Advertisement

ಆಂತರಿಕ ಸಮಸ್ಯೆಯಿಂದ ಶಾಸಕರ ರಾಜೀನಾಮೆ: ಡಿ.ಎಚ್. ಶಂಕರಮೂರ್ತಿ

01:49 AM Jul 22, 2019 | Team Udayavani |

ಬಂಟ್ವಾಳ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಆಂತರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಅವರ ಶಾಸಕರು ರಾಜೀನಾಮೆ ನೀಡಿದ್ದು, ಅದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.

Advertisement

ಅವರು ರವಿವಾರ ಪೊಳಲಿಯಲ್ಲಿ ಪತ್ರಕರ್ತರ ಜತೆ ಮಾತನಾಡಿ, ಶಾಸಕರ ರಾಜೀನಾಮೆಯ ವಿಚಾರವಾಗಿ ಮೈತ್ರಿ ಸರಕಾರ ಬಿಜೆಪಿ ಮೇಲೆ ವೃಥಾ ಆರೋಪ ಹೊರಿಸುತ್ತಿದೆ. ಶಾಸಕರೇನೂ ಗುಟ್ಟಾಗಿ ರಾಜೀನಾಮೆ ಕೊಟ್ಟಿಲ್ಲ. ಓಡೋಡಿ ಬಂದು ಎರಡೆರಡು ಬಾರಿ ರಾಜೀನಾಮೆ ಕೊಟ್ಟಿದ್ದಾರೆ. ಈ ಸರಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪರಸ್ಪರ ಕಿತ್ತಾಟ, ಅಪನಂಬಿಕೆಯೇ ಬಲವಾಗಿರುವ ಹಿನ್ನೆಲೆಯಲ್ಲೇ ಸರಕಾರದ ವಿರುದ್ಧ ತಿರುಗಿಬಿದ್ದು ಆಡಳಿತ ಪಕ್ಷದ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ. ಈ ದೋಸ್ತಿ ಸರಕಾರ ಬೇಡ ಎನ್ನುವ ಸಂದೇಶವನ್ನೂ ಅವರು ರಾಜ್ಯದ ಜನತೆಗೆ ನೀಡಿದ್ದಾರೆ ಎಂದರು.

ವಿಶ್ವಾಸ ಮತ ಪ್ರಕ್ರಿಯೆಯನ್ನು ಜು. 22ರಂದು ಮುಗಿಸುವುದಾಗಿ ಸ್ಪೀಕರ್‌ ತಿಳಿಸಿದ್ದು, ವಿಶ್ವಾಸಮತ ಪಡೆಯದೇ ಇದ್ದರೆ ಮೈತ್ರಿ ಸರಕಾರ ಬಿದ್ದು ಹೊಸ ಸರಕಾರ ರಚನೆಯ ಪ್ರಯತ್ನಗಳು ನಡೆಯಲಿವೆ ಎಂದರು.

ಸರಕಾರಕ್ಕೆ ರಾಜ್ಯಪಾಲರು ನೀಡಿದ ಪತ್ರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಸರಕಾರ ಮತ್ತು ರಾಜ್ಯಪಾಲರ ನಡುವಿನ ವಿಚಾರ, ಅದರ ಕುರಿತು ಈಗ ಏನನ್ನೂ ಹೇಳಲಾಗದು ಎಂದರು.ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ತುಂಗಪ್ಪ ಬಂಗೇರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next