Advertisement

ಕಾನೂನು ಪಾಲಿಸುವುದರ ಜತೆಗೆ ಗೌರವಿಸಿ

04:03 PM Aug 26, 2019 | Team Udayavani |

ತಿಪಟೂರು: ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ರಾಜಕಾರಣಿಗಳು, ಅಧಿಕಾರಿಗಳು, ಶ್ರೀಸಾಮಾನ್ಯರು ಸೇರಿದಂತೆ ಎಲ್ಲರಿಗೂ ಈ ನೆಲದಲ್ಲಿ ಒಂದೇ ರೀತಿಯ ಕಾನೂನುಗಳಿದ್ದು, ಪಾಲಿಸಬೇಕು. ಜತೆಗೆ ಗೌರವಿಸಬೇಕು ಎಂದು ಹೈಕೋರ್ಟ್‌ ವಕೀಲ ಜಿ.ಎಸ್‌. ಪ್ರಸನ್ನಕುಮಾರ್‌ ತಿಳಿಸಿದರು.

Advertisement

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸುಭದ್ರ ಸಮಾಜಕ್ಕಾಗಿ ವ್ಯವಸ್ಥಿತ ಕಾನೂನು ಎಂಬ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ನಿರ್ದಿಷ್ಟ ಹಾಗೂ ಏಕ ಕಾನೂನಿನ ಅಡಿಯಲ್ಲಿ ಎಲ್ಲರೂ ಜೀವನ ನಡೆಸಬೇಕು. ಇದನ್ನೇ ಮಹಾತ್ಮ ಗಾಂಧೀಜಿ, ರಾಮ ರಾಜ್ಯ ಕಲ್ಪನೆ ಎಂದಿದ್ದರು. ಎಲ್ಲಾ ಅಂಶಗಳ ಆಧಾರದ ಮೇಲೆ ಪ್ರಜಾಪ್ರಭುತ್ವದಲ್ಲಿ ವ್ಯವಸ್ಥಿತ, ನಿರ್ದಿಷ್ಟ ಕಾನೂನು ರಚಿಸಿಕೊಳ್ಳುವುದು ಹಾಗೂ ಅದನ್ನು ಪರಿಪಾಲನೆ ಮಾಡಬೇಕಾದ ಗುಣ ನಾವು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳಾದ ನೀವು ಸುಭದ್ರ, ಸುವ್ಯವಸ್ಥಿತ ಕಾನೂನಿನಡಿಯಲ್ಲಿ ಸಾಮಾಜಿಕ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಎಲ್ಲಾ ಭಾಷೆಗಳಿಗಿಂತ ಕನ್ನಡ ಭಾಷೆ ಹೆಚ್ಚು ವಿಮರ್ಶಕ ಹಾಗೂ ಸ್ವಾರಸ್ಯವಾದ ಭಾಷೆಯಾಗಿದೆ. ನಮ್ಮ ಭಾವನೆಗಳನ್ನು ಸುಲಭವಾಗಿ ಮಾತೃ ಭಾಷೆಯಿಂದ ಮಾತ್ರ ಹಂಚಿಕೊಳ್ಳಬಹುದಾಗಿದೆ. ಕನ್ನಡ ಭಾಷೆಯ ಶಬ್ದಕ್ಕೆ ತನ್ನದೇ ಮಹತ್ವವಿದೆ. ನಮ್ಮ ಭಾಷೆ ಕಣ್ಮರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಪ್ರಾಂಶುಪಾಲ ಡಾ. ನಂದೀಶಯ್ಯ ಮಾತನಾಡಿ, ಮನುಷ್ಯನಿಗೆ ಗಾಳಿ, ನೀರು ಹೇಗೆ ಮುಖ್ಯವೋ ಹಾಗೆಯೇ ಕಾನೂನು ಅವಶ್ಯ. ದಿನನಿತ್ಯದ ಜೀವನಕ್ಕೆ ಕನಿಷ್ಠ ಕಾನೂನಿನ ಅರಿವು ಎಷ್ಟು ಬೇಕೊ ಅಷ್ಟನ್ನಾ ದರೂ ತಿಳಿದುಕೊಳ್ಳಬೇಕು. ಕಾನೂನಿನಡಿಯಲ್ಲಿ ನಡೆದುಕೊಂಡರೆ ಸುಭದ್ರ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವಾಗ ಲಿದೆ ಎಂದರು. ಕಾಲೇಜಿನ ಎಲ್ಲಾ ವಿಭಾಗ ಗಳ ಮುಖ್ಯಸ್ಥರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next