Advertisement

ಮಂಗಳೂರಿನ ಆಸ್ಪತ್ರೆಗಳನ್ನು ಕಾಸರಗೋಡಿನ ರೋಗಿಗಳಿಗೆ ಮೀಸಲು ಇಡಬಾರದು: ಮಿಥುನ್ ರೈ

05:07 PM Apr 11, 2020 | keerthan |

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಚಿಕಿತ್ಸೆ ಸಿಗದ ರೋಗಿಗಳಿಗೆ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ಅನುಮತಿ ನೀಡಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೃದಯ ಶ್ರೀಮಂತಿಕೆ ಮೆರೆದಿದೆ. ಆದರೆ ಮುಂದೆ ಯಾವುದೇ ಒತ್ತಡಕ್ಕೆ ಮಣಿಯದೆ ನಮ್ಮ ಜಿಲ್ಲೆಯ ಇನ್ನುಳಿದ ಖಾಸಗಿ ಆಸ್ಪತ್ರೆಯನ್ನು ಕೇರಳದ ರೋಗಿಗಳಿಗೆ ಮೀಸಲು ಇಡಬಾರದು ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಥುನ್ ರೈ, ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ ಸರಕಾರ ಮನವಿಗೆ ಸ್ಪಂದಿಸಿ ಖಾಸಗಿ ಆಸ್ಪತ್ರೆಯನ್ನು ಕೇರಳದ ರೋಗಿಗಳಿಗೆ ಚಿಕಿತ್ಸೆಗೆ ಅನುಮತಿ ನೀಡಿದೆ. ಕಾಸರಗೋಡು ಜನರಿಗೆ ತೋರಿದ ಮಾನವೀಯತೆಗೆ ವೈಯಕ್ತಿಕವಾಗಿ ಜಿಲ್ಲಾಡಳಿತಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ ಎಂದರು.

ನಮ್ಮ ಜಿಲ್ಲೆಯ, ತಾಲೂಕಿನ ಜನರು ನಮ್ಮ ಜಿಲ್ಲೆಯ ಆಸ್ಪತ್ರೆಗಳನ್ನು ನಂಬಿದವರು. ನಮ್ಮ ಜಿಲ್ಲೆಯ ಜನರ ಆರೋಗ್ಯ ಕ್ಷೇಮ ಕಾಪಾಡಬೇಕು. ಬಿಜೆಪಿಯ ಒತ್ತಡಕ್ಕೆ ಮಣಿದು ಕಾಸರಗೋಡಿನ ರೋಗಿಗಳಿಗೆ ಮೃದುಧೋರಣೆ ತೋರಿದರೆ ಜಿಲ್ಲೆಯ ಜನರ ಆರೋಗ್ಯ ಕಾಪಾಡುವಲ್ಲಿ ವಿಫಲವಾಗುತ್ತದೆ ಎಂದರು.

ಮಡಿಕೇರಿ‌ ಹಾಗೂ ಚಿಕ್ಕಮಗಳೂರು ಜನರು ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಯನ್ನು ನಂಬಿದವರು. ಕಾಸರಗೋಡಿನ ರೋಗಿಗಳು ಅಫಘಾತ ಮತ್ತು ತುರ್ತು ನೆಪದಲ್ಲಿ ಕೋವಿಡ್ ರೋಗಿಗಳು ಜಿಲ್ಲೆಗೆ ಪ್ರವೇಶ ಮಾಡಿದ ನಿರ್ದೇಶನಗಳು ಕಂಡು ಬಂದಿವೆ. ನಮ್ಮ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೈದ್ಯರಿಗೆ ಹಾಗೂ ನರ್ಸಗಳಿಗೆ ಕೋವಿಡ್ ಸೋಂಕು ಹರಡುವ ಲಕ್ಷಣ ಕಾಣುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next