Advertisement

ಲಿಂಗಾಯತ ನಾಯಕರ ಬಗ್ಗೆ ಗೌರವ: ಸಿದ್ದು

11:00 PM Apr 26, 2023 | Team Udayavani |

ಹೂವಿನಹಡಗಲಿ: ನಾನು ಲಿಂಗಾಯತ ನಾಯಕರ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ಅಲ್ಲದೆ ಬಸವಾದಿ ಶರಣರ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಬಸವ ತತ್ವವನ್ನು ಜೀವನದಲ್ಲಿ ಪಾಲಿಸಿದವನಾಗಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಭ್ರಷ್ಟ ಆಡಳಿತ ನೀಡಿದ್ದಾರೆ ಎಂದು ಹೇಳಿದರೆ ಬಿಜೆಪಿಯವರು ಅದನ್ನು ತಿರುಚಿ ಲಿಂಗಾಯತರು ಭ್ರಷ್ಟ ಆಡಳಿತ ಮಾಡಿದ್ದಾರೆ ಎಂದು ತಾನು ಹೇಳಿರುವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಲಿಂಗಾಯತ ನಾಯಕರಾಗಿದ್ದ ಎಸ್‌.ಆರ್‌.ಕಂಠಿ, ವೀರೇಂದ್ರ ಪಾಟೀಲ್‌, ಎಸ್‌.ಆರ್‌. ಬೊಮ್ಮಾಯಿ, ಜೆ.ಎಚ್‌.ಪಟೇಲ್‌ ಉತ್ತಮ ಆಡಳಿತ ನೀಡಿದ್ದಾರೆ. ಆದರೆ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯಂತ ಭ್ರಷ್ಟ ಸಿಎಂ ಆಗಿದ್ದಾರೆ. 2013ರಲ್ಲಿ ನಾನು ಸಿಎಂ ಆದ ಕೂಡಲೇ ಬಡವರು, ದಲಿತರು ರೈತರು ಹಾಗೂ ಮಹಿಳೆಯರ ಪರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next