ಬೆಂಗಳೂರು : ‘ಭಾರತೀಯ ಕ್ರಿಕೆಟ್ ತಂಡವು ಶೇ.70ರಷ್ಟು ಮೇಲ್ಜಾತಿಗಳಿಂದ ಕೂಡಿದೆ’ ಎಂದು ಹೇಳಿಕೆ ನೀಡಿರುವ ನಟ ಚೇತನ್ ಅಹಿಂಸಾ ಮತ್ತೆ ಸುದ್ದಿಯಾಗಿದ್ದಾರೆ.
ಭಾನುವಾರ ಚಾಮರಾಜನಗರದಲ್ಲಿ ‘ಮೀಸಲಾತಿ ಪ್ರಾತಿನಿಧ್ಯಕ್ಕಾಗಿಯೇ ಅಥವಾ ಆರ್ಥಿಕ ಉನ್ನತಿಗಾಗಿಯೇ?’ ಎಂಬ ವಿಷಯದ ಕುರಿತು ಮಾತನಾಡಿದ್ದೆ.ಮೀಸಲಾತಿಗಳು ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಒದಗಿಸಬೇಕು. ಈ ಮಹತ್ವದ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯ’ ಎಂದು ಚೇತನ್ ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಸೋಮವಾರ ಮತ್ತೆ ಟ್ವೀಟ್ ಮಾಡಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡವು ಶೇ.70ರಷ್ಟು ಮೇಲ್ಜಾತಿಗಳಿಂದ ಕೂಡಿದೆ. ಅಲ್ಲಿ ಎಸ್ ಟಿ, ಎಸ್ ಸಿ ಮೀಸಲಾತಿ ಕಲ್ಪಿಸಬೇಕು ಎಂದಿದ್ದರು.
‘ಭಾರತೀಯ ಕ್ರಿಕೆಟ್ ತಂಡವು ಶೇ.70ರಷ್ಟು ಮೇಲ್ಜಾತಿಗಳಿಂದ ಕೂಡಿದೆ!; ಅಲ್ಲಿಯೂ ಮೀಸಲಾತಿ ಜಾರಿಯಾದರೆ ತಂಡದ ಪ್ರದರ್ಶನ ಉತ್ತಮವಾಗಿರುತ್ತದೆ’ ಎಂದು ಭಾನುವಾರ ಟ್ವೀಟ್ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇದೆ ವೇಳೆ ಪಂಚಮಶಾಲಿ ಲಿಂಗಾಯತ 2ಎ ಮೀಸಲಾತಿಯ ಬೇಡಿಕೆ ಸ್ವಾರ್ಥದ ಬೇಡಿಕೆ ಎಂದು ಟ್ವೀಟ್ ಮಾಡುವ ಮೂಲಕ ಪಂಚಮಸಾಲಿ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮತ್ತೆ ಮತ್ತೆ ಹಲವು ವಿಚಾರಗಳ ಕುರಿತು ಪ್ರಸ್ತಾವಿಸಿ ನಟ ಚೇತನ್ ಚರ್ಚೆಗಳಿಗೆ ಆಹಾರವಾಗುತ್ತಿದ್ದಾರೆ.