Advertisement

ಜನಸಾಮಾನ್ಯರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ

06:24 PM Jul 15, 2022 | Team Udayavani |

ಮಾಗಡಿ: ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಮತ್ತು ಹಕ್ಕುಗಳು ಸಿಗಬೇಕು ಎಂಬುದೇ ಮಾನವ ಹಕ್ಕುಗಳ ಪ್ರಚಾರ ವೇದಿಕೆ ಧ್ಯೇಯವಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಪ್ರಚಾರ ವೇದಿಕೆ ಅಧ್ಯಕ್ಷ ಮುನಿಕೃಷ್ಣ ತಿಳಿಸಿದರು.

Advertisement

ತಾಲೂಕಿನ ಮರಳುದೇವನಪುರದ ನರಸಿಂಹ ಮೂರ್ತಿ ಅವರ ತೋಟದ ಮನೆಯಂಗಳಲಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮಾನವ ಹಕ್ಕುಗಳ ಪ್ರಚಾರ ವೇದಿಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಅವರಿಗೆ ಕಾರ್ಯಾಗಾರ ನಡೆಸಿ ಮಾತನಾಡಿ, ಸಮಾಜದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರಿಗೆ ಕಾನೂನು ಅರಿವು ನೀಡುವ ಮೂಲಕ ಜಾಗೃತಿಗೊಳಿಸ ಲಾಗುವುದು ಎಂದು ಹೇಳಿದರು.

ಸೇವೆ ಸಲ್ಲಿಸಲು ಸಂಕಲ್ಪ: ರಾಜ್ಯದಲ್ಲಿ ಸುಮಾರು 38 ಲಕ್ಷ ಸದಸ್ಯರಿದ್ದು, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ತೊಡೆದು ಹಾಕಬೇಕು. ಸಾಮಾನ್ಯರಿಗೆ ಉತ್ತಮ ಸೇವೆ ಕಲ್ಪಿಸಬೇಕು. ಈ ಮೂಲಕ ಸಮಾಜದಲ್ಲಿ ಬದಲಾವಣೆಗೆ ಉನ್ನತ ಮಟ್ಟದ ಅಧಿಕಾರಿಗಳ ಸಲಹೆ ಪಡೆದು, ಎಲ್ಲೆಡೆ ಜಾಗೃತಿಗೊಳಿಸಲಾಗುವುದು. ಜನರಲ್ಲಿ ನವ ಹಕ್ಕುಗಳ ವಿಚಾರ ವೇದಿಕೆ ಮೂಲಕ ವಿಶ್ವಾಸ ಮೂಡಿಸುವ ಮೂಲಕ ಉತ್ತಮ ಸೇವೆ ಸಲ್ಲಿಸಲು ಸಂಕಲ್ಪ ಮಾಡಲಾಗಿದೆ. ತಾಲೂಕು, ಹೋಬಳಿ,
ಗ್ರಾಮ ಮಟ್ಟದಲ್ಲಿನ ಪದಾಧಿಕಾರಿಗಳ ಯೋಗಕ್ಷೇಮಕ್ಕೂ ಹೆಚ್ಚಿನ ಜವಾಬ್ದಾರಿ ವೇದಿಕೆ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಸರ್ಕಾರಿ ಸೌಲಭ್ಯಕ್ಕೆ ಪ್ರಾಮಾಣಿಕ ಪ್ರಯತ್ನ: ರಾಜ್ಯ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಸಮಾಜದಲ್ಲಿ ಸಂವಿಧಾನದ ಉಲ್ಲಂಘನೆಯಾದರೆ ಅವರನ್ನು ಕಾನೂನು ಮತ್ತು ಹಕ್ಕುಗಳ ಕುರಿತು ಜಾಗೃತಿಗೊಳಿಸಲಾಗುವುದು. ರಾಜ್ಯದಲ್ಲಿ ಶೈಕ್ಷಣಿಕ ವಾಗಿ ಪ್ರಗತಿ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ನೀಡಲು ಪ್ರಾಮಾಣಿಕವಾಗಿ ವೇದಿಕೆ ಪ್ರಯತ್ನಿಸುತ್ತದೆ ಎಂದು ತಿಳಿಸಿದರು.

ವೇದಿಕೆಯ ರಾಮಕೃಷ್ಣ ಮಾತನಾಡಿ, ಅರಮನೆ, ಗುರುಮನೆ, ನೆರೆಮನೆಯನ್ನು ಪ್ರೀತಿಸೋಣ, ಸಂಸ್ಕಾರವಂತರಾಗೋಣ, ಸಮಾಜ ಮುಖೀ ಸೇವೆಯೇ ನಮ್ಮ ಧ್ಯೇಯ ವಾಕ್ಯವಾಗಬೇಕಿದೆ ಎಂದರು.

Advertisement

ಭ್ರಷ್ಟಾಚಾರ ತಡೆಗೆ ಸಿದ್ಧ: ಜಿಲ್ಲಾಧ್ಯಕ್ಷ ಕೆ.ವಿ. ನರಸಿಂಹಮೂರ್ತಿ ಮಾತನಾಡಿ, ಯುವ ಶಕ್ತಿ ಯಿಂದಲೇ ಸಮಾಜದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವೇದಿಕೆ ಸಿದ್ಧವಾಗಿದೆ. ಯುವಕರು, ಮಹಿಳೆಯರು ಸೇವಾ ಮನೋಭಾವದಿಂದ ವೇದಿಕೆ ಸೇರುವ ಮೂಲಕ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್‌, ತ್ಯಾಗರಾಜ್‌, ರತ್ನಮ್ಮ ಮಾತನಾಡಿದರು.

ತಾಲೂಕು ಪದಾಧಿಕಾರಿಗಳ ಆಯ್ಕೆ: ನೂತನ ಆಧ್ಯಕ್ಷರಾಗಿ ಸಂತೋಷ್‌, ಪ್ರಧಾನ ಕಾರ್ಯದರ್ಶಿ ಕುಮಾರ್‌, ಉಪಾಧ್ಯಕ್ಷ ಡಿ.ಜಿ.ಗಂಗಧಾರ್‌, ಜಯ ಶೀಲ, ಖಜಾಂಚಿಯಾಗಿ ದೀಪು, ಸಂಘಟನಾ ಕಾರ್ಯದರ್ಶಿಗಳಾದ ನಾಗೇಶ್‌, ಸತೀಶ್‌, ಚಂದ್ರಶೇಖರ್‌ ಅವರಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರವನ್ನು ರಾಜ್ಯಾಧ್ಯಕ್ಷ ಮುನಿಕೃಷ್ಣ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next