Advertisement

ಭರ್ತಿಯಾಗುತ್ತಿವೆ ಜಲಾಶಯಗಳು

12:55 AM Aug 09, 2019 | Team Udayavani |

ಬೆಂಗಳೂರು: ರಾಜ್ಯದ ಜಲಾಶಯಗಳ ಪೈಕಿ ಅರ್ಧಕ್ಕರ್ಧ ಉಕ್ಕಿ ಹರಿಯುತ್ತಿದ್ದರೆ, ಉಳಿದರ್ಧ ಭರ್ತಿಯಾಗುವ ಹಂತ ತಲುಪಿವೆ.

Advertisement

ರಾಜ್ಯದ 13 ಬೃಹತ್‌ ಜಲಾಶಯಗಳ ಪೈಕಿ ಈಗಾಗಲೇ 7 ತುಂಬಿ ಹರಿಯುತ್ತಿದ್ದು, ಜಲಾಶಯ ಗಳಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಉಳಿದ ಆರು ಜಲಾಶಯಗಳ ಭರ್ತಿಗೆ ಕೆಲವೇ ಅಡಿಗಳಷ್ಟು ಬಾಕಿ ಇದ್ದು,ಲಕ್ಷಾಂತರ ಕ್ಯುಸೆಕ್‌ಗಳಷ್ಟು ನೀರಿನ ಒಳಹರಿವಿದೆ. ಇದೇ ರೀತಿ ಮಳೆ ಮುಂದುವರಿದರೆ, ಕೆಲವೇ ದಿನಗಳಲ್ಲಿ ಜಲಾಶಯಗಳು ಭರ್ತಿಯಾಗಲಿವೆ ಎಂದು ಜಲಾಶಯಗಳ ಕಾರ್ಯ ನಿರ್ವಹಣಾ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆವರೆಗೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,799.35 ಅಡಿ ಇತ್ತು.ಇದರ ಸಂಗ್ರಹ ಸಾಮರ್ಥ್ಯ 1,819 ಅಡಿ. ಕಳೆದ ವರ್ಷ ಇದೇ ಅವಧಿಯಲ್ಲಿ 1,809.35 ಅಡಿ.ಹಾರಂಗಿಯಲ್ಲಿ 2,849.83 ಅಡಿ,ಹೇಮಾವತಿಯಲ್ಲಿ 2,905.30 ಅಡಿ, ಕೆಆರ್‌ಎಸ್‌ ನೀರಿನ ಮಟ್ಟ 94 ಅಡಿ ಇದೆ. ಇವುಗಳ ಸಾಮರ್ಥ್ಯ ಕ್ರಮವಾಗಿ 2,859 ಅಡಿ, 2,922 ಅಡಿ ಹಾಗೂ 124.80 ಅಡಿ. ಭದ್ರಾದಲ್ಲಿ 2,158 ಅಡಿ ಪೈಕಿ
2,1311.66 ಅಡಿ ನೀರು ಸಂಗ್ರಹವಾಗಿದೆ.

ತುಂಗಭದ್ರಾ, ಘಟಪ್ರಭಾ, ಮಲಪ್ರಭಾ,ಆಲಮಟ್ಟಿ, ನಾರಾಯಣಪುರ ಜಲಾಶಯಗಳಂತೂ ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಮುಂಗಾರು ಪೂರ್ಣಗೊಳ್ಳಲು ಇನ್ನೂ ಹೆಚ್ಚು ಕಡಿಮೆ ಎರಡು ತಿಂಗಳು ಬಾಕಿ ಇದ್ದು, ಈಗಾಗಲೇ ಜಲಾಶಯಗಳು ಭರ್ತಿ ಆಗುತ್ತಿರುವುದು ನೆರೆ ಹಾವಳಿ ನಡುವೆಯೂ ಸಹಜವಾಗಿ ತುಸು ನಿಟ್ಟುಸಿರು ಬಿಡುವಂತಾಗಿದೆ. ಅದರಲ್ಲೂ ದಕ್ಷಿಣ
ಕರ್ನಾಟಕದಲ್ಲಿ ಕೃಷಿ, ವಿದ್ಯುತ್‌ ಉತ್ಪಾದನೆಗೆ ಇದು ಪೂರಕವಾಗಲಿದೆ. ಆದರೆ, ಉತ್ತರದಲ್ಲಿ ಮಾತ್ರ ಈ ಬಾರಿಯೂ ನಿರಾಸೆ ಆಗಿದೆ. ಕಾರಣ, ಕಳೆದ ಎರಡು-ಮೂರು ವರ್ಷ ಬರದಿಂದ ತತ್ತರಿಸಿದ್ದ ಆ ಭಾಗದ ರೈತರು, ಈ ಸಲ ನೆರೆಯಿಂದ ನಲುಗುವಂತಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next