Advertisement

ಎರಡಿದ್ದ ಎಸ್‌ಟಿ ಮೀಸಲು ಈ ಬಾರಿ 3ಕ್ಕೇರಿಕೆ

07:04 PM May 02, 2021 | Team Udayavani |

ವರದಿ : ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ನಿಗದಿ ಪಡಿಸಲು ರಾಜ್ಯ ಚುನಾವಣೆ ಆಯೋಗ, ಮೀಸಲಾತಿ ಪ್ರಮಾಣ ನಿಗದಿಯ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಸ್ಥಾನಗಳು ಈ ಬಾರಿ 3ಕ್ಕೆ ಏರಿಕೆಯಾಗಲಿವೆ.

ಹೌದು. ಕಳೆದ ಬಾರಿ 36 ಇದ್ದ ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. 36 ಸದಸ್ಯ ಬಲದ ಜಿಪಂನಲ್ಲಿ ಎಸ್‌ಟಿ ವರ್ಗಕ್ಕೆ ತಲಾ ಒಂದು ಮಹಿಳೆ ಮತ್ತು ಒಂದು ಪುರುಷ ಸ್ಥಾನಕ್ಕೆ ಮಾತ್ರ ಅವಕಾಶವಿತ್ತು. ಈ ಬಾರಿ ಎಸ್‌ಟಿ ವರ್ಗಕ್ಕೆ ಮೂರು ಸ್ಥಾನ ನೀಡಿದ್ದು, ಅದರಲ್ಲಿ 2 ಮಹಿಳೆಯರಿಗೆ, 1 ಪುರುಷರಿಗೆ ಮೀಸಲಾಗಲಿದೆ. ಪುರುಷ ಸದಸ್ಯ ಸ್ಥಾನ ಬಾಗಲಕೋಟೆ ತಾಲೂಕಿಗೆ ದೊರೆಯುವ ಸಾಧ್ಯತೆ ಇದೆ.

ಶೇ. 50 ಮಹಿಳೆಯರಿಗೆ ಮೀಸಲು:

ಜಿಪಂನ ಒಟ್ಟು 40 ಸ್ಥಾನಗಳಲ್ಲಿ 20 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಅದರಲ್ಲಿ ಎಸ್‌ಸಿ ವರ್ಗಕ್ಕೆ 4, ಎಸ್‌ಟಿ ವರ್ಗಕ್ಕೆ 2, ಹಿಂದುಳಿದ ಅ ವರ್ಗಕ್ಕೆ 6 ಹಾಗೂ ಹಿಂದುಳಿದ ವರ್ಗ ಬಕ್ಕೆ 1, ಸಾಮಾನ್ಯ ವರ್ಗಕ್ಕೆ 9 ಸೇರಿ ಒಟ್ಟು 20 ಸ್ಥಾನಗಳಲ್ಲಿ ಮಹಿಳೆಯರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಈ 20 ಸ್ಥಾನಗಳಲ್ಲಿ ಮಹಿಳೆಯರೇ ಸ್ಪರ್ಧಿಸಬೇಕು. ಅಲ್ಲದೇ ಜಿಪಂನ 40 ಸ್ಥಾನಗಳಲ್ಲಿ ಎಸ್‌ಸಿ (ಮಹಿಳೆ-4), ಎಸ್‌ಟಿ-3 (ಮಹಿಳೆ-2), ಹಿಂದುಳಿದ ಅ ವರ್ಗ (ಮಹಿಳೆ-6), ಹಿಂದುಳಿದ ಬ ವರ್ಗ 2 (1), ಸಾಮಾನ್ಯ 20 (ಮಹಿಳೆ) ವರ್ಗಕ್ಕೆ ಮೀಸಲಿಡಲಾಗುತ್ತಿದೆ.

Advertisement

ತಾಪಂನಲ್ಲೂ ಮಹಿಳೆಯರ ಮೇಲುಗೈ:

ಜಿಲ್ಲೆಯ 9 ತಾಪಂ ವ್ಯಾಪ್ತಿಯಲ್ಲಿ ಒಟ್ಟು 110 ಕ್ಷೇತ್ರಗಳಿದ್ದು, ಇದರಲ್ಲಿ 58 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ. ಹೀಗಾಗಿ ಜಿಪಂನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಸಮಬಲವಾಗಲಿದ್ದರೆ, ತಾಪಂಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಲಿದೆ. ಬಾಗಲಕೋಟೆ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, ಅದರಲ್ಲಿ 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಅದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ವರ್ಗ ಅ-2 (ಮಹಿಳೆ-1), ಸಾಮಾನ್ಯ-7 (3) ಸ್ಥಾನ ಮೀಸಲಾಗಲಿವೆ. ತಾಪಂಗೆ ಹಿಂದುಳಿದ ವರ್ಗ ಬ ವರ್ಗಕ್ಕೆ ಒಂದೂ ಸ್ಥಾನ ಮೀಸಲಾಗಿಲ್ಲ. ಹುನಗುಂದ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಮಹಿಳೆಯರಿಗೆ ಮೀಸಲು ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ ಒಂದು ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಲಿವೆ. ಇನ್ನು ಸಾಮಾನ್ಯ-5 (ಮಹಿಳೆ-2) ನಿಗದಿಯಾಗಲಿವೆ. ಬಾದಾಮಿ ತಾಪಂನಲ್ಲಿ ಒಟ್ಟು 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮೀಸಲಾಗಲಿವೆ. ಎಸ್‌ಸಿ-2 (ಮಹಿಳೆ-1), ಎಸ್‌ಟಿ-2 (ಮಹಿಳೆ-1), ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-4). ಇಳಕಲ್ಲ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ 1 ಸ್ಥಾನಗಳಿದ್ದು ಅವೂ ಮಹಿಳೆಯರಿಗೆ ಮೀಸಲಾಗಲಿವೆ.

ಅಲ್ಲದೇ ಸಾಮಾನ್ಯ-5(ಮಹಿಳೆ-2). ಗುಳೇದಗುಡ್ಡ ಹೊಸ ತಾಲೂಕಿಗೆ 6 ಮಹಿಳೆಯರು: ಗುಳೇದಗುಡ್ಡ ಹೊಸ ತಾಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸ್ಥಾನಗಳಲಿದ್ದು ಅದರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ-1 ಸ್ಥಾನ ಇದ್ದು, ಅದು ಮಹಿಳೆಗೆ ಮೀಸಲು. ಹಿಂದುಳಿದ ಅ ವರ್ಗ-2(ಮಹಿಳೆ-1), ಸಾಮಾನ್ಯ-6 (ಮಹಿಳೆ-3). ಜಮಖಂಡಿ ತಾಪಂನಲ್ಲಿ 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮಹಿಳೆಯರಿಗೆ. ಎಸ್‌ಸಿ-3 (ಮಹಿಳೆ-2), ಎಸ್‌ಟಿಗೆ ಒಂದು ಸ್ಥಾನವಿದ್ದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-3). ಮುಧೋಳ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾ ನ್ಯ-7 (ಮಹಿಳೆ-3). ಬೀಳಗಿ ತಾಪಂನಲ್ಲಿ 12 ಸದಸ್ಯರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಬ ವರ್ಗಕ್ಕೆ ತಲಾ ಒಂದು ಸ್ಥಾನ ಮೀಸಲಿದ್ದು, ಅವು ಮಹಿಳೆಯರಿಗೆ ಮೀಸಲಿವೆ. ರಬಕವಿ-ಬನಹಟ್ಟಿ ಹೊಸ ತಾಲೂಕಿನಲ್ಲಿ 11 ಸ್ಥಾನಗಳಿದ್ದು, 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಒಂದು ಸ್ಥಾನವಿದ್ದು, ಅದೂ ಮಹಿಳೆಗೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾನ್ಯ 6 (ಮಹಿಳೆ-3) ಸ್ಥಾನ ಮೀಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next