Advertisement
ಕುಂದಾಪುರದ ಪ್ರಮುಖ ಬೀದಿಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಕ್ಯಾಂಡಲ್ ಬೆಳಕಿನೊಂದಿಗೆ ಹುತಾತ್ಮ ಯೋಧರಿಗೆ “ಬೆಳಕಿನ ನಡೆ ನಮನ’ ಎನ್ನುವ ಹೆಸರಿನಲ್ಲಿ ಗೌರವ ಅರ್ಪಿಸಿದರು. ಕಾಲ್ನಡಿಗೆ ಜಾಥಾವು ಶ್ರೀ ಮಹಾಕಾಳಿ ದೇವಸ್ಥಾನದಿಂದ ಆರಂಭಗೊಂಡು, ಪಾರಿಜಾತ ಸರ್ಕಲ್, ಶಾಸ್ತ್ರೀ ಸರ್ಕಲ್ ಆಗಿ ಮತ್ತೆ ಖಾರ್ವಿಕೇರಿಯಲ್ಲಿ ಸಮಾಪನಗೊಂಡಿತು. ಇದೇ ವೇಳೆ ಉಡುಪಿ, ದ. ಕನ್ನಡದ ವಿವಿಧೆಡೆಗಳಲ್ಲಿಯೂ ಶ್ರದ್ಧಾಂಜಲಿ, ಮೊಂಬತ್ತಿ ಉರಿಸಿ ಗೌರವಾರ್ಪಣೆ ನಡೆಯಿತು.
ನಾಳೆ 5,000 ಜನರಿಂದ ಯೋಧರಿಗೆ ಶ್ರದ್ಧಾಂಜಲಿ
ಉಡುಪಿ: ಉಗ್ರಗಾಮಿಗಳಿಂದ ಹತರಾದ ಯೋಧರಿಗೆ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಫೆ. 18ರ ಬೆಳಗ್ಗೆ 10 ಗಂಟೆಗೆ ಸಮಾನಮನಸ್ಕ ಸಂಘಟನೆಗಳಿಂದ ಶ್ರದ್ಧಾಂಜಲಿ ನಡೆಯಲಿದೆ. ಜಿಲ್ಲಾ ಮೊಗವೀರ ಯುವ ಸಂಘಟನೆ, ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್, ಶಾಲಾ ಕಾಲೇಜುಗಳ ಸಹಭಾಗಿತ್ವದಲ್ಲಿ ಇದು ಆಯೋಜನೆಗೊಂಡಿದೆ. ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಬಿಷಪ್ ಕರೆ
ಮಂಗಳೂರು: ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸಿಆರ್‌ಪಿ ಎಫ್ ಜವಾನರು ಸಾವನ್ನಪ್ಪಿರುವ ಘಟನೆ ಅಮಾನವೀಯ ಎಂದು ಮಂಗಳೂರಿನ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ. ಮೃತ ಜವಾನರ ಆತ್ಮ ಗಳಿಗೆ ಶಾಂತಿ ಕೋರಿ ಎಲ್ಲ ಚರ್ಚ್‌ಗಳಲ್ಲಿ ರವಿವಾರ ಪ್ರಾರ್ಥನೆಯನ್ನು ಸಲ್ಲಿಸುವಂತೆ ಅವರು ವಿನಂತಿಸಿದ್ದಾರೆ.