Advertisement

ಉದ್ಯಾನ, ಮೈದಾನಕ್ಕೆ ಜಾಗ ಮೀಸಲು ಕಡ್ಡಾಯ

12:19 PM Nov 28, 2017 | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು, ನಗರದಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಉದ್ಯಾನ ಹಾಗೂ ಆಟದ ಮೈದಾನಕ್ಕೆ ಜಾಗ ಕಾಯ್ದಿರಿಸುವುದುನ್ನು “ಪರಿಷ್ಕೃತ ಮಹಾಯೋಜನೆ 2031′ ಕಡ್ಡಾಯಗೊಳಿಸುವ ಕುರಿತು ಪ್ರಸ್ತಾಪಿಸಲಾಗಿದೆ.

Advertisement

ನಗರದಲ್ಲಿನ ಹಸಿರು ವಲಯವನ್ನು ಹೆಚ್ಚಿಸುವ ಹಾಗೂ ಮಕ್ಕಳಿಗೆ ಆಟವಾಡಿಕೊಳ್ಳಲು ಮೈದಾನವಿರಬೇಕು ಎಂಬ ಉದ್ದೇಶದಿಂದ ನಗರದಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಹಾಗೂ 2 ಸಾವಿರ ಚದರ ಮೀಟರ್‌ ಮೀರಿದ ಅಪಾರ್ಟ್‌ಮೆಂಟ್‌ಗಳಲ್ಲಿ ಉದ್ಯಾನಕ್ಕಾಗಿ ಜಾಗ ಕಾಯ್ದಿರಿಸುವುದು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಮೂಲ ಸೌಕರ್ಯಗಳ ಅನುಷ್ಠಾನಕ್ಕಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಹೊಸ ಆವಿಷ್ಕಾರ ಸಹ ಪ್ರಸ್ತಾಪಿಸಲಾಗಿದೆ. 

ನಗರದಲ್ಲಿ ಖಾಲಿಯಿರುವ ಪ್ರದೇಶಗಳನ್ನು ಪರಿಗಣಿಸಿ 2031ಕ್ಕೆ ಅಂದಾಜಿಸಿರುವ ಜನಸಂಖ್ಯೆಗೆ ಜನಸಾಂದ್ರತೆಯನ್ನು ಪ್ರತಿ ಹೆಕ್ಟೇರ್‌ಗೆ 200 ಜನರ ಲೆಕ್ಕಾಚಾರದಲ್ಲಿ 80 ಚದರ ಕಿಲೋ ಮೀಟರ್‌ ಮಾತ್ರ ಹೆಚ್ಚುವರಿ ನಗರೀಕರಣಕ್ಕೆ ಅವಕಾಶ ನೀಡಲಾಗಿದೆ. ಈ ಹೆಚ್ಚುವರಿ ಪ್ರದೇಶದಲ್ಲಿ ಯಲಹಂಕ ವಾಯುಪಡೆ ನಿಲ್ದಾಣ, ರಕ್ಷಣಾ ಪ್ರದೇಶ, ಜಲಪ್ರದೇಶ (ಕೆರೆಗಳು), ಗ್ರಾಮಠಾಣಾ ಪ್ರದೇಶ, ಕಲ್ಲುಗಣಿಗಾರಿಕೆ ಪ್ರದೇಶಗಳು ಒಳಗೊಳ್ಳಲಿವೆ ಎಂದು ತಿಳಿಸಲಾಗಿದೆ.

ಇದರೊಂದಿಗೆ ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಲಾರಿ/ಟ್ರಕ್‌ ತಂಗುದಾಣಗಳು, ಹೆಚ್ಚುವರಿ ಅಂತರ್‌ ರಾಜ್ಯ ಬಸ್‌ ನಿಲ್ದಾಣಗಳು, ಮೂಲಭೂತಸೌಕರ್ಯಗಳಾದ ಘನತ್ಯಾಜ್ಯ ನಿರ್ವಹಣೆ, ವಿದ್ಯುತ್‌ ಪ್ರಸರಣಾ ಕೇಂದ್ರ, ಮಲಿನ ನೀರು ಸಂಸ್ಕರಣಾ ಘಟಕಗಳ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸೂಕ್ತ ಜಾಗಗಳನ್ನು ಕಾಯ್ದಿರಿಸಲಾಗಿರುವ ಕುರಿತು ಉಲ್ಲೇಖೀಸಲಾಗಿದೆ.

ವಸತಿ ಪ್ರದೇಶಗಳಲ್ಲಿ ಬರಬಹುದಾದ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ಅನುಮತಿಯ ಸಮಯದಲ್ಲಿ ರಸ್ತೆ ಅಗಲ ಮತ್ತು ನಿವೇಶನದ ವಿಸ್ತೀರ್ಣವನ್ನು ಪರಿಗಣಿಸಲು ನಿಯಮ ರೂಪಿಸಿದ್ದು, ಇದರಿಂದ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳ ದುಷ್ಪರಿಣಾಮ ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. 

Advertisement

ಬೆಂಗಳೂರು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಸಹಯೋಗದೊಂದಿಗೆ ಪ್ರವಾಹ ಅಧ್ಯಯನ ರೂಪಿಸಿ ಯೋಜನಾ ಪ್ರದೇಶಗಳಲ್ಲಿನ ರಾಜಕಾಲುವೆ, ಪ್ರಾಥಮಿಕ, ಮಾಧ್ಯಮ ಹಾಗೂ ಕಿರು ಕಾಲುವೆಗಳ ವರ್ಗೀಕರಿಸಿ ಅವುಗಳಿಗೆ ಹಸಿರು ನ್ಯಾಯಾಧೀಕರಣ ಮಂಡಳಿ ಆದೇಶಿಸಿದಂತೆ ಬಫ‌ರ್‌ ವಲಯ ಕಾಯ್ದಿರಿಸುವ ಕುರಿತು ಪ್ರಸ್ತಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next