Advertisement

ಲಸಿಕೆ ಆತಂಕದಿಂದ ಅಸ್ವಸ್ಥಗೊಂಡ ವಸತಿ ಶಾಲೆ ವಿದ್ಯಾರ್ಥಿನಿಯರು

09:44 PM Jul 07, 2022 | Team Udayavani |

ಚಾಮರಾಜನಗರ: ಕೋವಿಡ್ ವ್ಯಾಕ್ಸಿನ್ ಪಡೆದ ಬಳಿಕ ಓರ್ವ ವಿದ್ಯಾರ್ಥಿನಿಗೆ ಜ್ವರ ತಲೆನೋವು ಬಂದಿದ್ದರಿಂದ ಆತಂಕಕ್ಕೊಳಗಾದ ವಿದ್ಯಾರ್ಥಿನಿಯರು ಸುಸ್ತು ಎಂದು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಜ್ಯೋತಿಗೌಡನಪುರ ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.

Advertisement

ಈ ವಸತಿ ಶಾಲೆಯಲ್ಲಿನ 9 ಹಾಗೂ 10 ನೇ ತರಗತಿಯ ಒಟ್ಟು 23 ಮಂದಿ ವಿದ್ಯಾರ್ಥಿಗಳು ಸುಸ್ತು, ತಲೆಸುತ್ತು ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಂಡಿದ್ದಾರೆ.

ವಸತಿ ಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ಎರಡನೇ ಡೋಸ್ ಕೋವಿಡ್ ವ್ಯಾಕ್ಸಿನ್ ಹಾಕಲಾಗಿತ್ತು. ಓರ್ವ ವಿದ್ಯಾರ್ಥಿನಿಗೆ ಜ್ವರ ಬಂದಿದ್ದು ಇಬ್ಬರು ವಿದ್ಯಾರ್ಥಿನಿಯರಿಗೆ ತಲೆನೋವು ಕಾಣಿಸಿಕೊಂಡಿತ್ತು. ಇದನ್ನು ತಿಳಿದ ವಿದ್ಯಾರ್ಥಿನಿಯರು ಗಾಬರಿಗೊಂಡು ಒಬ್ಬರಾದ ಮೇಲೆ ಒಬ್ಬರು ವಿದ್ಯಾರ್ಥಿನಿಯರು, ತಮಗೆ ತಲೆ ಸುತ್ತು, ಸುಸ್ತು, ಎಂದು ಅಸ್ವಸ್ಥಗೊಂಡರು. 23 ಇವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಲೆ ಪ್ರಾಂಶುಪಾಲ ಗೌರಿಶಂಕರ್ ತಿಳಿಸಿದ್ದಾರೆ.

ಎಲ್ಲ ವಿದ್ಯಾರ್ಥಿನಿಯರೂ ಈಗ ಚೇತರಿಸಿಕೊಂಡಿದ್ದು, ಆರೋಗ್ಯದಿಂದಿದ್ದಾರೆ. ಪೋಷಕರೊಂದಿಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ಧಾರೆ ಎಂದು ಅವರು ತಿಳಿಸಿದರು.

ಜಿಲ್ಲಾಸ್ಪತ್ರೆ ವೈದ್ಯ ಡಾ. ವಿದ್ಯಾಸಾಗರ್ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನ್ ನ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ. ಓರ್ವ ವಿದ್ಯಾರ್ಥಿನಿಗೆ ಜ್ವರ ಬಂದದ್ದರಿಂದ ಸಮೂಹ ಸನ್ನಿ ರೀತಿಯಲ್ಲಿ ಮಕ್ಕಳು ಸುಸ್ತು ತಲೆ ಸುತ್ತು ಎಂದು ಅಸ್ವಸ್ಥಗೊಂಡಿದ್ದಾರೆ. ಇದು ಆತಂಕದಿಂದಾದ ಪರಿಣಾಮ ಅಷ್ಟೇ. ಎಲ್ಲರಿಗೂ ಮನೋವೈದ್ಯರು ಕೌನ್ಸಿಲಿಂಗ್ ನಡೆಸಿದ್ದು ಯಾವುದೇ ಅತಂಕಪಡುವ ಪಡಬೇಕಾಗಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next