ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
Advertisement
ಹೊರಗುತ್ತಿಗೆ ನೌಕರರಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತೊಂದರೆ ಕೊಡುವುದನ್ನು ಮುಂದುವರಿಸಿದ್ದಾರೆ. ಈ ಹಿಂದೆ ನೇರ ನೇಮಕಾತಿ ಆದೇಶ ಹೊರಡಿಸಿ ಎಸ್ಸೆಸ್ಸೆಲ್ಸಿ ಕಡ್ಡಾಯಗೊಳಿಸಿ, ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಲು ಮುಂದಾದಾಗ ಹೋರಾಟ ಮಾಡಿದ್ದರ ಫಲವಾಗಿ ಆದೇಶ ಹಿಂದಕ್ಕೆ ಪಡೆಯಲಾಗಿದೆ. ಈಗವಿನಾಕಾರಣ ನೌಕರರನ್ನು ಕೆಲಸದಿಂದ ವಜಾಮಾಡಲಾಗುತ್ತಿದೆ ಎಂದರು. ಏ.1 ರಿಂದ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಎಲ್ಲೂ ಜಾರಿಯಾಗಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರಿಂಕೋರ್ಟ್ ಆದೇಶವಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ. ಬಡ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡದ ಸರ್ಕಾರ ಕೂಡಲೇ ಕಾರ್ಮಿಕ ವಿರೋಧಿ ನೀತಿ ಕೈಬಿಡಬೇಕೆಂದು ಒತ್ತಾಯಿಸಿದರು.
ವಜಾಗೊಳಿಸಬಾರದು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಲ್ಲಿ 10 ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ
ಇಲಾಖೆಯಲ್ಲಿ ಏಳು ಜನರನ್ನು ಕೆಲಸದಿಂದ ತೆಗೆದಿದ್ದು, ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಹೊರಗುತ್ತಿಗೆ ನೌಕರರ ಕಳೆದ ಐದಾರು ತಿಂಗಳ ವೇತನ ಬಾಕಿ ಇರಿಸಿಕೊಂಡಿದ್ದು, ಕೂಡಲೇ ಪಾವತಿಸಬೇಕು.
ಆಳಂದ, ಕೋಡ್ಲಾ, ಗುಂಡಗುರ್ತಿಯಲ್ಲಿನ ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ನೌಕರರಿಗೆ ಮಾನಸಿಕ ಹಿಂಸೆ
ನೀಡಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Related Articles
Advertisement
ಧರಣಿಯಲ್ಲಿ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಠಾರೆ, ಮೋಹನ ಕಟ್ಟಿಮನಿ, ಸುಭಾಷಬೆಡಸೂರ, ಅಶೋಕ ಹುಳಗೇರಾ, ಜಯಶ್ರೀ ಕಟ್ಟಿಮನಿ, ಫಾತೀಮಾ ಬೇಗಂ ಪತ್ತೆಪಹಾಡ, ಭಾಗಿರಥಿ ಕೋಡ್ಲಿ,
ಪರಶುರಾಮ ಹಡಲಗಿ,ಶಾಂತಕುಮಾರ ಮುನ್ನಳ್ಳಿ, ಭಾಗಣ್ಣ ದೇವನೂರ,ಮಹಾದೇವಿ ಗೌಡಕಿ ಹಾಗೂ ಇತರರಿದ್ದರು.