Advertisement
ಆ ವ್ಯಕ್ತಿಯಲ್ಲಿ ಈ ಹಿಂದೆ ಯಾವುದೇ ಅಲರ್ಜಿ ಇರದಿದ್ದರೂ, ಈ ಸಮಸ್ಯೆ ಎದುರಾಗಿದೆ. ಕೂಡಲೇ ಅವರನ್ನು ತುರ್ತು ಚಿಕಿತ್ಸಾ ಕೊಠಡಿಗೆ ಕರೆದೊಯ್ದು ಪೆಪ್ಸಿಡ್, ಬೆನಡ್ರಿಲ್, ಎಪೈನ್‌ಫ್ರೀನ್ ಅನ್ನು ಡ್ರಿಪ್ ಮೂಲಕ ನೀಡಲಾಗಿದೆ. ಈಗ ಅವರ ಸ್ವಾಸ್ಥ್ಯ ಸಹಜ ಸ್ಥಿತಿಗೆ ಮರಳಿದೆೆ. ಕೆಲವು ದಿನಗಳ ಹಿಂದೆ ಬ್ರಿಟನ್‌ನಲ್ಲೂ ಕೆಲವರಿಗೆ ಇಂಥ ಸಮಸ್ಯೆ ಎದುರಾಗಿತ್ತು. ಇಂಥ ವಿಶೇಷ ಪ್ರಕರಣಗಳ ಬಗ್ಗೆ ಫೈಜರ್ ವರದಿ ತರಿಸಿಕೊಂಡು, ಅಧ್ಯಯನ ನಡೆಸುತ್ತಿದೆ. ಇದೇ ವೇಳೆ, ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್‌ರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಕೋಟಿ ಸಮೀಪಿಸಿದೆ. ಬುಧವಾರದಿಂದ ಗುರುವಾರಕ್ಕೆ 24,010 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 99.56 ಲಕ್ಷಕ್ಕೇರಿದೆ. ಈವರೆಗೆ 1,44,451 ಮಂದಿ ಮೃತಪಟ್ಟಿದ್ದಾರೆ. ಗುಣಮುಖರಾದವರ ಸಂಖ್ಯೆ 94.89 ಲಕ್ಷಕ್ಕೇರಿದ್ದು, ಚೇತರಿಕೆ ಪ್ರಮಾಣ ಶೇ.95 ಕ್ಕೇರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಖಾಸಗಿ ಭದ್ರತಾ ಸಿಬಂದಿ ಪಾತ್ರ: ಲಸಿಕೆ ವಿತರಣೆಯಲ್ಲಿ ದೇಶದ 90 ಲಕ್ಷ ಖಾಸಗಿ ಭದ್ರತಾ ಸಿಬಂದಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ತಿಳಿಸಿದ್ದಾರೆ. ಪ್ರತಿಯೊಂದು ಮನೆಗೂ ಲಸಿಕೆ ತಲುಪಬೇಕೆಂದರೆ ಭದ್ರತ ಸಿಬಂದಿಯ ನೆರವೂ ಬೇಕಾಗುತ್ತದೆ ಎಂದಿದ್ದಾರೆ.