Advertisement

ಮೀಸಲು ಬಡ್ತಿ ವಿವಾದ: ಹುದ್ದೆಗೆ ಅನುಸಾರ ವೇತನ

06:35 AM Aug 07, 2018 | |

ಬೆಂಗಳೂರು: ಮೀಸಲು ಬಡ್ತಿ ಕುರಿತ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಬಗೆಹರಿಯದ ಕಾರಣ ಈ ಸಮಸ್ಯೆಯಲ್ಲಿ ಸಿಲುಕಿ ವೇತನವಿಲ್ಲದೆ ಪರದಾಡುತ್ತಿರುವವರ ನೆರವಿಗೆ ಸರ್ಕಾರ ಬಂದಿದ್ದು, ಬಿ.ಕೆ.ಪವಿತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶದನ್ವಯ ಪರಿಷ್ಕರಿಸಿದ ಜೇಷ್ಠತಾ ಪಟ್ಟಿಯನ್ವಯ ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗೆ ಅನುಸಾರವಾಗಿ ವೇತನ ಪಾವತಿಸಲು ಸೂಚಿಸಿದೆ.

Advertisement

ಈ ಕುರಿತು ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಬಿ.ಕೆ.ಪವಿತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಅನ್ವಯ ಪರಿಷ್ಕರಣೆ ಮಾಡಿರುವ ಜೇಷ್ಠತಾ ಪಟ್ಟಿಯ ಮುಂಬಡ್ತಿ/ ಹಿಂಬಡ್ತಿ ಪಡೆದು ಕಾರ್ಯನಿರ್ವಹಿಸುತ್ತಿರುವ ಹುದ್ದೆಯ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಸೂಚಿಸಿದ್ದಾರೆ. ಬಿ.ಕೆ.ಪವಿತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಪರಿಷ್ಕರಿಸಿದ ಜೇಷ್ಠತಾ ಪಟ್ಟಿಯನ್ವಯ ವೇತನ ಮತ್ತು ನಿವೃತ್ತಿ ಸೌಲಭ್ಯ ಪಾವತಿಸುವ ಸಂಬಂಧ ಮುಂಬಡ್ತಿ ಅಥವಾ ಹಿಂಬಡ್ತಿ ಪಡೆದ ಅಧಿಕಾರಿ ಅಥವಾ ನೌಕರರ ವೇತನ ನಿಗದಿಗೊಳಿಸಲು ಮಾರ್ಗಸೂಚಿಯನ್ನೂ ಅವರು ಈ ಸುತ್ತೋಲೆಯಲ್ಲಿ ನೀಡಿದ್ದಾರೆ.

ಮೀಸಲು ಬಡ್ತಿ ವಿವಾದದಿಂದಾಗಿ 3-4 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಆ. 1ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿ ಮತ್ತು ನೌಕರರ ಸಂಘಟನೆಗಳ ಪ್ರತಿನಿಧಿಗಳು ಗಮನಕ್ಕೆ ತಂದಿದ್ದರು. ಈ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದಾಗ, ಮುಂಬಡ್ತಿ ಅಥವಾ ಹಿಂಬಡ್ತಿ ಪಡೆದವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ ವೇತನ ಪಾವತಿಸಬಹುದು ಎಂಬ ಅಭಿಪ್ರಾಯ ನೀಡಿದ್ದಾರೆ. ಅದರಂತೆ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next