Advertisement

ಮೂಲಭೂತ ಸೌಕರ್ಯಗಳಿಗೆ ನಿವಾಸಿಗಳ ಆಗ್ರಹ

06:17 PM Apr 11, 2021 | Team Udayavani |

ಬೈಲಹೊಂಗಲ: ಪುರಸಭೆ ವ್ಯಾಪ್ತಿಯ ವಾರ್ಡ್‌ ನಂ.21 ರಲ್ಲಿ ಮೂಲಭೂತ ಸೌಲಭ್ಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮರಡಿ ಬಸವೇಶ್ವರ ಗಲ್ಲಿಯ ನಿವಾಸಿಗಳು ರಸ್ತೆಗಿಳಿದು ಪ್ರತಿಭಟಿಸಿ ಜನಪ್ರತಿನಿಧಿಗಳು , ಪುರಸಭೆ ಅಧಿ ಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Advertisement

ವಾರ್ಡ ನಂ 21 ರಲ್ಲಿ ಕಳೆದ 26 ವರ್ಷಗಳ ಹಿಂದೆಗಟಾರ, ರಸ್ತೆ ನಿರ್ಮಾಣ ಮಾಡಿದ್ದು ಇವುಗಳು ಇದೀಗಸಂಪೂರ್ಣವಾಗಿ ಹದಗೆಟ್ಟಿವೆ. ಕುಡಿಯುವ ನೀರಿಗೆಜಲಕುಂಭವಿದ್ದರೂ ಅದು ಸಹ ಉಪಯೋಗಕ್ಕೆ ಬಾರದಂತಿದೆ. ಸಮರ್ಪಕ ಬೀದಿ ದೀಪವಿಲ್ಲ. ಆಳವಾದ ಬಯಲುಕುಸ್ತಿ ಕಣವಿದ್ದು ಅದಕ್ಕೆ ತಡೆಗೋಡೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಈ ಕುರಿತು ಕಳೆದ ಎರಡು ತಿಂಗಳ ಹಿಂದೆ ಶಾಸಕ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿದೆ. ಅವರೆಲ್ಲರೂ ಖುದ್ದಾಗಿ ಭೇಟಿ ನೀಡಿ ಭರವಸೆ ಕೊಟ್ಟಿದ್ದರೂ ಇಲ್ಲಿಯವರೆಗೆ ಸ್ಪಂದನೆ ಇಲ್ಲ ಎಂದು ದೂರಿದರು.

ಕೂಡಲೇ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಲ್ಲದೇ ಬರುವಚುನಾವಣೆಗಳನ್ನು ಬಹಿಷ್ಕರಿಸುದಾಗಿ ಎಚ್ಚರಿಕೆ ನೀಡಿದರು. ಎಂ.ಬಿ. ರಾಯಬಾಗ, ಎ.ಎಂ.ರಾಯಬಾಗ, ಎನ್‌. ಎಂ.ದೇವಲಾಪೂರ, ಕೆ.ಎಂ.ಯಡಳ್ಳಿ, ನಾಗಪ್ಪ ವಾಲಿ,ಮಲ್ಲೇಶ ಉಂಡಿ, ವ್ಹಿ.ಯು.ಕಡಕೋಳ, ಶಿವಪ್ಪ ಹಿಟ್ಟಣಗಿ,ಎ.ಎಸ್‌.ಬೇಪಾರಿ, ಶ್ರೀಶೈಲ ಬೆಣಚಿನಮರಡಿ, ಕುಸುಮಾಮಳಿಮಠ, ಮಹಾಂತೇಶ ಹಾರುಗೊಪ್ಪ, ಸಿ.ಕೆ.ಯಡಳ್ಳಿ, ಜಿ.ಎನ್‌. ಪಾಟೀಲ ಹಾಗೂ ನಾಗರಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next