Advertisement

ಪತ್ರಿಕೆ ಹಂಚುವ ಹುಡುಗರನ್ನು ಗೌರವಿಸಿ

01:54 PM Jan 14, 2021 | Team Udayavani |

ವಾಡಿ: ದಿನಪತ್ರಿಕೆ ರೂಪದಲ್ಲಿ ಪ್ರಪಂಚದ ಜ್ಞಾನವನ್ನು ಹೊತ್ತು ಬೆಳ್ಳಂಬೆಳಗ್ಗೆ ಮನೆ ಬಾಗಿಲಿಗೆ ಬರುವ ಹುಡುಗರನ್ನು ಓದುಗರು ಗೌರವದಿಂದ ಕಾಣಬೇಕು ಎಂದು ಪುರಸಭೆ ಉಪಾಧ್ಯಕ್ಷ ತಿಮ್ಮಯ್ಯ ಪವಾರ ಹೇಳಿದರು.

Advertisement

ಪಟ್ಟಣದ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅವರ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ದಿನಪತ್ರಿಕೆಗಳ ವಿತರಕರಿಗೆ ಸ್ವೆಟರ್‌ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಅನೇಕ ಮಹಾನ್‌ ವ್ಯಕ್ತಿಗಳು ಬಾಲ್ಯದ ದಿನಗಳಲ್ಲಿ ಹಾಲು, ದಿನಪತ್ರಿಕೆ ವಿತರಿಸಿ ಎತ್ತರಕ್ಕೆ ಬೆಳೆದವರಿದ್ದಾರೆ. ಒಂದು ದಿನಪತ್ರಿಕೆ ಮುದ್ರಣಗೊಂಡು ಓದುಗರ ಕೈ ಸೇರುವ ಪ್ರಸಂಗದ ಹಿಂದೆ ನೂರಾರು ಜನರ ಪರಿಶ್ರಮವಿರುತ್ತದೆ. ಮುದ್ರಣಗೊಂಡ ಪತ್ರಿಕೆಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಹುಡುಗರು ಪಡಬಾರದ ಕಷ್ಟಪಟ್ಟಿರುತ್ತಾರೆ ಎಂಬುದನ್ನು ಓದುಗರು ಮರೆಯಬಾರದು ಎಂದರು.

ಇದನ್ನೂ ಓದಿ:ಆನೆಕಾಲು ರೋಗ ನಿಯಂತ್ರಣಕ್ಕೆ ಔಷಧಿ ನೀಡಿಕೆ

ಪುರಸಭೆ ಸದಸ್ಯ ದೇವೇಂದ್  ಕರದಳ್ಳಿ ಮಾತನಾಡಿ, ವರದಿಗಾರನಿಂದ ಸಿದ್ಧವಾಗುವ ಒಂದು ಸುದ್ದಿ ಸಂಪಾದಕರಿಂದ ಮಾನ್ಯತೆ ಪಡೆದು ಮುದ್ರಣವಾಗಿ ನಮ್ಮ ಕೈ ಸೇರುವುದರ ಹಿಂದೆ ವಿತರಕರ ಸೇವೆ ದೊಡ್ಡದಿದೆ. ದಿನಪತ್ರಿಕೆ ಓದದೆ ನಮಗೆ ದಿನವೇ ಹೋಗುವುದಿಲ್ಲ. ಕಡಿಮೆ ಕಾಸಿಗಾಗಿ ದುಡಿಯುವ ದಿನಪತ್ರಿಕೆಗಳ ವಿತರಕರು ಚಳಿಗಾಲ ಮತ್ತ ಮಳೆಗಾಲಗಳಲ್ಲಿ ಆರೋಗ್ಯ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಹ ಕಾರ್ಯದರ್ಶಿ ಮಡಿವಾಳಪ್ಪ ಹೇರೂರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಂಘಟನಾ ಧಿಕಾರಿ ಚಂದ್ರಕಾಂತ ಪಾಟೀಲ, ಕಾಶಿನಾಥ ಧನ್ನಿ, ಕೆ.ವಿರೂಪಾಕ್ಷಿ, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಮಲ್ಲಯ್ಯ ಗುತ್ತೇದಾರ, ವಿಶಾಲ ನಂದೂರಕರ, ಮುಖಂಡರಾದ ತುಕಾರಾಮ ರಾಠೊಡ, ವಿಜಯಕುಮಾರ ಸಿಂಗೆ, ಅಶ್ರಫ್‌ಖಾನ್‌, ಪರಶುರಾಮ ಕಟ್ಟಿಮನಿ, ಶರಣಪ್ಪ ವಾಡೇಕರ, ಅಬ್ರಾಹಂ ರಾಜಣ್ಣ ಪಾಲ್ಗೊಂಡಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next