ಚನ್ನಪಟ್ಟಣ: ಕೋಟೆ ಬಡಾವಣೆಯ ನೂತನ ಕೋರ್ಟ್ ಪಕ್ಕದಲ್ಲಿರುವ ನೀರಿನ ಟ್ಯಾಂಕ್‌ಗೆ ಮಹಿಳೆಯ ಕಾಲು ಕತ್ತರಿಸಿ ಹಾಕಿರುವುದು ದೊಡ್ಡ ಸುದ್ದಿಯಾಗಿದ್ದು, ಅದು ಹಾಗೆಯೇ ಉಳಿದಿದ್ದು, ಕುಡಿಯುವ ಕಾವೇರಿ ನೀರಿಗೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಎರಡೂ ವಾರ್ಡಿನ ಜನರಿಗೆ ನೀರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟೆ ಬಡಾವಣೆಯ 10 ಹಾಗೂ 11ನೇ ವಾರ್ಡಿನ ನಿವಾಸಿಗಳು ಭಾನುವಾ ರ ಕೋಟೆ ವರದರಾಜಸ್ವಾಮಿ ದೇವಸ್ಥಾನದ ಬಳಿ ಸಭೆ ಸೇರಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
2 ತಿಂಗಳಿಂದ ನೀರಿನ ಸಮಸ್ಯೆ: ನೀರಿನ ಟ್ಯಾಂಕ್ ಮಲಿನಗೊಂಡು ಎರಡು ತಿಂಗಳಾದ ರೂ ಕುಡಿಯುವ ಕಾವೇರಿ ನೀರು ಸರಬರಾಜಾಗುತ್ತಿಲ್ಲ, ಇದುವರೆಗೂ ಟ್ಯಾಂಕ್‌ಗೆ ಪಿನಾಯಿಲ್, ಬ್ಲೀಚಿಂಗ್ ಪೌಡರ್‌ಗಳಿಂದ ಸ್ವಚ್ಛಗೊಳಿಸಿ ಶುದ್ಧೀಕರಣ ಮಾಡಿ ನೀರು ಬಿಡುವುದು ಸೂಕ್ತ ಎಂದು 10ನೇ ವಾರ್ಡ್ ನಿವಾಸಿ ರಾಮ ಸಂಜೀವಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸ್ವಚ್ಛತೆಗೆ ಆಧುನಿಕ ಮಾರ್ಗ ಬಳಸಿ: ನೂತನ ಪೈಪ್ ಲೈನ್ ಸದ್ಯಕ್ಕೆ ಅಳವಡಿಸುವುದಕ್ಕೆ ಸಾಧ್ಯ ವಾಗದಿದ್ದರೆ, ನೀರು ಶುದ್ಧೀಕರಣಗೊಳಿಸಿದ ಟ್ಯಾಂಕ್‌ನಿಂದ ಕೆಮಿಕಲ್ ಬೆರೆಸಿ, ಪೈಪ್‌ಲೈನ್‌ನಲ್ಲಿ ರಭಸವಾಗಿ ನೀರು ಬಿಟ್ಟು ಸ್ವಚ್ಛಗೊಳಿಸಿದರೆ, ಗಲೀಜು ನೀರೆಲ್ಲ ಆಚೆಗೆ ಹೋಗುತ್ತದೆ. ಇದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ನಿವೃತ್ತ ತೋಟಗಾರಿಕೆ ಸಹಾಯಕ ಅಧಿಕಾರಿ ರಾಮಚಂದ್ರು ತಿಳಿಸಿದರು.
ನೀರು ಬಿಡದೇ ಬಿಲ್ ಕೇಳ್ತಾರೆ: ಬೋರ್‌ವೆಲ್ ಉಪ್ಪು ನೀರಿನಿಂದ ಸೋಲಾರ್ ತುಕ್ಕು ಹಿಡಿಯು ತ್ತಿದೆ. ಇದರಿಂದ ನಿವಾಸಿಗಳಿಗೆ ಸಾವಿರಾರು ರೂ.ದಂಡ ತೆತ್ತಬೇಕಾಗುತ್ತದೆ. ಮಕ್ಕಳಿಗೆ ಮತ್ತು ವಯಸ್ಸಾದವರಿ ಗೆ ರೋಗರುಜಿನಿಗಳು ಈಗಾಗಲೆ ಕಾಣಿಸಿಕೊಳ್ಳುತ್ತಿದೆ. ಟ್ಯಾಂ ಕ್‌ನಿಂದ ನೀರು ಬಿಡದಿದ್ದರೂ ಕಾವೇರಿ ನೀರಿನ ಬಿಲ್ಲು ಮನೆ ಗಳಿಗೆ ತಲುಪಿಸುತ್ತಿದ್ದಾರೆ. ನೀರು ಬರದೇ ಬಿಲ್ಲು ಕೇಳುವುದು ಯಾವ ನ್ಯಾಯ ಎಂದು ಮಾರುತಿ ಬಡಾವಣೆ ನಿವಾಸಿ ಶ್ರೀನಿವಾಸ್ (ಎಂಆರ್‌ಎಫ್) ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ನೀರಿನ ಟ್ಯಾಂಕ್ ಬಳಿ ಶಾಸಕರಾದ ಎಚ್. ಡಿ.ಕುಮಾರಸ್ವಾಮಿ ಖುದ್ದು ಭೇಟಿ ನೀಡಿಸಮಸ್ಯೆ ಆಲಿಸಿದರೂ ಕ್ರಮ ಕೈಗೊಳ್ಳಲಿಲ್ಲ, ನೂತನನಗರಸಭೆ ಅಧ್ಯಕ್ಷ ಪ್ರಶಾಂತ್ ನೀರಿನ ಟ್ಯಾಂಕ್ ಹತ್ತಿರ ಇದುವರೆಗೂ ಸುಳಿಯಲಿಲ್ಲ ಎಂದು ತಮ್ಮ ನೋವುಗಳನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ 10ನೇ ವಾರ್ಡ್ ನಗರಸಭೆ ಸದಸ್ಯೆ ಜಯ ಮಾಲಾ ನಂಜುಂಡಯ್ಯ, 11ನೇ ವಾರ್ಡ್ ಸದಸ್ಯ ನಾಗೇಶ್ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ, ಮಧು, ಸಿದ್ದ ಪ್ಪಾಜಿ, ರೇವಣ್ಣ, ಶಿವರಾಮು, ಆತ್ಮರಾಮು, ಗೌರಮ್ಮ, ಅಭಿಷೇಕ್, ರೋಹಿತ್, ಅಂಗಡಿ ಶಿವ ರಾಮು, ಪಾರ್ವತಮ್ಮ, ನಾಗೇಂದ್ರ, ಕಸಾಪ ಮಾಜಿ ಅಧ್ಯಕ್ಷ ಎಂ. ಶಿವಮಾದು, ಮೋಹನ್ ಹಾಜರಿದ್ದರು.