Advertisement
ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಕುರಿತಾಗಿ “ತರಂಗ’ ಹೊರತಂದ “ಸುಪ್ರಸನ್ನ’ ವಿಶೇಷ ಸಂಚಿಕೆಯನ್ನು ಮಣಿಪಾಲದ ಗೀತಾಮಂದಿರದಲ್ಲಿ ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ಶ್ರೀಪಾದರು ಸರಳ ಮತ್ತು ಸುಂದರ ಮಾತುಗಳಿಂದ ದುಶ್ಚಟಗಳ ದಾಸರಾದವರನ್ನು ಸನ್ಮಾರ್ಗಕ್ಕೆ ಕರೆತರುವವರು. ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ ವಿದ್ಯಾರ್ಥಿಗಳಿಗೆ ಪುಸ್ತಕ, ಅನ್ನದಾಸೋಹ, ಸಾರಿಗೆ ವ್ಯವಸ್ಥೆ ಮಾಡಿ ಶಿಕ್ಷಣದ ಬಗ್ಗೆ ತಮಗಿರುವ ಕಳಕಳಿಯನ್ನು ಕಾರ್ಯರೂಪದಲ್ಲಿ ವ್ಯಕ್ತಪಡಿಸಿರುವರು. ಚಿಕಿತ್ಸಾಲಯ, ಸಂಸ್ಕೃತ ಭಾಷಾಭಿವೃದ್ಧಿ, ಯೋಗಾಭ್ಯಾಸ ಪ್ರಚಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ತಪಸ್ಸಿನಂತೆ ನಡೆಸಿಕೊಂಡು ಬಂದಿರುವರು ಎಂದರು.
Related Articles
ಸದ್ದುಗದ್ದಲವಿಲ್ಲದೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇವೆಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀಪಾದರ ಸಿದ್ಧಿಯನ್ನು ಪುಸ್ತಕ ರೂಪದಲ್ಲಿ ಓದುಗರ ಮುಂದಿಡುವ ಸೌಭಾಗ್ಯ ನಮ್ಮದಾಯಿತು. ದೊಡ್ಡ ಮಟ್ಟದಲ್ಲಿ ಈ ಪುಸ್ತಕ ಬಿಡುಗಡೆ ಮಾಡಬೇಕೆಂಬ ಮಹದಾಸೆ ಇತ್ತಾದರೂ, ಜಗತ್ತನ್ನು ಕಾಡುತ್ತಿರುವ ಕೊರೊನಾ ಮಹಾಮಾರಿಯನ್ನು ಹತೋಟಿಗೆ ತರಲು ದೇಶ ಮಾಡುತ್ತಿರುವ ಪ್ರಯತ್ನಕ್ಕೆ ಕೈಜೋಡಿಸುವ ಉದ್ದೇಶದಿಂದ ಸರಳವಾಗಿ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. ಜಗತ್ತನ್ನೆ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್‌ನಿಂದ ಮುಕ್ತಿ ಸಿಗಲಿ ಎನ್ನುವ ಸಾಮೂಹಿಕ ಪ್ರಾರ್ಥನೆಯನ್ನು ಎಲ್ಲರೂ ಕೈಗೊಳ್ಳಬೇಕೆಂಬ ಆಶಯವನ್ನು ಸಂಧ್ಯಾ ಎಸ್. ಪೈ ವ್ಯಕ್ತಪಡಿಸಿದರು.
Advertisement