Advertisement

ಶಾಲೆಗೆ ಜಾಗ ಮೀಸಲಿಡಿ : ಸೋಲೂರು ಗ್ರಾಮಸ್ಥರಿಂದ ಧರಣಿ

01:02 PM Nov 07, 2020 | Suhan S |

ದೇವನಹಳ್ಳಿ: ತಾಲೂಕಿನ ಸೋಲೂರು ಗ್ರಾಮದ ಸರ್ವೆ ನಂ.5ರ 2 ಎಕರೆ 10ಗುಂಟೆ ಸರ್ಕಾರಿ ಖರಾಬು ಮತ್ತು ಶಾಲಾ ಮಕ್ಕಳ ಆಟದ ಮೈದಾನವನ್ನು ಯಥಾವತ್ತಾಗಿ ಮುಂದಿನ ಪೀಳಿಗೆಗೆ ಕಾಯ್ದಿರಿಸುವಂತೆ ಒತ್ತಾಯಿಸಿ ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ಮುಂಭಾಗದಲ್ಲಿಸೋಲೂರು ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್‌ ಹಾಗೂ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

Advertisement

ಭೂ ಕಬಳಿಸುವ ಕುತಂತ್ರ: ಗ್ರಾಮದ ಮುಖಂಡ ನವೀನ್‌ಕುಮಾರ್‌ ಮಾತನಾಡಿ, ಸುಮಾರು ವರ್ಷಗಳಿಂದ ಸೋಲೂರು ಗ್ರಾಮದ ಸರ್ಕಾರಿ ಶಾಲೆಗೆ ಆಟದ ಮೈದಾನವಿಲ್ಲ. ಇರುವ ಸರ್ಕಾರಿ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ರಸ್ತೆ ಸೇರಿ, ಆಟದ ಮೈದಾನಕ್ಕೆ ಇರುವ ಸರ್ಕಾರಿ ಗೋಮಾಳದ ಸರ್ವೆ ನಂ.5ರ 2 ಎಕರೆ 10 ಗುಂಟೆ ಜಾಗಮೀಸಲಿಡುವಂತೆ ನಿರಂತರ ಪ್ರತಿಭಟನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಕೆಲ ಭ್ರಷ್ಟ ಭೂಗಳ್ಳರು ಈ ಸರ್ಕಾರಿ ಖರಾಬು ಜಾಗಕ್ಕೆ ಅಕ್ರಮವಾಗಿ ದಾಖಲೆ ಸೃಷ್ಟಿಸಿ ಭೂಕಬಳಿಸುವ ಹುನ್ನಾರ ಮಾಡುತ್ತಿದ್ದಾರೆಂದು ದೂರಿದರು.

ಉಳಿಸಿಕೊಡಿ:ರೈತ ಚಿಕ್ಕೇಗೌಡ ಮಾತನಾಡಿ, ಸೋಲೂರು ಗ್ರಾಮದ ಜನಜಾನುವಾರುಗಳಿಗೆ ಗ್ರಾಮದ ಹುಟ್ಟಿನಿಂದಲೂ ಇದುವರೆಗೆ ಮತ್ತು ಮುಂದಿನ ಪೀಳಿಗೆಗೆ ಸರ್ಕಾರಿ ಸಾರ್ವಜನಿಕ ಖರಾಬು ಭೂಮಿಯನ್ನು ಯಾರಿಗೂ ಮಾಡಿಕೊಡದೇ ಸರ್ಕಾರಿ ಜಾಗವಾಗಿಯೇ ಉಳಿಸಿ ಕೊಡ ಬೇಕೆಂದರು.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮನವಿ ಸ್ವೀಕರಿಸಲು ಮುಂದಾದ ಅಪರ ಜಿಲ್ಲಾಧಿಕಾರಿ ಜಗದೀಶ್‌.ಕೆ.ನಾಯಕ್‌ ಅವರಿಗೆ ಪ್ರತಿಭಟನಾಕಾರರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ನ್ಯಾಯ ಸಿಗುವವರೆಗೂ ಕದಲುವುದಿಲ್ಲ, ಜಿಲ್ಲಾಧಿಕಾರಿ ಖುದ್ದುಸ್ಥಳ ಪರಿಶೀಲನೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಅಪರ ಜಿಲ್ಲಾಧಿಕಾರಿ ವಾಪಸ್ಸಾದರು.

ಅಕ್ರಮವಾಗಿ ದಾಖಲೆ ಸೃಷ್ಟಿಸಿ ದಾಖಲೆಮಾಡಿಕೊಂಡಿರುವುದುಹಾಗೂ ದಾಖಲೆಗಳಲ್ಲಿ ವೈಟ್ನಾರ್‌ಬಳಸಿ ತಿದ್ದುಪಡಿ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.ಇದರಲ್ಲಿ ಕೆಲವು ಅಧಿಕಾರಿಗಳ ಶಾಮೀಲಿದೆ. ಜಾಗವನ್ನು ಒಂದು ಬಾರಿ ಕಣ್ಣಾರೆ ನೋಡಬೇಕು ಎಂದು ಜಿಲ್ಲಾಧಿಾರಿ ಪಿ.ಎನ್‌.ರವೀಂದ್ರ ಅವರಿಗೆ ಪ್ರತಿಭಟ ನಾಕಾರರು ಮನವಿ ಮಾಡಿದರು.

ಡೀಸಿ ಪರಿಶೀಲನೆ:ಸರ್ವೆ ನಂ.5ರ ಜಮೀನಿಗೆ ಭೇಟಿ ನೀಡಿ ಅಲ್ಲಿನ ವಾಸ್ತ ವಾಂಶವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಸೋಲೂರು ಗ್ರಾಮದ ಸರ್ಕಾರಿ ಶಾಲೆಗೂ ಭೇಟಿ ನೀಡಿ ಪ್ರತಿಭಟನಾಕಾರರು ಹಾಗೂ ಗ್ರಾಮಸ್ಥರಿಗೆ ಜಾಗದ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಇಲ್ಲಿನ ವಾಸ್ತವಾಂಶ ಗೊತ್ತಾಗಿದೆ. ನ್ಯಾಯಾಲಯದಲ್ಲಿ ಪ್ರಕ ರಣ ಇರುವುದರಿಂದಕಾಲಾವಕಾಶ ಬೇಕಾಗುತ್ತದೆ.

Advertisement

ಎಲ್ಲಿ ಯಾವ ರೀತಿ ದಾಖಲೆ ಅಕ್ರಮವಾಗಿದೆಯೋ ಇಲ್ಲ ವೋ ಎಂಬುವುದನ್ನು ಪತ್ತೆಹಚ್ಚಿ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಜಿಲ್ಲಾಧಿ ಕಾರಿ ಪಿ.ಎನ್‌. ರವೀಂದ್ರ ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿಡಾ.ಜಗದೀಶ್‌. ಕೆ.ನಾಯಕ್‌, ದೊಡ್ಡಬಳ್ಳಾಪುರ ಉಪವಿ ಭಾಗಾಧಿಕಾರಿ ಅರುಳ್‌ಕುಮಾರ್‌, ದೇವನಹಳ್ಳಿ ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಸೋಲೂರು ಗ್ರಾಮಸ್ಥರು, ರೈತ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next