Advertisement

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

08:20 PM Aug 06, 2020 | Hari Prasad |

ಮುಂಬಯಿ: ಹಲವು ಬಾರಿ ನೀವು ನಿಮ್ಮಲ್ಲಿರುವ ಎಟಿಎಂ ಕಾರ್ಡ್ ಮೂಲಕ ಹಣ ಪಾವತಿ ನಡೆಸಲು ಪ್ರಯತ್ನಿಸಿ ವಿಫಲರಾಗಿದ್ದೀರಾ? ಹಾಗಾದರೆ ನಿಮಗೆ ಇಲ್ಲೊಂದು ಶುಭ ಸುದ್ದಿಯಿದೆ.

Advertisement

ಇಂಟರ್ನೆಟ್ ಸಂಪರ್ಕ ಸಮರ್ಪಕವಾಗಿಲ್ಲದೇ ಇದ್ದಲ್ಲಿ ಅಥವಾ ಇನ್ಯಾವುದೇ ರೀತಿಯ ತಾಂತ್ರಿಕ ತೊಂದರೆಗಳಿದ್ದಲ್ಲಿ ಇಂತಹ ಸಮಸ್ಯೆಗಳು ಉಂಟಾಗುತ್ತಿರುತ್ತದೆ.

ಆದರೆ ಇದಕ್ಕೆಲ್ಲ ಪರಿಹಾರವೆಂಬಂತೆ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹೊಸ ವಿಧಾನ ಒಂದನ್ನು ಸದ್ಯದಲ್ಲೇ ಜಾರಿಗೆ ತರುತ್ತಿದೆ.

ಗ್ರಾಹಕರ ಹಿತದೃಷ್ಟಿಯಿಂದ ಈ ರೀತಿಯ ಆಫ್ ಲೈನ್ ಪಾವತಿಯ ಸಾಧಕ ಬಾಧಕಗಳನ್ನು ಕಂಡುಕೊಳ್ಳಲು ಆರ್.ಬಿ.ಐ. ಇದರ ಪ್ರಾಯೋಗಿಕ ಅಳವಡಿಕೆಗೆ ಅನುಮತಿ ನೀಡಿದೆ. ಇದರ ಪ್ರಕಾರ ಪ್ರಾರಂಭದಲ್ಲಿ ಸಣ್ಣ ಮೊತ್ತದ ಪಾವತಿಗಳನ್ನು ಆಫ್ ಲೈನ್ ವಿಧಾನದಲ್ಲಿ ನಡೆಸಲು ಗ್ರಾಹಕರಿಗೆ ಅನುವು ಮಾಡಿಕೊಡುವ ಸಾಧ್ಯತೆಗಳಿವೆ.

ಈ ಪ್ರಾಯೋಗಿಕ ವಿಧಾನದಡಿಯಲ್ಲಿ ಅಧಿಕೃತ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವವರು (PSos), ಬ್ಯಾಂಕ್ ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರು ತಮ್ಮಲ್ಲಿರುವ ಕಾರ್ಡ್ ಗಳನ್ನು ಬಳಸಿಕೊಂಡು ಆಫ್ ಲೈನ್ ವಿಧಾನದಲ್ಲಿ ಪಾವತಿ ನಡೆಸುವ ವ್ಯವಸ್ಥೆಯನ್ನು ಸದ್ಯದ ಮಟ್ಟಿಗೆ ಪರಿಚಯಿಸಲಾಗುತ್ತದೆ.

Advertisement

ಈ ವಿಧಾನದಲ್ಲಿ, ನಿಮ್ಮ ಕಾರ್ಡ್ ಮಾಹಿತಿ ಮತ್ತು ನೀವು ನಡೆಸಿರುವ ವ್ಯವಹಾರದ ವಿವರಗಳು ಒಂದು ಟರ್ಮಿನಲ್ ನಲ್ಲಿ ಶೇಖರಣೆಗೊಳ್ಳುತ್ತದೆ ಮತ್ತು ಪಾವತಿ ರಶೀದಿಗೆ ಅನುಕೂಲವಾಗಿವಂತೆ ಇಲ್ಲಿಂದ ಪುನರ್ ಮಾಹಿತಿಯೊಂದು ನಿಮಗೆ ಲಭಿಸುತ್ತದೆ.

ಆ ಬಳಿಕ ಇಂಟರ್ನೆಟ್ ಸಂಪರ್ಕ ಮರಳಿ ಸಾಧ್ಯವಾದ ಸಂದರ್ಭದಲ್ಲಿ, ಇಲ್ಲಿ ಸ್ಥಗಿತಗೊಂಡಿರುವ ಪಾವತಿ ಮಾಹಿತಿಗಳನ್ನು ಚಾಲನೆಗೊಳಿಸಿ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next