Advertisement

ಯಾರು ಅನಿವಾಸಿ?, ವ್ಯವಹಾರ ನಡೆಸಲು ಎನ್ನಾರೈ ತಿಳಿಯಬೇಕಾದ 3 ವಿಷಯಗಳು

03:45 AM Jan 16, 2017 | Harsha Rao |

ನಿವಾಸಿ ಭಾರತೀಯರ ಒಳಗೂ ನಿಬಂಧನೆಗಳಿವೆ. ಕಳೆದ ವಿತ್ತೀಯ ವರ್ಷದ ಮೊದಲಿನ 7 ವರ್ಷಗಳಲ್ಲಿ ಒಟ್ಟಾರೆ 729 ದಿನಗಳಿಗಿಂತ ಕಡಿಮೆ ಅವಧಿ ಭಾರತದಲ್ಲಿ ವಾಸಿಸಿದವರು ಅಥವಾ ಕಳೆದ ವಿತ್ತೀಯ ವರ್ಷದ ಮೊದಲಿನ 10 ವರ್ಷಗಳಲ್ಲಿ 9 ವರ್ಷಗಳನ್ನು ನಾನ್‌ -ರೆಸಿಡೆಂಟ್‌ ಆಗಿ ಕಳೆದು ಈಗ ನಮ್ಮ ದೇಶಕ್ಕೆ ಹಿಂತಿರುಗಿದವರು, ರೆಸಿಡೆಂಟ್‌ ಬಟ್‌ ನಾಟ್‌ ಆರ್ಡಿನರಿಲಿ ರೆಸಿಡೆಂಟ್‌ ಎಂಬ ನಾಮ ವಿಶೇಷಣಕ್ಕೆ ಅರ್ಹರಾಗಿ ಕೆಲವು ರಿಯಾಯತಿಗಳಿಗೆ ಬಾಧ್ಯರಾಗುತ್ತಾರೆ. 

Advertisement

ನಮ್ಮ ರಾಜ್ಯದಿಂದ ಮತ್ತು ಪರಿಸರದಿಂದ ಹಲವಾರುಜನರುಉದ್ಯೋಗವನ್ನುಅರಸುತ್ತಾಕೊಲ್ಲಿ ರಾಷ್ಟ್ರಗಳು, ಅಮೇರಿಕಾ, ಯುರೋಪ್‌, ಆಸ್ಟೇಲಿಯಾಇತ್ಯಾದಿ ಪ್ರದೇಶಗಳಿಗೆ ಹೋಗುತ್ತಾರೆ.  ಅಲ್ಲಿಗೆ  ಹೋಗಿ ಉದ್ಯೋಗವನ್ನು ಪಡಕೊಂಡು ಅಲ್ಲೇ ವಾಸಿಸುತ್ತಾರೆ. ಅವರನ್ನೆಲ್ಲಾ ಅನಿವಾಸಿ ಭಾರತೀಯಅಥವಾ ಎನ್ನಾರೈ ಎಂಬ ನಾಮಧೇಯದಿಂದಕರೆಯುತ್ತಾರೆ. ಬಹಳ ಸ್ಥೂಲವಾಗಿ ಬಳಸಲ್ಪಡುವ ಈ ಪದದಕಾನೂನೀಯ ವ್ಯಾಖ್ಯೆ ಹಲವರಿಗೆಗೊತ್ತಿಲ್ಲ. ಅದನ್ನು ತಿಳಿದುಕೊಳ್ಳದೆ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.   

ರೆಸಿಡೆಂಟ್‌ಇಂಡಿಯನ್‌  ಮತ್ತು ನಾನ್‌-ರೆಸಿಡೆಂಟ್‌ ಇಂಡಿಯನ್‌ ಪದಗಳ ಅರ್ಥವ್ಯಾಪ್ತಿ ಫೆಮ 
(Foreign Exchange Management Act)ಕಾನೂನಿನಲ್ಲಿ ಬೇರೆ, ಆದಾಯತೆರಿಗೆ ಕಾನೂನಿನಲ್ಲಿ ಬೇರೆ. ? ಮಾತುಯಾವಕಾನೂನಡಿಯಲ್ಲಿ ಬರುತ್ತದೆ ಎಂಬ ಸಂದರ್ಭಕ್ಕನುಸಾರ ಈ ಪದಗಳನ್ನು ಅರ್ಥೈಸಿಕೊಳ್ಳಬೇಕು. 
ಫೆಮ ಪ್ರಕಾರ ಅನಿರ್ಧಿಷ್ಟಾವಧಿಗೆ ನೌಕರಿಅಥವ ಬಿಸಿನೆಸ್‌ ಮೇಲೆ ದೇಶಕ್ಕೆ ಹೋಗುವವರೆಲ್ಲರೂ ನಾನ್‌-ರೆಸಿಡೆಂಟ್‌ ಇಂಡಿಯನ್ನುಗಳೇ. ಆದರೆಆದಾಯತೆರಿಗೆ ಕಾನೂನಿಗೆ ಪರದೇಶದಲ್ಲಿನ ವಾಸ್ತವ್ಯದಅವಧಿ ಮುಖ್ಯವಾಗುತ್ತದೆ. ಇಲ್ಲಿ ನಾನ್‌-ರೆಸಿಡೆಂಟ್‌ ಎನ್ನುವುದರ ವ್ಯಾಖ್ಯೆ ನೇರವಾಗಿಕೊಟ್ಟಿಲ್ಲ. 

ರೆಸಿಡೆಂಟ್‌ ಇಂಡಿಯನ್‌ ಪದವನ್ನು ಮೊತ್ತ ಮೊದಲು ಅರ್ಥೈಸಿ ಆ ಬಳಿಕ ನಾನ್‌ ರೆಸಿಡೆಂಟ್‌ ಪದದ ಅರ್ಥವನ್ನು ಕಂಡುಕಳ್ಳಬೇಕು. ಆದಾಯ ತೆರಿಗೆ ಕಾನೂನಿನ್ವಯ ರೆಸಿಡೆಂಟ್‌ ಇಂಡಿಯನ್‌ ಪದವನ್ನು ಮೊತ್ತ ಮೊದಲು ಅರ್ಥೈಸಿ ಆ ಬಳಿಕ ನಾನ್‌-ರೆಸಿಡೆಂಟ್‌ ಪದದ ಅರ್ಥವನ್ನು ಕಂಡುಕೊಳ್ಳಬೇಕು. ಆದಾಯ ತೆರಿಗೆ ಕಾನೂನಿನ್ವಯ 
ರೆಸಿಡೆಂಟ್‌ ಇಂಡಿಯನ್‌ (ಆರೈ) ಅಥವ ನಿವಾಸಿ ಭಾರತೀಯಅಂದರೆ:

(1) ಈ ದೇಶದಲ್ಲಿ ಪ್ರಸ್ತುತ ವಿತ್ತ ವರ್ಷದಲ್ಲಿ 182 ಅಥವಾ ಅದಕ್ಕಿಂತ ಜಾಸ್ತಿ ದಿನ ವಾಸಿಸಿದ ಓರ್ವ ಭಾರತೀಯ ವ್ಯಕ್ತಿ ಅಥವಾ
(2) ಪ್ರಸ್ತುತ ವಿತ್ತ ವರ್ಷದಲ್ಲಿ ಬರೇ 60 ದಿನಗಳನ್ನು ದೇಶದಲ್ಲಿ ಕಳೆದವರೂ ಕೂಡಾ ಅದರ ಹಿಂದಿನ 4 ವರ್ಷಗಳಲ್ಲಿ 
ಒಟ್ಟಾರೆ 365 ದಿನಗಳನ್ನು ದೇಶದಲ್ಲಿ ಕಳೆದಿದ್ದರೆ ಆತ ನಿವಾಸಿ ಭಾರತೀಯನೇ ಆಗುತ್ತಾನೆ.  (ಉದ್ಯೋಗಕ್ಕೆ ಹೊರ ಹೋದ ವರ್ಷ ಮಾತ್ರ ನಿವಾಸಿಯೆಂದೆಣಿಸಿಕೊಳ್ಳಲು 182 ದಿನವೇ ಇರಬೇಕಾಗುತ್ತದೆ) 

Advertisement

ಮತ್ತೆ, ಅನಿವಾಸಿ ಅಥವಎನ್ನಾರೈಅಂದರೆ ಈ ಮೇಲಿನ 182 ದಿನಗಳ ಅಥವ 60 ದಿನಗಳ ನಿವಾಸ ಲೆಕ್ಕಾಚಾರ ಮೀರದವನು ಎಂದರ್ಥ. ಈ ಕಾನೂನನ್ನು ಅರ್ಥ ಮಾಡಿಕೊಳ್ಳುವುದು ತುಸು ಗೊಂದಲಮಯವೇ ಆಗಿರುತ್ತದೆ. ಅದಕ್ಕಾಗಿ ಅದನ್ನು ಐದು ಪ್ರಶ್ನಾವಳಿಯ ರೂಪದಲ್ಲಿ ಇಲ್ಲಿ ಕೊಡಲಾಗಿದೆ. 

ಈ ಚಿತ್ರದಲ್ಲಿ ಕಾಣಿಸಿದ 4 ಮೂಲಭೂತ ಪ್ರಶ್ನೆಗಳ ಅನುಸಾರಒಬ್ಟಾತನ ರೆಸಿಡೆನ್ಸಿ ಸ್ಟೇಟಸ್‌ ಅನ್ನು ಸುಲಭವಾಗಿ ಅಳೆಯಬಹುದು. 

ಮೇಲೆ ಕಾಣಿಸಿದ ನಿವಾಸಿ ಭಾರತೀಯರ ಒಳಗೂ ಕಳೆದ ವಿತ್ತೀಯ ವರ್ಷದ ಮೊದಲಿನ 7 ವರ್ಷಗಳಲ್ಲಿ ಒಟ್ಟಾರೆ 729 ದಿನಗಳಿಗಿಂತ ಕಡಿಮೆ ಅವಧಿ ಭಾರತದಲ್ಲಿ ವಾಸಿಸಿದವರು ಅಥವಾ ಕಳೆದ ವಿತ್ತೀಯ ವರ್ಷದ ಮೊದಲಿನ 10 ವರ್ಷಗಳಲ್ಲಿ 9 ವರ್ಷಗಳನ್ನು ನಾನ್‌-ರೆಸಿಡೆಂಟ್‌ ಆಗಿ ಕಳೆದು ಈಗ ನಮ್ಮದೇಶಕ್ಕೆ ಹಿಂತಿರುಗಿದವರು ರೆಸಿಡೆಂಟ್‌ ಬಟ್‌ ನಾಟ್‌ಆರ್ಡಿನರಿಲಿ ರೆಸಿಡೆಂಟ್‌ ಎಂಬ ನಾಮ ವಿಶೇಷಣಕ್ಕೆ ಅರ್ಹರಾಗಿ ಕೆಲವು ರಿಯಾಯತಿಗಳಿಗೆ ಬಾಧ್ಯರಾಗುತ್ತಾರೆ.   ಅದೇರೀತಿ  ಆಗಿರದ ರೆಸಿಡೆಂಟುಗಳಿಗೆ ಆರ್ಡಿನರಿ ರೆಸಿಡೆಂಟ್‌  ಅನ್ನುತ್ತಾರೆ.  ಈ ಎಲ್ಲಾ ಸ್ಟೇಟಸ್‌ಗಳ ಅನುಸಾರಕರ ಇಲಾಖೆ ನಿಮ್ಮಕರ ಆದಾಯದ ಮೇಲೆ ಕರ ನಿರ್ಧಾರ ಮಾಡುತ್ತದೆ. ಹಾಗಾಗಿ ಮಾನ ಹತ್ತಿ ಫಾರೈನ್‌ಗೆ ಹೋದವರೆಲ್ಲಾ ಎನ್ನಾರೈಗಳು ಆಗುವುದಿಲ್ಲ. ಅದಕ್ಕೆಅದರದ್ದೇ ಆದ ಕಾನೂನಿನ ವ್ಯಾಖ್ಯೆಇದೆ ಎನ್ನುವುದು ನೆನಪಿರಲಿ. 

ಎನ್ನಾರೈ ಬ್ಯಾಂಕ್‌ ಖಾತೆಗಳು
ಎನ್ನಾರೈ ಅಥವಾ ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ಹೂಡಲು ಹಲವಾರು ಅವಕಾಶವನ್ನು ಕಾನೂನು ಮಾಡಿಕೊಟ್ಟಿದೆ. ಬ್ಯಾಂಕು ಡಿಪಾಸಿಟ್‌, ಭೂಮಿ, ಕಟ್ಟಡ, ಮ್ಯೂಚುವಲ್‌ ಫ‌ಂಡು ಇತ್ಯಾದಿ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಬ್ಯಾಂಕುಗಳಲ್ಲಿ ಮಾಡುವ ಹೂಡಿಕೆ. ಓರ್ವ ಅನಿವಾಸಿ ಭಾರತೀಯ ಈ ಕೆಳಗಿನ ಮೂರು ವಿಧದ ಹೂಡಿಕೆಯನ್ನು ಬ್ಯಾಂಕುಗಳಲ್ಲಿ ಮಾಡಬಹುದಾಗಿದೆ.  

1. NRO (Non Resident – Ordinary) Rupee Account:
ಇದು ಮುಖ್ಯವಾಗಿ ನಮ್ಮ ದೇಸೀ ನಮೂನೆಯ ಎಸ್‌ಬಿ ಮತ್ತುಎಫ್ಡಿ ಆ ರೀತಿಯ ಖಾತೆಗಳೇ. ಆದರೆ ಇದರ ಖಾತೆದಾರ ಮಾತ್ರ ಒಬ್ಬ ಎನ್ನಾರೈ ಆಗಿರುತ್ತಾನೆ. ಇಲ್ಲಿ ನಿವಾಸಿ ಭಾರತೀಯರೊಡನೆ ಜಂಟಿಖಾತೆಯೂ ಸಾಧ್ಯ. ಇದರಲ್ಲಿ ಎನ್ನಾರೈಗಳು ಭಾರತದ ರೂಪಾಯಿ ಆದಾಯವನ್ನು ಹಾಕಬಹುದು ಹಾಗೂ ತಮ್ಮ ದೇಶೀ ಕರೆನ್ಸಿಯನ್ನುಕೂಡಾ ರುಪಾಯಿ ರೂಪದಲ್ಲಿ ಜಮೆ ಮಾಡಬಹುದು. ಇದು ಎನ್ನಾರೈಗಳ ಅಪ್ಪಟ ಭಾರತೀಯ ಖಾತೆ ಹಾಗೂ ಇದು ಅಂತರ್ಮುಖೀಯಾಗಿ ದೇಶದೊಳಗಿನ ವ್ಯವಹಾರಕ್ಕೆ ಮಾತ್ರವೇ ಲಭ್ಯ. ಬಡ್ಡಿ ದರಗಳು ದೇಸಿ ಎಫಿx, ಎಸಿº ದರಗಳಷ್ಟೇ ಇರುತ್ತವೆ. ಇದರಲ್ಲಿರುವ ದುಡ್ಡನ್ನು ಸಾಮಾನ್ಯವಾಗಿ ದೇಶಕ್ಕೆಕೊಂಡೊಯ್ಯಲು  ಸಾಧ್ಯವಿಲ್ಲ. ಆದರೆ ವಿಶೇಷ ಕಾರಣಗಳಿಗಾಗಿ ಕರ ಪಾವತಿಸಿ ಸಿಎ ಸರ್ಟಿಫಿಕೇಟ್‌ ತೋರಿಸಿ ಆರ್‌ಬಿಐಯ ಲಿಖೀತ ಅನುಮತಿಯೊಂದಿಗೆ ವರ್ಷಕ್ಕೆ 10 ಲಕ್ಷ ಡಾಲರ್‌ ಮಿತಿಯೊಳಗೆ ಇದರಲ್ಲಿನ  ದುಡ್ಡನ್ನು ಹೊರದೇಶಕ್ಕೊಯ್ಯಬಹುದು. 

ಈ ಖಾತೆಯ ಮೇಲಿನ ಆದಾಯದ ಮೇಲೆ – ಭಾರತ ಹಾಗೂ ವಾಸವಿರುವ – ಈ ಎರಡೆರಡು ದೇಶಗಳಲ್ಲೂ ಕರಪಾವತಿ ಮಾಡುವುದನ್ನುತಪ್ಪಿಸಲುವಾಸವಿರುವ ದೇಶದಿಂದ’ಟಾಕ್ಸ್‌ ರೆಸಿಡೆನ್ಸಿ ಸರ್ಟಿಫಿಕೇಟ್‌’ತಂದುಕೊಟ್ಟಲ್ಲಿ ಆದಾಯಕರವು ಈ ಎರಡು ದೇಶಗಳ ನಡುವಿನ ಡಬಲ್‌ ಟಾಕ್ಸ್‌ಅವಾಯೆxನ್ಸ್‌ಅಗ್ರಿಮೆಂಟ್‌ ಅನುಸಾರ ಅನ್ವಯವಾಗುತ್ತದೆ. ಇದುಹೆಚ್ಚಿನ ಕರಾರುಗಳಲ್ಲಿ  ಶೇ. 15 ಆಗಿರುತ್ತದೆ. ಅಂತÖ ‌ಡಿಟಿಎಎ ಕರಾರು ಇಲ್ಲದಿದ್ದರೆ ಈ ಖಾತೆಗೆ ಕರಭಾರವು ಭಾರತೀಯಕರ ಕಾಯ್ದೆಯ ಪ್ರಕಾರ ಶೇ.30. 

2. (NRE (Non Resident – External) Rupee Account:
ಹೆಸರೇ ಸೂಚಿಸುವಂತೆಇದು ಬಹಿರ್ಮುಖವಾಗಿ ನೋಡುವ, ಮುಖ್ಯವಾಗಿ ಎಫ್ಡಿ, ಆರ್‌ಡಿ  ನಮೂನೆಯ
External ಎಕೌಂಟ್‌. ಇದರಲ್ಲಿ ನೇರವಾಗಿ  ರುಪಿಯನ್ನುಜಮೆ ಮಾಡಲು ಬರುವುದಿಲ್ಲ. ಇದರಲ್ಲಿ ಜಮೆಯಾದ  
ದೇಶಿ ದುಡ್ಡುರುಪಾಯಿಯಾಗಿ ಪರಿವರ್ತನೆಗೊಂಡು ಶೇಖರವಾಗುತ್ತದೆ. ಆದರೆ ಬೇಕಾದಾಗ ಮನಬಂದಂತೆ ಈ ಖಾತೆಯಲ್ಲಿನ ದುಡ್ಡನ್ನು ಹೊರದೇಶಕ್ಕೆ ಕೊಂಡಯ್ಯ ಬಹುದು.   ಈ ಕಾರಣಕ್ಕಾಗಿಯೇ ಇದು ಎನ್ನಾರೋ ಖಾತೆಗಿಂತ ಭಿನ್ನ. ಈ ಖಾತೆಗಳನ್ನು ಎನ್ನಾರೈ ಜೊತೆ ಜಂಟಿಯಾಗಿ ತೆರೆಯಬಹುದು ಮತ್ತು ಈ ಖಾತೆಗಳ ಆದಾಯದ ಮೇಲೆ ಭಾರತೀಯ ಆದಾಯಕರ ಇರುವುದಿಲ್ಲ. ಬಡ್ಡಿದರಗಳನ್ನು ಇತ್ತೀಚೆಗೆ ಮುಕ್ತಗೊಳಿಸಿದ ಮೇಲೆ ದೇಶಿ ದುಡ್ಡು ಗಳಿಸುವ ನಿಮಿತ್ತಇದರ ಎಫಿxಗಳಿಗೆ ಎಲ್ಲಾ ಬ್ಯಾಂಕುಗಳು ಪೈಪೋಟಿ ನಡೆಸಿ 8-9% ಅಂದಾಜು ಬಡ್ಡಿದರಗಳನ್ನು ನೀಡುತ್ತಿದ್ದಾರೆ.  
ಇಲ್ಲಿ ಜಮೆಯಾದ ದೇಶಿ ದುಡ್ಡುರುಪಾಯಿಯಾಗಿಯೇ ಶೇಖರವಾಗುವಕಾರಣ ಪ್ರತಿಬಾರಿ ಅಕೌಂಟಿಗೆ ದೇಶಿ ದುಡ್ಡು ಹಾಕಿ-ತೆಗೆದು ಮಾಡುವಾಗಿನ ನಿಮಯದರದ ವ್ಯತ್ಯಾಸದಿಂದ ಖಾತೆದಾರನಿಗೆ ಲಾಭಯಾ ನಷ್ಟ ಸಂಭವಿಸಬಹುದು.

ಉದಾಹರಣೆಗೆ: ಡಾಲರಿಗೆ 45 ರೂಪಾಯಿ ಇರುವಾಗ 100 ಡಾಲರ್‌ ಹಾಕಿದರೆ ಅದುರೂ 4,500 ಆಗಿ ಖಾತೆಗೆ ಜಮಾ ಆಗುತ್ತದೆ. ಕೆಲ ಸಮಯ ಕಳೆದ ಬಳಿಕ ಡಾಲರಿಗೆ ನಿಮಯದರ 50 ಆದರೆ ಆ ಖಾತೆಯಿಂದ ಹಿಂಪಡೆಯಬಹುದಾದ ಮೊತ್ತ ಬರೇ 4500/50=90 ಡಾಲರ್‌ ಮಾತ್ರ. ರುಪಿ ಪ್ರಭಲವಾಗಿ ಆಗಿ ಡಾಲರಿಗೆ 42 ಆದರೆ 100 ಡಾಲರ್‌ ಬದಲಿಗೆ 107.14 ಡಾಲರ್‌ ಸಿಕ್ಕಿ ಲಾಭವೂ ಆಗಬಹುದು. ಈ ಖಾತೆಯಲ್ಲಿ ಹೂಡಿಕೆಯ ಲಾಭದ ಹೊರತಾಗಿ ನಿಮಯದರದ ಏರಿಳಿತದ ಪ್ರತಿಫ‌ಲವೂ ಸೇರಿಕೊಂಡಿದೆ. ಹಾಗಾಗಿ ಅಧಿಕ ಬಡ್ಡಿ ಮತ್ತುರುಪಾು ಪ್ರಭಲವಾಗುವ ಊಹೆುಂದಜನಇದರಲ್ಲಿದುಡ್ಡು ಹೂಡುತ್ತಾರೆ. 

  ಕೊಲ್ಲಿ ರಾಷ್ಟ್ರಗಳಲ್ಲಿರುವ ನಮ್ಮ ಬಹುತೇಕ ಭಾರತೀಯರು ಈ ಖಾತೆಯಲ್ಲಿ ದುಡ್ಡು ತೊಡಗಿಸುತ್ತಾರೆ. ತಮ್ಮ ದುಡಿಮೆಯ ಗಳಿಕೆಯನ್ನು ಈ ಖಾತೆಯಲ್ಲಿ ಠೇವಣಿ ಕೂಡಿಡುವುದು ಸರ್ವೇಸಾಮಾನ್ಯ. ಅಷ್ಟೇ ಏಕೆ? ಬಹಳಷ್ಟು ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ಸುಲಭವಾಗಿ ಸಿಗುವ ಸಾಲವನ್ನು ಪಡಕೊಂಡು ಈ ಖಾತೆಯಲ್ಲಿ ಠೇವಣಿ ಮಾಡುವುದನ್ನೂ ಕೂಡಾ ನಾವು ಕಾಣಬಹುದು. ಅಲ್ಲಿನ ಸಾಲದ ಬಡ್ಡಿದರ ಇಲ್ಲಿನ ಎನ್ನಾರೈ ಖಾತೆಯ ಠೇವಣಿ ದರಕ್ಕಿಂತ ತೀರಾ ಅಡಿಮೆಯಿರುವುದೇ ಇದಕ್ಕೆ ಕಾರಣ. ಅಲ್ಲಿ ಸುಮಾರು 4% ಬಡ್ಡಿಗೆ ಸಾಲ ದೊರಕಿದರೆ ಇಲ್ಲಿ ಸುಮಾರು 8% ಬಡ್ಡಿಗೆ ಠೇವಣಿ ಹೂಡುವುದು ಲಾಬದಾಯಕವೇ ಆಗಿದೆ. ಹಾಗಾಗಿ ಬಹಳಷ್ಟು ಜನ ಮುಗಿಬಿದ್ದು ಈ ರೀತಿಯ ಸಾಲ-ಠೇವಣಿ ವ್ಯವಹಾರಕ್ಕೆ ಕೈಯಿಕ್ಕುತ್ತಿ¨ªಾರೆ. 

ಮೇಲ್ನೋಟಕ್ಕೆ ಇದು ಆಕರ್ಷಕವಾಗಿ ಕಂಡರೂ ಸಹ ಇದರಲ್ಲೂ ಸ್ವಲ್ಪ ರಿಸ್ಕ್ ಇದೆ ಎನ್ನುವುದನ್ನು ಜನ ಮನಗಾಣಬೇಕು. ಪರದೇಶದಲ್ಲಿ ಅಲ್ಲಿನ ಕರೆನ್ಸಿಯಲ್ಲಿ ಸಾಲ ಪಡಕೊಂಡು ಅದನ್ನು ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿ ಠೇವಣಿ ಮಾಡಿದ ಬಳಿಕ ರುಪಾಯಿ ಮೌಲ್ಯ ಕುಸಿದರೆ ನೀವು ಮಾಡಿದ ಠೇವಣಿಯಲ್ಲಿ ಅಷ್ಟರಮಟ್ಟಿಗೆ ನಷ್ಟವನ್ನು ಅನುಭವಿಸುತ್ತೀರಿ. ಬದಲಿಗೆ ರುಪಾಯಿ ಮೌಲ್ಯ ವೃದ್ಧಿಗೊಂಡರೆ ಅಷ್ಟರ ಮಟ್ಟಿಗೆ ಹೆಚ್ಚಿನ ಲಾಭ ಗಳಿಸುತ್ತೀರಿ. ಹಾಗಾಗಿ ಹೆಚ್ಚಿನ ಬಡ್ಡಿದರದೊಂದಿಗೆ ರುಪಾಯಿ ಮೌಲ್ಯದ ಏರಿಳಿತಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. 

3. FCNR (Foreign Currency Non Resident):
ದೇಶಿಕರೆನ್ಸಿಯಈಆ ಗಳಾಗಿ ಮಾತ್ರ ಈ ಖಾತೆಯನ್ನುತೆರೆಯಬಹುದು. Expatriate ಮಾಡಬಲ್ಲಂತಹ External ಖಾತೆಯೇ ಬೇಕು. ಆದರೆ ವಿನಿಮಯದರದ ವ್ಯತ್ಯಾಸದಿಂದ ಬರುವ ಲಾಭ ನಷ್ಟಗಳ ಗೊಡವೆ ಬೇಡ ಎಂಬವರು ಹಾಕಿದ
ದೇಶೀ ಕರೆನ್ಸಿ ಅದೇರೂಪದಲ್ಲಿಯೇ ಶೇಖರವಾಗುವಂತಹ ಖಾತೆ ಇದು. ಈ ಖಾತೆ ಅಮೆರಿಕನ್‌, ಆಸ್ಟ್ರೇಲಿಯನ್‌ ಮತ್ತುಕೆನಡಿಯನ್‌ಡಾಲರ್‌, ಜಪಾನೀಸ್‌ಯೆನ್‌,ಯೂರೋ ಹಾಗೂ ಬ್ರಿಟಿಷ್‌ ಪೌಂಡ್‌ ಇತ್ಯಾದಿಗಳಲ್ಲಿ ಲಭ್ಯ. ಇದರ ಬಡ್ಡಿದರಗಳು ‘ಲಂಡನ್‌ನ LIBOR ದರಗಳಿಂದ ಇಂತಿಷ್ಟು ಜಾಸ್ತಿ’ ಎಂಬ ಆರ್‌ಬಿಐ ನಿರ್ಧಾರದಡಿಯಲ್ಲಿ ನಿರ್ಧಾರವಾಗುತ್ತವೆ. ಇದು ಬಾಹ್ಯ ಖಾತೆಯಾದ ಕಾರಣ ಇದು ಭಾರತೀಯ ಕರಕಾಯಿದೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ನಿವಾಸಿಯಾದ ಮೇಲೂ ಈ ಖಾತೆಯನ್ನು ಮೆಚೂÂರಿಟಿಯವರೆಗೆ ಮುಂದುವರಿಸಬಹುದಾಗಿದೆ.
ಮುಖ್ಯವಾಗಿ ಎನ್ನಾರಿ ಮತ್ತುಎನ್ನಾರೋಖಾತೆಗಳು ರುಪಿ ಖಾತೆಗಳಾದರೆ ಎಫ್ಸಿಎನ್ನಾರ್‌ ದೇಶಿ ದುಡ್ಡಿನಖಾತೆ.

ಎನ್ನಾರೋ ದೇಸೀ ಖಾತೆಯಂತಾದರೆಒಳಮುಖೀಯಾದರೆ ಎನ್ನಾರಿ ಮತ್ತು ಎಫ್ಸಿ ಎನ್ನಾರ್‌ ದೇಶಿ ಖಾತೆಯಂತೆ ಹೊರಮುಖೀ. ಅವರವರ ಅಗತ್ಯಕ್ಕೆ ತಕ್ಕಂತೆ ಒಬ್ಬ ಎನ್ನಾರೈ ಒಂದು ಅಥವಾ ಜಾಸ್ತಿ ಖಾತೆಗಳನ್ನು ತೆರೆಯಬಹುದು.

– ಜಯದೇವ ಪ್ರಸಾದ್‌ ಮೊಳೆಯಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next