Advertisement

ವಿದ್ಯೆ ಕಲಿಸುವ ಶಿಕ್ಷಕರನ್ನು ಗೌರವಿಸಿ

11:17 AM Sep 16, 2018 | Team Udayavani |

ತಿ.ನರಸೀಪುರ: ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಾಕ್ಷರತೆ ಪ್ರಮುಖ ಪಾತ್ರ ವಹಿಸಲಿದ್ದು, ಸುಶಿಕ್ಷಿತ ಸಮಾಜವನ್ನು ಸೃಷ್ಟಿಸಲು ಅಕ್ಷರ ಕಲಿಸುವ ಶಿಕ್ಷಕರನ್ನು ಪ್ರತಿಯೊಬ್ಬರೂ ಗೌರಸಬೇಕು ಎಂದು ರೋಟರಿ ಅಧ್ಯಕ್ಷ ಎನ್‌.ಎಂ.ರಾಮಚಂದ್ರ ಹೇಳಿದರು.

Advertisement

ತಾಲೂಕಿನ ಬನ್ನೂರು ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರೀಯ ಸಾಕ್ಷರತಾ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿರುವುದರಿಂದ ಅಕ್ಷರದ ಅರಿವು ಮೂಲಕ ಅನಕ್ಷರತೆಯನ್ನು ನಿವಾರಿಸಬೇಕು ಎಂದು ಹೇಳಿದರು.

ರೋಟರಿ ಸಹಾಯಕ ಗೌರ್ನರ್‌ ಬಿ.ಎನ್‌.ಸುರೇಶ ಮಾತನಾಡಿ, ಬನ್ನೂರು ರೋಟರಿ ಸಂಸ್ಥೆ ನಿರಂತರವಾಗಿ ಸಮಾಜಮುಖೀಯಾಗಿ ಕಾರ್ಯನಿರ್ವಸುತ್ತಿದೆ. ಸ್ವತ್ಛ ಭಾರತ ಅಭಿಯಾನ  ಸೇರಿದಂತೆ ಆರೋಗ್ಯ ತಪಾಸಣೆ ಶಿಬಿರ, ವಿಶೇಷ ವಿಕಲಚೇತನರಿಗೆ ನೆರವು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ವೆಂಕಟೇಶ್‌ಮೂರ್ತಿ, ನಿವೃತ್ತ ಶಿಕ್ಷಕರಾದ ಶಾಂತಮ್ಮ ಹಾಗೂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ರೋಟರಿ ಕಾರ್ಯದರ್ಶಿ ಕೃಷ್ಣೇಗೌಡ, ಉಪಾಧ್ಯಕ್ಷ ಮಹೇಂದ್ರಸಿಂಗ್‌, ಮಾಜಿ ಅಧ್ಯಕ್ಷ ಪಿ.ಪ್ರಭಾಕರ್‌, ಮಾಣಿಕ್‌ಚಂದ್‌, ಮುಖಂಡರಾದ ವೆಂಕಟೇಶ್‌ಪ್ರಸಾದ್‌, ರಾಜೇಂದ್ರ, ಪ್ರಸನ್ನ, ರಾಜು ಇತರರು ಹಾಜರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next