಒಕ್ಕೂಟದ ವಿವಿಧ ಯೋಜನೆಗಳ ಅಡಿಯಲ್ಲಿ ಸಹಕರಿಸಲಾಗುತ್ತಿದೆ. ಒಕ್ಕೂಟದ ವಿವಿಧ ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ಬಡವರಿಗಾಗಿ ನೂರು ಮನೆ ನಿರ್ಮಾಣ ಯೋಜನೆ, ಆರೋಗ್ಯಕ್ಕೆ ಸಹಾಯ, ಶಿಕ್ಷಣಕ್ಕೆ ಸಹಕಾರವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನೀಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಬಡವರ ಸೇವೆಯೇ ನಿಜವಾದ ಸಮಾಜ ಕಲ್ಯಾಣವಾಗಿದೆ. ಕಷ್ಟದಿಂದ ಜೀವನ ಸಾಗಿಸುತ್ತಿರುವವರ ನೋವನ್ನು ಅರಿತವನೆ ನಿಜವಾದ ನಾಯಕ ಹಾಗೂ ಸಮಾಜ ಸೇವಕ. ಮುಂಬಯಿಯಲ್ಲೂ ಅನೇಕ ಸಮಾಜಕ್ಕೆ  ದೇವರು  ಮೆಚ್ಚುವಂಥ ಒಳ್ಳೆಯ ಕೆಲಸ  ಐಕಳ ಹರೀಶ್‌ ಶೆಟ್ಟಿಯವರಿಂದ  ಆಗಿದೆ.  ಈಗ ಜಾಗತಿಕ ನೆಲೆಯ ನಾಯಕನಾಗಿ ಇನ್ನಷ್ಟು ಕೆಲಸ ಆಗಬೇಕಾಗಿದೆ. ಅದನ್ನು ಅವರು ನಿಷ್ಠೆ, ಶ್ರದ್ಧೆಯಿಂದ  ಮಾಡುತ್ತಾರೇ ಎಂಬ ವಿಶ್ವಾಸ ನನಗಿದೆ. ಸಮಾಜ ಸೇವೆಯನ್ನು ಮಾಡುವ  ಯೋಗ್ಯತೆ ಕೂಡ ಐಕಳ   ಹರೀಶ್‌  ಶೆಟ್ಟಿಯವರಿಗೆ ಇದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಐಕಳ ಹರೀಶ್‌ ಶೆಟ್ಟಿ ಅವರನ್ನು  ಸ್ಥಳೀಯ ಎಂ. ಫ್ರೆಂಡ್‌ ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಮಂಗಳೂರು ಮಹಾನಗರ ಮಹಾ ಪೌರ ಭಾಸ್ಕರ ಕೆ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ ಆಳ್ವಾ, ನಿರ್ದೇಶಕ  ಕರ್ನಿರೆ ವಿಶ್ವನಾಥ್‌ ಶೆಟ್ಟಿ, ಕೋಶಾಧಿಕಾರಿ ಕೊÇÉಾಡಿ ಬಾಲಕೃಷ್ಣ ರೈ,  ಆಸ್ಪತ್ರೆಯ ಡಿಎಂ ಓ. ರಾಜೇಶ್ವರಿ, ಎಂ ಫ್ರೆಂಡ್‌ನ‌ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next