Advertisement

ಮನೆ ತೆರವು ಮಾಡದಂತೆ ನಿವಾಸಿಗಳ ಆಗ್ರಹ

04:29 PM Sep 20, 2019 | Suhan S |

ಕೋಲಾರ: ಕಸಬಾ ಹೋಬಳಿ ಪೇಟೆಚಾಮನಹಳ್ಳಿ ಗ್ರಾಮದ ಗೋಮಾಳ ಸರ್ವೆ ನಂ.71 ರಲ್ಲಿ ಮನೆಕಟ್ಟಿಕೊಂಡು ಜೀವನ ನಡೆಸುತ್ತಿರುವ ನಮ್ಮನ್ನು ತೆರವುಗೊಳಿಸದಂತೆ ಆಗ್ರಹಿಸಿ ಈ ಭಾಗದ ನಿವಾಸಿಗಳು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ ನಿವಾಸಿಗಳು, 41 ಎಕರೆ ಜಮೀನಿನಲ್ಲಿ 2.20 ಗುಂಟೆ ಜಮೀನಿನಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದು, ಇದೀಗ ಎನ್‌ಸಿಸಿಯವರು ಮನೆ ಖಾಲಿ ಮಾಡುವಂತೆ ತೊಂದರೆ ನೀಡುತ್ತಿದ್ದಾರೆಎಂದು ಆರೋಪಿಸಿದರು.

Advertisement

ಅಳಲು: ಈ ಜಾಗದಲ್ಲಿ ಗ್ರಾಮದ ಕಡುಬಡವರು ಹಾಗೂ ನಿರ್ಗತಿಕರು 2 ಎಕರೆ ಸರಕಾರಿ ಗೋಮಾಳ ಜಮೀನಿನಲ್ಲಿ ಹಲವು ವರ್ಷಗಳಿಂದಲೂ ಸರಕಾರದಿಂದ ಮಂಜೂರಾ ಗಿರುವ ವಾಸದ ಮನೆಗಳಲ್ಲಿ ಜೀವನ ಮಾಡುತ್ತಿದ್ದು, ಈಗ ಏಕಾಏಕಿ ಖಾಲಿ ಮಾಡಿ ಎಂದರೆ ನಾವು ಬೀದಿಗೆ ಬೀಳುತ್ತೇವೆ ಎಂದು ಅಳಲು ತೋಡಿಕೊಂಡರು. 1998ನೇ ಸಾಲಿನಲ್ಲಿದ್ದ ಅಂದಿನ ಜಿಲ್ಲಾಧಿಕಾರಿ ಸನಾವುಲ್ಲಾ, ಗ್ರಾಮಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ, ಈ ಹಿಂದೆ ಎನ್‌ಸಿಸಿ ಕಚೇರಿ ಮೀಸಲಿಟ್ಟಿದ್ದ ಜಮೀನಿನಲ್ಲಿ ಮನೆಗಳು ನಿರ್ಮಿಸಿರುವುದರಿಂದ ಇನ್ನೂ ಉಳಿಕೆ ಇರುವ ಸರಕಾರಿ ಗೋಮಾಳ ಜಾಗವನ್ನು ಎನ್‌ಸಿಸಿ ಕಚೇರಿ ನಿರ್ಮಿಸಲು ಗುರುತಿಸಿದ್ದರು. ಆದರೆ, ಈಗ ಎನ್‌ಸಿಸಿ ಕಚೇರಿ ಸಿಬ್ಬಂದಿ ವಾಸ ಮಾಡು ತ್ತಿರುವ ಮನೆಗಳನ್ನು ತೆರವುಗೊಳಿಸುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ಈಗಾಗಲೇ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಹಾಕಿಕೊಂಡಿದ್ದು, ಅದರಲ್ಲಿ 10-12 ಮಂದಿ ಬ್ಯಾಂಕಿನಲ್ಲಿ ಹಣ ಕಟ್ಟಿದ್ದಾರೆ. ಆದ್ದರಿಂದ ಕಡುಬಡವರಾದ ನಮಗೆ ಸೂಕ್ತ ನ್ಯಾಯ ಕೊಡಿಸಿ ಮನೆಗಳನ್ನು ಹಾಗೆಯೇ ಉಳಿಸಿಕೊಡಬೇಕು ಎಂದು ಮನವಿಮೂಲಕ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೋಚಿಮುಲ್‌ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ಗ್ರಾಪಂ ಸದಸ್ಯರಾದ ಕೆ.ಆನಂದ, ಯಶೋದಮ್ಮ, ಶೋಭಾರಾಣಿ, ಗ್ರಾಮಸ್ಥರಾದ ಎಂ.ನಾರಾಯಣಪ್ಪ, ಚಂದ್ರಪ್ರಭಾ, ಗುಲ್ಲಪ್ಪ, ಜಗದೀಶ್‌, ಶ್ರೀನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next