ಮುಧೋಳ: ಎಲ್ಲ ವರ್ಗದ ಕಾರ್ಮಿಕ ಬಂಧುಗಳು ನಮ್ಮ ಬದುಕಿಗೆ ಬೇಕಾದವರು. ಅವರ ಸೇವೆ ನಮಗೆ ಅವಶ್ಯವಾಗಿದೆ. ಅವರನ್ನು ಕಾಳಜಿ, ಆತ್ಮೀಯತೆಯೊಂದಿಗೆ ಗೌರವಿಸಬೇಕೆಂದು ಶಿಕ್ಷಕ ಸುರೇಶ ಮದರಖಂಡಿ ಹೇಳಿದರು.
ನೀರು ಸರಬರಾಜು ಮಾಡುವ ಲಕ್ಕಪ್ಪ ತಳವಾರ, ಬಿಸಿಯೂಟದ ಕಾರ್ಯಕರ್ತೆ ಆಶಾಬಿ ಇನಾಮದಾರ, ಆಶಾ ಕಾರ್ಯಕರ್ತೆ ವಾಸಂತಿ ಪೂಜಾರಿ, ಕೃಷಿ ಕೂಲಿ ಕಾರ್ಮಿಕರಾದ ಶಾಂತವ್ವ ಮಾದರ, ಪೆಂಡಾಲ್ ಮತ್ತು ಡೆಕಾರೇಷನ್ ಕೆಲಸದ ಲಕ್ಷ್ಮಣ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಮುಧೋಳ ಕಾರ್ಮಿಕ ಸಂಘದ ಅಧ್ಯಕ್ಷ ಸದಾಶಿವ ಆಗೋಜಿ ಮತ್ತು ಉಪಾಧ್ಯಕ್ಷ ಹನಮಂತ ತಳವಾರ ಉಪಸ್ಥಿತರಿದ್ದರು.
ಮಂಟೂರ ಗ್ರಾಮದ ಮಲ್ಲಪ್ಪ ಮೆಟಗುಡ್ಡ, ಸಿದ್ರಾಮಪ್ಪ ಸಿದಗೊಂಡ, ಮಲ್ಲಪ್ಪ ಕಲ್ಲೂರ, ತರುಣ ಸಂಘದ ಅಧ್ಯಕ್ಷ ಲಕ್ಷ್ಮಣ ಚಿಗರಡ್ಡಿ, ಹನಮಂತ ಮಾದರ, ಶಿಕ್ಷಕ ಸುರೇಶ ಪೂಜಾರಿ, ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ಚಿಗರಡ್ಡಿ, ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಸಮಿತಿ ವಿದ್ಯಾರ್ಥಿ ಘಟಕದ ಪ್ರಮುಖ ಲಕ್ಷ್ಮಣ ಮಾದರ ಉಪಸ್ಥಿತರಿದ್ದರು. ಗೋಲಶೆಟ್ಟಿ ಶಿಕ್ಷಣ ಸಂಸ್ಥೆ ಮುಖ್ಯಗುರು ಪ್ರಕಾಶ ಪೀಠಕ ನಿರೂಪಿಸಿದರು.
Advertisement
ಮಂಟೂರಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರನ್ನು ಸನ್ಮಾನಿಸುವ ಈ ವಿಶೇಷ ಕಾರ್ಯ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ನಡೆಸಿರುವುದು ಶ್ಲಾಘನೀಯವಾಗಿದೆ ಎಂದರು.