ಆಳಂದ (ಕಲಬುರಗಿ): ರಾಜ್ಯದ ಹಲವು ಸಮುದಾಯಗಳಿಗೆ ಮೀಸಲಾತಿ ನೀಡುವಲ್ಲಿ ಹಿಂದೇಟು ಹಾಕುತ್ತಿರುವ ರಾಜ್ಯ ಸರಕಾರದ ವಿರುದ್ಧ ಶಾಸಕರು ಮುಂದಿನ ಬೆಳಗಾವಿ ಅ ಧಿವೇಶನದಲ್ಲಿ “ಮಾಡು ಇಲ್ಲವೇ ಮಡಿ’ ಇಲ್ಲವೇ “ಏಕ್ ಮಾರ್ ದೋ ತುಕಡಾ’ ಎನ್ನುವಂತೆ ಧ್ವನಿ ಎತ್ತಬೇಕಾಗಿದೆ ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸರಸಂಬಾ ಗ್ರಾಮದಲ್ಲಿ ಸಹಕಾರ ಸಂಘದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಪಂಚಮಸಾಲಿ, ವಾಲ್ಮೀಕಿ, ಕುರುಬ ಹೀಗೆ ಹಲವು ಸಮುದಾಯಗಳ ಜನರು ಮೀಸಲಾತಿಗಾಗಿ ನಡೆಸು ತ್ತಿರುವ ಹೋರಾಟದ ಬಗ್ಗೆ ಬೆಳಗಾವಿ ಅ ಧಿವೇಶನದಲ್ಲಿ ಧ್ವನಿ ಎತ್ತಲಾಗುವುದು. ಸಿಎಂ ಆಗಿ ಹನ್ನೆರಡು ಗಂಟೆಗಳಲ್ಲೇ ಮೀಸಲಾತಿ ನೀಡುತ್ತೇನೆ ಎಂದವರು ಇದುವರೆಗೂ ಕೊಟ್ಟಿಲ್ಲ ಎಂದರು.
ಅಧಿವೇಶನದಲ್ಲಿ ಮೀಸಲಾತಿ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಿ ಚುನಾವಣೆಯನ್ನು ಎದುರಿಸಬೇಕಾಗಿದೆ. ಇಲ್ಲವಾದಲ್ಲಿ ಹೋದಲ್ಲೆಲ್ಲ ಜನರ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂದರು.
ಯಾರಿಗೂ ಹೆದರುವುದಿಲ್ಲ
ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ. ನಿಷ್ಠುರತೆ ಮತ್ತು ಪ್ರಾಮಾಣಿಕತೆಯೇ ಬಂಡವಾಳ ವಾಗಿದೆ. ಹಲವರು ನನ್ನ ಮೇಲೆಯೂ ಸಿಬಿಐ, ಐಟಿ ರೇಡ್ ಮಾಡಿಸಲು ಪಕ್ಷದ ಒಳಗೆ ಹಾಗೂ ಹೊರಗೆ ಪ್ರಯತ್ನಿಸಿದ್ದರು. ಅದು ಅವರಿಗೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾದಾಗ ನೇರವಾಗಿ ಕೇಂದ್ರ ಸರಕಾರದ ವಿರುದ್ಧ ಗುಡುಗಿ ಪರಿಹಾರ ತಂದಿದ್ದೇನೆ. ನೇರವಾಗಿ ಮಾತನಾಡುವವರಿಗೆ ನೋಟಿಸ್‌ಗಳೆಲ್ಲ ಸಹಜ ಎಂದು ಹೇಳಿದರು.