Advertisement

ಮನೋನಿಗ್ರಹದಿಂದ ದುಶ್ಚಟ ಮುಕ್ತಿ: ಡಾ|ಹೆಗ್ಗಡೆ

01:46 AM Oct 12, 2021 | Team Udayavani |

ಬೆಳ್ತಂಗಡಿ: ದೇವರ ಭಕ್ತಿ, ಭಜನೆ, ಸತ್ಸಂಗ ಮತ್ತು ಜನರ ಸಹವಾಸದಿಂದ ನಮ್ಮ ಜೀವನ ಕ್ರಮ ಬದಲಾಗುತ್ತದೆ. ಚಂಚಲ ಮನಸ್ಸನ್ನು ನಿಗ್ರಹಿಸಿ ದೃಢ ಸಂಕಲ್ಪ ಹೊಂದಿದಾಗ ಕುಡಿತದ ದಾಸ್ಯದಿಂದ ಹೊರಬರಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ಉಜಿರೆ ಲಾೖಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖ ಲಾಗಿ ಮದ್ಯ ವರ್ಜನದ ಚಿಕಿತ್ಸೆ ಪಡೆದ 162ನೇ ವಿಶೇಷ ಮದ್ಯ ವರ್ಜನ ಶಿಬಿರದ 59 ಮಂದಿ ಶಿಬಿರಾರ್ಥಿ ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂಸಾರದಲ್ಲಿ ಕಷ್ಟ, ಸುಖ, ದುಃಖ, ನೋವುಗಳು ಸ್ವಾಭಾವಿಕವಾಗಿ ಇರುತ್ತದೆ. ಇವುಗಳಿಗೆಲ್ಲ ಮದ್ಯಪಾನ ಪರಿಹಾರವಲ್ಲ ಎಂದರು.

ಕೋವಿಡ್‌ ಕಾರಣಕ್ಕಾಗಿ ಕಳೆದ 4 ತಿಂಗಳುಗಳಿಂದ ಮದ್ಯವರ್ಜನ ಶಿಬಿರಗಳನ್ನು ಕೇಂದ್ರದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳ 59 ಮಂದಿ ಪಾಲ್ಗೊಂಡಿದ್ದಾರೆ ಎಂದರು.

ಶಿಬಿರದ ನೇತೃತ್ವ ವಹಿಸಿದ್ದ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿ. ಪಾçಸ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳ ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳಾದ ಡಾ| ಕರಿಷ್ಮಾ, ಡಾ| ಮೋಹನ್‌ದಾಸ್‌ ಗೌಡ, ಶಿಬಿರಾರ್ಥಿಗಳ ಯೋಗಕ್ಷೇಮ ಚಿಂತನೆಯೊಂದಿಗೆ ವಿಮರ್ಶೆ ನಡೆಸಿ ಚಿಕಿತ್ಸೆ ನೀಡಿದ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ ಮನೋ ವೈದ್ಯರನ್ನು ಅಭಿನಂದಿಸಲಾಯಿತು.

Advertisement

ಇದನ್ನೂ ಓದಿ:ಹಣ ಕಂಡ್ರೆ ಬಾಯಿಬಿಡುವ ಕಿಮ್‌!  ಬಿಬಿಸಿ ಸಂದರ್ಶನದಲ್ಲಿ ಸೇನಾ ಕಮಾಂಡರ್‌ ಮಾಹಿತಿ

ಶಿರಾ ಜಿಲ್ಲೆಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್‌. ಕೆ. ರಾಮಚಂದ್ರ ಗುಪ್ತ ಮತ್ತು ಪದಾಧಿಕಾರಿಗಳು, ಶಿರಾ ಜಿಲ್ಲಾ ನಿರ್ದೇಶಕ ದಿನೇಶ್‌ ಉಪಸ್ಥಿತರಿದ್ದರು. ಯೋಜನಾಧಿಕಾರಿ ಮೋಹನ್‌, ಶಿಬಿರಾಧಿಕಾರಿಗಳಾದ ನಂದ ಕುಮಾರ್‌, ದೇವಿಪ್ರಸಾದ್‌, ನಾಗ ರಾಜ್‌, ಆರೋಗ್ಯ ಸಹಾಯಕರಾದ ಫಿಲೋಮಿನಾ ಡಿ’ಸೋಜಾ, ವೆಂಕಟೇಶ್‌ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಅ. 18ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಮದ್ಯಪಾನದ ಪಿಡುಗಿಗೆ ಶಾಶ್ವತವಾದ ಜಾಗೃತಿ ಬೇಕು. ನಾನು ಸೋತಿದ್ದೇನೆ, ನಾನು ಗೆಲ್ಲಬೇಕು ಎನ್ನುವ ಎರಡು ಆಲೋಚನೆಗಳಿಗೆ ಮನುಷ್ಯರು ಮದ್ಯಪಾನ ಮಾಡು ತ್ತಾರೆ. ಗೆದ್ದಾಗ ಸಂತೋಷ ಆಚರಿಸಲು, ದುಃಖ ಆದಾಗ ದುಃಖವನ್ನು ಮರೆ ಯಲು ಕುಡಿತದ ಚಟಕ್ಕೆ ಮೊರೆ ಹೋಗು ತ್ತಾರೆ. ಇದೆರಡರ ಹೊರತಾಗಿ ಏನು ಮಾಡ ಬಹುದು ಎಂಬ ವ್ಯಾಖ್ಯಾನ ವನ್ನು ಕಂಡು ಹುಡುಕ ಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next