Advertisement
10 ಸಾವಿರ ರೂ. ನೆರವುಹೆಸರು ತಿಳಿಸಲು ಇಚ್ಛಿಸದ ದಾನಿಯೊಬ್ಬರು ಪರಿಚಿತರ ಮೂಲಕ ಈ ಬಡ ಕುಟುಂಬಕ್ಕೆ 10 ಸಾವಿರ ರೂ. ಧನಸಹಾಯ ನೀಡಿದ್ದಾರೆ. ಜತೆಗೆ ಮನೆ ನಿರ್ಮಾಣಕ್ಕೆ ತನ್ನಿಂದಾದ ಸಹಕಾರವನ್ನೂ ನೀಡುವುದಾಗಿಯೂ ಅವರು ಭರವಸೆ ಇತ್ತಿದ್ದಾರೆ. 10 ಸಾವಿರ ರೂ. ನಗದನ್ನು ನಾಲ್ವರು ಹೆಣ್ಣುಮಕ್ಕಳ ಅಜ್ಜಿ ಭಾಗೀರಥಿ ಅವರಿಗೆ ಹಸ್ತಾಂತರಿ ಸಲಾಯಿತು. ಪದವಿ ವ್ಯಾಸಂಗ ಮಾಡುತ್ತಿರುವ ನೇತ್ರಾ ಅವರ ಒಂದು ವರ್ಷದ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಬೆಂಗಳೂರಿನ ವಿದ್ಯಾಮಾತಾ ಫೌಂಡೇಶನ್ ಅಧ್ಯಕ್ಷ ಭಾಗೇಶ್ ರೈ ತಿಳಿಸಿದ್ದಾರೆ. ವರದಿ ಗಮನಿಸಿದ ಅವರು, ವಾರದೊಳಗೆ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ‘ಉದಯವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.
ಧನಸಹಾಯ ಸ್ವೀಕರಿಸಿದ ಬಳಿಕ ಭಾಗೀರಥಿ ಅವರು ಮಾತನಾಡಿ, ತನಗೆ ಪಿಂಚಣಿ ರೂಪದಲ್ಲಿ ತಿಂಗಳಿಗೆ 600 ರೂ. ಬರುತ್ತದೆ (ಈಗ ಅದು 1,000 ರೂ.ಗೆ ಹೆಚ್ಚಳವಾಗಿದೆ. ಅದಿನ್ನೂ ಕೈಸೇರಿಲ್ಲ). ಆ ಸಂದರ್ಭದಲ್ಲಿ ಅಂಗಡಿಯಿಂದ ಅಕ್ಕಿ ತಂದು ಮನೆಯಲ್ಲಿರುವ ನಾವು ಹೊಟ್ಟೆ ತುಂಬಾ ಊಟ ಮಾಡುತ್ತೇವೆ. ಉಳಿದ ದಿನ ಪಡಿತರ ಅಂಗಡಿಯ ಬಿಳಿ ಅಕ್ಕಿಯ ಊಟವನ್ನೇ ಮಾಡುತ್ತೇವೆ. ಈ ಧನ ಸಹಾಯದಿಂದ ಒಪ್ಪೊತ್ತಿನ ಊಟಕ್ಕೆ ಸಹಾಯ ಆಯಿತು ಎಂದವರು ಆನಂದ ಬಾಷ್ಪದೊಂದಿಗೆ ಹೇಳಿದರು.