Advertisement

ಅರಣ್ಯವಾಸಿಗಳ ತೆರವು ಆದೇಶಕ್ಕೆ ತಡೆ

01:05 AM Mar 01, 2019 | Team Udayavani |

ಹೊಸದಿಲ್ಲಿ: ಅರಣ್ಯವಾಸಿಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಫೆ. 13 ರಂದು ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ಗುರುವಾರ ತಡೆ ನೀಡಿದೆ. ಈ ಆದೇಶದಿಂದಾಗಿ 21 ರಾಜ್ಯಗಳ 11.8ಲಕ್ಷ ಜನರಿಗೆ ಸ್ಥಳಾಂತರ ಆತಂಕ ಮೂಡಿತ್ತು. ನ್ಯಾಯಮೂರ್ತಿ ಅರುಣ್‌ ಮಿಶ್ರಾ ಮತ್ತು ನವೀನ್‌ ಸಿನ್ಹಾ ಪೀಠ ಗುರುವಾರ ಈ ಆದೇಶವನ್ನು ನೀಡಿದ್ದು, ಅರಣ್ಯವಾಸಿಗಳು ಸಲ್ಲಿಸಿದ ಕ್ಲೇಮ್‌ಗಳನ್ನು ರಾಜ್ಯ ಸರಕಾರ ತಿರಸ್ಕರಿಸಿದ ಪ್ರಕ್ರಿಯೆಯ ವಿವರ ನೀಡುವಂತೆ ಆದೇಶಿಸಿದೆ. ಅಲ್ಲದೆ, ಜುಲೈ 10ಕ್ಕೆ ವಿಚಾರಣೆಯನ್ನು ನಿಗದಿಸಿದೆ. 

Advertisement

ತೀರ್ಪಿಗೆ ಸಂಬಂಧಿಸಿದಂತೆ ದೇಶಾದ್ಯಂತ ಅರಣ್ಯವಾಸಿಗಳಲ್ಲಿ ಆತಂಕ ಮನೆ ಮಾಡುತ್ತಿ ದ್ದಂತೆಯೇ, ತೀರ್ಪು ಮರುಪರಿಶೀಲಿ ಸುವಂತೆ ಸುಪ್ರೀಂಕೋರ್ಟ್‌ಗೆ ಬುಧವಾರ ಕೇಂದ್ರ ಸರಕಾರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್‌, ತೀರ್ಪು ಮರುಪರಿಶೀಲಿಸಲು ಒಪ್ಪಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆ ನಡೆಸಿದ ಕೋರ್ಟ್‌, ಈ ಹಿಂದೆ ಅರಣ್ಯವಾಸಿಗಳನ್ನು ಸ್ಥಳಾಂತರಗೊಳಿಸುವಾಗ ತೆಗೆದುಕೊಂಡ ವಿವಿಧ ಕ್ರಮಗಳ ವಿವರ ನೀಡುವಂತೆಯೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next