ನೆಲಮಂಗಲ: ಸರ್ಕಾರ ನಿವೇಶನಗಳನ್ನು ನೀಡಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ ಮೇಲೆ ರಸ್ತೆ ಕಾಮಗಾರಿ ನೆಪದಲ್ಲಿ ಮನೆಗಳ ತೆರವಿಗೆ ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ) ಮುಂದಾಗಿದ್ದು, ಗ್ರಾಮಸ್ಥರುವಿರೋಧ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ತಾಲೂಕಿನ ಮೈಲನಹಳ್ಳಿ ಕಾಲೋನಿಯ ಸರ್ವೆ ನಂ 100ರಲ್ಲಿ 207 ನಿವೇಶನಗಳನ್ನು ಸರ್ಕಾರ 2004ರಲ್ಲಿ ವಿತರಣೆ ಮಾಡುವ ಮೂಲಕ ಸೂರಿಲ್ಲದವರಿಗೆ ಆಶ್ರಯವಾಗಿತ್ತು.ನೆಲಮಂಗಲ-ದೊಡ್ಡಬಳ್ಳಾಪುರಮಾರ್ಗದ ರಾಜ್ಯ ಹೆದ್ದಾರಿಯನ್ನು ಅಗಲೀಕರಣ ಮಾಡುವ ಮೂಲಕ ರಸ್ತೆ ಅಭಿವೃದ್ಧಿಗೆ ಮುಂದಾದ ಇಲಾಖೆ, ಸರಿಯಾಗಿ ಸವೆ ಮಾಡದೇ ಗ್ರಾಮದ 40ಕ್ಕೂ ಹೆಚ್ಚು ನಿವೇಶನ ಹಾಗೂ ಮನೆಗಳನ್ನು ತೆರವು ಮಾಡಲು ಮುಂದಾಗಿದೆ.
ಹಕ್ಕುಪತ್ರ ನೀಡಿದ್ದಾರೆ: ಮನೆಯಿಲ್ಲದ ಕಾರಣಕ್ಕೆ ಸಕಾìರದವರು ನಿವೇಶನ ನೀಡಿ ಹಕ್ಕುಪತ್ರಗಳನ್ನು ನೀಡಿದ್ದಾರೆ. ನಿವೇಶನಗಳ ಹಂಚಿಕೆ ಮಾಡುವಾಗ ರಸ್ತೆಗೆ ಹೋಗುವುದು ತಿಳಿದಿರಲಿಲ್ಲವೆ? ಮನೆ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುವಾಗ ಮನೆಗಳ ತೆರವು ಮಾಡುವುದು ಸರಿಯಲ್ಲ. ಪಕ್ಕದ ಖಾಲಿ ಜಾಗದಲ್ಲಿ ರಸ್ತೆ ಮಾಡುವ ಮೂಲಕ ಮನೆಗಳ ರಕ್ಷಣೆ ಮಾಡಬೇಕು ಎಂದು ಗ್ರಾಪಂತಿ ಮಾಜಿ ಅಧ್ಯಕ್ಷ ಅಂಜನಮೂರ್ತಿ ಮನವಿ ಮಾಡಿದರು.
ರಸ್ತೆ ಕಾಮಗಾರಿ ಸ್ಥಗಿತ: ಮೈಲನಹಳ್ಳಿ ಕಾಲೋನಿ ಸಮೀಪದವರೆಗೂ ರಸ್ತೆಯನ್ನು ನೇರವಾಗಿ ಮಾಡಿದ್ದು, ಗ್ರಾಮ ಸಮೀಪವಾಗುತಿದ್ದಂತೆ ಗ್ರಾಮದ ಕಡೆ ಹೆಚ್ಚು ಜಾಗವನ್ನು ತೆಗೆದುಕೊಂಡಿದ್ದಾರೆ. ಮತ್ತೂಂದು ಕಡೆ ಖಾಲಿ ಜಾಗವಿದ್ದು, ಜಾಗದ ಮಾಲೀಕರು ರಸ್ತೆಗೆ ಜಾಗ ಬಿಟ್ಟು ಕೊಡುತ್ತೇವೆ. ಮನೆಗಳನ್ನು ತೆರವು ಮಾಡಬೇಡಿ ಎಂದರೂ ಸಂಸ್ಥೆ ಅಧಿಕಾರಿಗಳು ಮನೆಯ ತೆರವು ಮಾಡಲು ಮುಂದಾಗಿರುವುದು ಖಂಡನೀಯ. ಕಾಮಗಾರಿ ಸ್ಥಗಿತಗೊಳಿಸಿದ್ದು, ಮನೆಗಳ ತೆರವಿಗೆ ಬಿಡುವುದಿಲ್ಲ ಎಂದು ಮುಖಂಡ ಪುಟ್ಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಯ್ಯ, ಕಾಂಗ್ರೆಸ್ ಯುವ ಮುಖಂಡ ದೀಪಕ್ ಕಿರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ದಗಂಗಪ್ಪ, ನಟರಾಜು, ಸತೀಶ್‌ಕುಮಾರ್, ಜಗದಾಂಬಪುಟ್ಟಸ್ವಾಮಿ, ಪ್ರಶಾಂತ್, ಪೇಪರ್ ಬಾಬುರುದ್ರಚಾರ್, ಮುಖಂಡರಾದ ಮುನಿಯಲ್ಲಪ್ಪ, ಪರಶುರಾಮ್ ಇದ್ದರು.